ಬುಧವಾರ, ನವೆಂಬರ್ 11, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಬುದ್ಧಿಯಿಂದ ಕೆಲಸ ಮಾಡುವವರಷ್ಟೇ ಶಕ್ತಿಯಿಂದ ಕೆಲಸ ಮಾಡುವವರೂ ದೇಶದ ಬೆಳವಣಿಗೆಗೆ ಅತ್ಯವಶ್ಯಕ.
--ಎಮರ್ಸನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಕರ್ನಾಟಕ ದರ್ಶನ
ಸಾಪ್ತಾಹಿಕ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಕೃಷಿ
ಮೆಟ್ರೊ ಗುರುವಾರ
ಮೆಟ್ರೊ ಶನಿವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ತಿಹಾರ್ ಜೈಲಿಗೆ ‘ಮರಳಿದ’ ಮನುಶರ್ಮ
ಪೆರೋಲ್‌ನಲ್ಲಿ ಮನೆಗೆ ತೆರಳಿದ್ದ ‘ಮಾಡೆಲ್ ಜೆಸ್ಸಿಕಾಲಾಲ್ ಹತ್ಯಾ ಪ್ರಕರಣ(1999)’ದ ಆರೋಪಿ ಮನು ಶರ್ಮಾ ಮಂಗಳವಾರ ಅವಧಿಗೆ ಮುನ್ನ ತಿಹಾರ್ ಜೈಲಿಗೆ ವಾಪಸ್ಸಾಗಿದ್ದು, ವಿವಾದವಾಗಿದ್ದ ‘ಪೆರೋಲ್ ಪ್ರಕರಣ’ ಹೊಸ ತಿರುವು ಪಡೆದಿದೆ.


ನವದೆಹಲಿ(ಐಎಎನ್‌ಎಸ್):  ತಾಯಿಗೆ ತೀವ್ರ ಅಸ್ವಾಸ್ಥ್ಯ ಹಾಗೂ ಕೌಟುಂಬಿಕ ತುರ್ತು ವ್ಯವಹಾರಗಳ ಕಾರಣಗಳಿಗಾಗಿ ಮನುಶರ್ಮಗೆ ಜೈಲಿನಿಂದ ಪರೋಲ್ ಮೇಲೆ ಮನೆಗೆ ತೆರಳುವ ಅವಕಾಶ ನೀಡಲಾಗಿತ್ತು. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 22ರ ವರೆಗೆ ನಿಗದಿಯಾಗಿದ್ದ ಪರೋಲ್‌ಅನ್ನು ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್  ಅವರ ವಿನಂತಿಯಂತೆ ಮತ್ತೆ 30 ದಿನಕ್ಕೆ ವಿಸ್ತರಿಸಲಾಗಿತ್ತು.

ಕಾಂಗ್ರೆಸ್‌ನ ವರ್ಚಸ್ವಿ ರಾಜಕಾರಣಿ ಹರಿಯಾಣದ ವಿನೋದ್ ಶರ್ಮಾ  ಅವರ  ಪುತ್ರನಾಗಿರುವ ಮನುಶರ್ಮ ‘ಕೌಟುಂಬಿಕ ನೆಪ’ಹೇಳಿ ಜೈಲಿನಿಂದ ಹೊರಬಂದಿದ್ದರೂ ನವದೆಹಲಿಯ ಕೆಲವು ಹೊಟೇಲ್, ಬಾರ್‌ಗಳಲ್ಲಿ ಠಳಾಯಿಸುತ್ತಿದ್ದುದು,  ‘ರೋಗಿ’ ಎಂದು ಹೇಳಲಾಗಿದ್ದ ತಾಯಿ ಶಕ್ತಿರಾಣಿ  ಕ್ರಿಕೆಟ್ ಸಂಬಂಧಿ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಾಗ ಪ್ರಕರಣ ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿತ್ತು.

