ಜೀವನದಲ್ಲಿ ಗೆಲುವು ಸಾಧಿಸು, ಪ್ರೀತಿ ನಿನ್ನ ಹಿಂದೆ ಬರುತ್ತದೆ ಎಂಬ ಸಂದೇಶದೊಂದಿಗೆ ಕಾಲ್ಗೆಜ್ಜೆ ಚಿತ್ರ ಬರುತ್ತಿದೆ. ಹಳ್ಳಿಯಿಂದ ಪಟ್ಟಣಕ್ಕೆ ಬಂದ ನಾಯಕ-ನಾಯಕಿ ಇವರಿಬ್ಬರ ನಡುವೆ ನಡೆಯುವ ಪ್ರೇಮಕಥೆಯೇ ಕಾಲ್ಗೆಜ್ಜೆಯ ಚಿತ್ರಕಥೆ. ಭದ್ರಾವತಿಯಲ್ಲಿ ಈಗಾಗಲೇ ಸಾಕಷ್ಟು ಭಾಗದ ಚಿತ್ರೀಕರಣ ನಡೆಸಿರುವ ಚಿತ್ರತಂಡ ಇದೀಗ ಕುಂದಾಪುರಕ್ಕೆ ಪ್ರಯಾಣ ಬೆಳೆಸಿದೆ. ಕುಂದಾಪುರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹಾಡು ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು 8 ದಿನಗಳ ಕಾಲ ಚಿತ್ರೀಕರಿಸಲಿದೆ. ಎಸ್.ಬಂಗಾರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ರಚಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಉದ್ಯಮಿ ನಾಗಭೂಷಣ್ ನಿರ್ಮಿಸುತ್ತಿರುವ ಚಿತ್ರಕ್ಕೆ ಗಂಧರ್ವ ಸಂಗೀತವಿದೆ. ವಿಶ್ವಾಸ್, ರೂಪಿಕಾ ರಂಗಾಯಣ ರಘು, ತಾರಾ, ಅನಂತ್‌ನಾಗ್ ತಾರಾಗಣದಲ್ಲಿದ್ದಾರೆ.