‘ರಣಬೀರ್ ಕಪೂರ್, ದೀಪಿಕಾ ಪಡುಕೋಣೆಗೆ ಕೈಕೊಟ್ಟ’ ಎಂಬ ಸುದ್ದಿ ಬಾಲಿವುಡ್‌ನಾದ್ಯಂತ ಹಾರಾಡುತ್ತಿದೆ.
ಇತ್ತೀಚೆಗೆ ದೀಪಿಕಾಳೊಂದಿಗೆ ಕಾಣಿಸಿಕೊಳ್ಳದ ರಣಬೀರ್, ದೀಪಿಕಾಗೆ ಪ್ರಾಮುಖ್ಯತೆಯನ್ನೂ ನೀಡುತ್ತಿಲ್ಲವಂತೆ. ಈ ಮುಂಚೆ ಸೋನಮ್ ಕಪೂರ್ ಜೊತೆಗಿನ ಸಂಬಂಧ ಕಡಿದುಕೊಂಡಾಗಲೂ ಅವನ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಭಾವ ಇರಲಿಲ್ಲ. ಈಗಲೂ ಅದರ ಸುಳಿವಿಲ್ಲ ಎನ್ನುತ್ತಿದೆ ಬಾಲಿವುಡ್.
ಆದರೆ ರಣಬೀರ್‌ನ ಚಂಚಲ ಮನಸ್ಸಿಗೆ ಕತ್ರೀನಾ ಕೈಫ್ ಕಾರಣವಲ್ಲ. ‘ರಾಕೆಟ್ ಸಿಂಗ್’ ಚಿತ್ರದ ನಾಯಕಿ ಶಹನಾಜ್ ಪದಮ್‌ಸೀ ರಣಬೀರ್‌ನ ಹೊಸ ಹುಡುಗಿಯಂತೆ.