ಶಕ್ತಿರಾಣಿ ಅವರು  ತಮ್ಮ ಕುಟುಂಬಕ್ಕೆ ಸೇರಿದ್ದ ಪಿಕಾಡಿಲಿ ಹೊಟೇಲ್‌ನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕ್ರಿಕೆಟ್‌ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಮಗ ಮನುಶರ್ಮ ದೆಹಲಿಯ ಅಶೋಕ್ ಮತ್ತು ಸಾಮ್ರಾಟ್ ಹೊಟೇಲ್-ಬಾರ್‌ಗಳಲ್ಲಿ ವಿಹಾರ ನಡೆಸುತ್ತಿದ್ದುದು  ಪುರಾವೆ ಸಹಿತ ಬಹಿರಂಗವಾಯಿತು.

click here
ಇದು ಶೀಲಾ ನೇತೃತ್ವದ ದೆಹಲಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಮನುಶರ್ಮ ಕುರಿತು ವರದಿ ನೀಡಲು ದೆಹಲಿ ಪೊಲೀಸರಿಗೆ ಆದೇಶಿಸಲಾಗಿತ್ತು. ಈ ಹಿನ್ನೆಲೆಯಲಿ ವಿವಾದ ಮತ್ತಷ್ಟು ಬಿಸಿಯೇರುವ ಮೊದಲು ಶರ್ಮ ಅವಧಿಗೆ ಮುನ್ನವೇ ಮತ್ತೆ ಜೈಲಿಗೆ ಹಾಜರಾಗಿದ್ದಾರೆ ಎನ್ನಲಾಗಿದೆ.

ಜೆಸ್ಸಿಕಾ ಅಕ್ಕ ಸಬ್ರೀನಾ ಲಾಲ್ ‘ವಿವಾದಗಳಿಂದ ತಲೆಮರೆಸಿಕೊಳ್ಳಲು ಮನು ವಾಪಸ್ಸಾಗಿರುವ ನಾಟಕ ಆಡಿದ್ದಾರೆ’ ಎಂದು ಟೀಕಿಸಿದ್ದಾರೆ.

ಇತರ ಸುದ್ದಿಗಳು
ಪ್ರಬಲವಾಗುತ್ತಿರುವ ಚಂಡಮಾರುತ
7 ರಾಜ್ಯಗಳಲ್ಲಿ ಉಪಚುನಾವಣೆ: ಕಾಂಗ್ರೆಸ್ ‘ವಿಜಯ ಪರ್ವ’
ತಿಹಾರ್ ಜೈಲಿಗೆ ‘ಮರಳಿದ’ ಮನುಶರ್ಮ
ತಕ್ಷಣ ಎಂಎನ್‌ಎಸ್ ನಿಷೇಧಿಸಲು ಆಗ್ರಹ
ಸುಸೂತ್ರ ನಡೆದ ಪ್ರತಿಜ್ಞಾ ಸ್ವೀಕಾರ
‘ತಂದೂರಿ’ ಮಾಡುತ್ತೇವೆ
ಅಜ್ಮಿ ಬಂಧನಕ್ಕೆ ಆಗ್ರಹ:ಕಲಾಪ ಅಸ್ತವ್ಯಸ್ತ
ಆಂಧ್ರ:ಅಕ್ರಮ ಗಣಿ ತನಿಖೆಗೆ ಸಮಿತಿ
ತಮಿಳುನಾಡು: ಮಳೆಗೆ ಸತ್ತವರ ಸಂಖ್ಯೆ 68ಕ್ಕೆ
ಹೆಡ್ಲಿ ಮೊಬೈಲ್ ನಂಬರ್ ಪತ್ತೆ
482 ಗಣಿ ಪರವಾನಗಿ ಅಮಾನತು
ದೇಶ ಸುತ್ತಿ: ತಾಣ ನೋಡಿ
ಬಂಧನಕ್ಕೆ ಆಗ್ರಹ
ಹವಾಮಾನ ವೈಪರೀತ್ಯ:
ವಾಪಸು ಕರೆಸುವ ಹಕ್ಕೂ ಬೇಕು
ಜಾರಿದ ವಿಮಾನ
ತಪ್ಪಿದ ಅಪಘಾತ
ಭೋಪಾಲ್ ದುರಂತಕ್ಕೆ ಇಪ್ಪತ್ತೈದು ವರ್ಷ...
7 ರಾಜ್ಯಗಳಲ್ಲಿ ಉಪಚುನಾವಣೆ: ಇವರು ಹೀಗಂತಾರೆ...
ಕರ್ಕರೆ ಜಾಕೆಟ್ ನಾಪತ್ತೆ
ಪೊಲೀಸರಿಗೆ ನಕ್ಸಲ್ ಕಮಾಂಡರ್ ಬಲಿ
ನೀಲಗಿರಿ: ಭೂಕುಸಿತ27 ಸಾವು
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618