ADVERTISEMENT

ಲೋಕಸಭಾ ಚುನಾವಣೆ: ದೆಹಲಿಯಲ್ಲಿ ಎಎಪಿಯ ವಾರ್ ರೂಮ್ ಉದ್ಘಾಟನೆ​

ಪಿಟಿಐ
Published 27 ಏಪ್ರಿಲ್ 2024, 12:33 IST
Last Updated 27 ಏಪ್ರಿಲ್ 2024, 12:33 IST
<div class="paragraphs"><p>ಎಎಪಿಯ ವಾರ್ ರೂಮ್ ಉದ್ಘಾಟನೆ​</p></div>

ಎಎಪಿಯ ವಾರ್ ರೂಮ್ ಉದ್ಘಾಟನೆ​

   

(ಪಿಟಿಐ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆಗಾಗಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸ್ಥಾಪಿಸಿರುವ ವಾರ್ ರೂಮ್ ಅನ್ನು ಪಕ್ಷದ ಹಿರಿಯ ನಾಯಕ ಗೋಪಾಲ್ ರಾಯ್ ಅವರು ಶನಿವಾರ ಉದ್ಘಾಟಿಸಿದರು.

ADVERTISEMENT

ದೀನ ದಯಾಳು ಉಪಾಧ್ಯಾಯ(ಡಿಡಿಯು) ಮಾರ್ಗದಲ್ಲಿರುವ ಎಎಪಿ ಪ್ರಧಾನ ಕಚೇರಿಯಲ್ಲಿರುವ ವಾರ್ ರೂಮ್ ವಿವಿಧ ಉದ್ದೇಶಗಳಿಗಾಗಿ 12 ತಂಡಗಳನ್ನು ಹೊಂದಿರಲಿದೆ ಎಂದು ರಾಯ್ ಹೇಳಿದ್ದಾರೆ.

ದೆಹಲಿಯ ಏಳು ಲೋಕಸಭಾ ಸ್ಥಾನಗಳ ಪೈಕಿ ನಾಲ್ಕರಲ್ಲಿ ಎಎಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ ಮೂರು ಸ್ಥಾನಗಳಲ್ಲಿ ಇಂಡಿಯಾ ಕೂಟದ ಭಾಗವಾದ ಕಾಂಗ್ರೆಸ್ ಸ್ಪರ್ಧಿಸುತ್ತಿದೆ.

ಪೂರ್ವ ದೆಹಲಿ , ದಕ್ಷಿಣ ದೆಹಲಿ , ಪಶ್ಚಿಮ ದೆಹಲಿ ಮತ್ತು ನವದೆಹಲಿಯಲ್ಲಿ ಎಎಪಿ ಸ್ಪರ್ಧಿಸುತ್ತಿದ್ದರೆ, ಈಶಾನ್ಯ ದೆಹಲಿ, ವಾಯವ್ಯ ದೆಹಲಿ ಮತ್ತು ಚಾಂದಿನಿ ಚೌಕ್‌ನಿಂದ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ಈ ಏಳು ಕ್ಷೇತ್ರಗಳಿಗೆ ಮೇ 25 ರಂದು ಮತದಾನ ನಡೆಯಲಿದೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.