ADVERTISEMENT

ಕರ್ನಾಟಕದಲ್ಲಿ ಪಿಎಫ್‌ಐ ಜತೆ ಬಿಜೆಪಿ ಒಪ್ಪಂದ: ದಿಗ್ವಿಜಯ್ ಸಿಂಗ್

ಪಿಟಿಐ
Published 27 ಏಪ್ರಿಲ್ 2024, 13:09 IST
Last Updated 27 ಏಪ್ರಿಲ್ 2024, 13:09 IST
<div class="paragraphs"><p>ದಿಗ್ವಿಜಯ್ ಸಿಂಗ್</p></div>

ದಿಗ್ವಿಜಯ್ ಸಿಂಗ್

   

ಭೋಪಾಲ್: ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‌ಐ) ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನುವ ಗೃಹ ಸಚಿವ ಅಮಿತ್ ಶಾ ಅವರ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ‘ಬಿಜೆಪಿಯು ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಿಎಫ್‌ಐನ ರಾಜಕೀಯ ಘಟಕದೊಂದಿಗೆ ಒಪ್ಪಂದ ಮಾಡಿಕೊಂಡು ಚುನಾವಣೆ ಎದುರಿಸಿತ್ತು’ ಎಂದು ಶನಿವಾರ ಆರೋಪಿಸಿದ್ದಾರೆ.

ಸಿಂಗ್ ಮಧ್ಯಪ್ರದೇಶದ ರಾಜಗಢ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ’ಗೆ (ಸಿಮಿ) ಸಂಬಂಧಿಸಿದ ಅಮಿತ್ ಶಾ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಾನು ರಾಜ್ಯದ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗ ಸಿಮಿಯನ್ನು ನಿಷೇಧಿಸಿದ್ದಾಗಿ ತಿಳಿಸಿದರು.

ADVERTISEMENT

ಕ್ಷೇತ್ರದ ವ್ಯಾಪ್ತಿಯ ಖಿಲ್ಚಿಪುರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಮಾಡುವ ವೇಳೆ ಅಮಿತ್ ಶಾ ದಿಗ್ವಿಜಯ ಸಿಂಗ್ ವಿರುದ್ಧ ಹಲವು ಆರೋಪ ಮಾಡಿದ್ದರು. ಅದಕ್ಕೆ ‘ಎಕ್ಸ್‌’ ವೇದಿಕೆಯಲ್ಲಿ ಉತ್ತರಿಸಿರುವ ಸಿಂಗ್, ಶಾ ಅವರು 17 ಬಾರಿ ತನ್ನ ಹೆಸರು ಪ್ರಸ್ತಾಪಿಸಿದ್ದಾರೆ ಮತ್ತು ಎಂಟು ಬಾರಿ ತನ್ನ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.