ಶನಿವಾರ, ನವೆಂಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು, ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ಅಂತಹವರ ಬದುಕು ನಿಜಕ್ಕೂ ಸಾರ್ಥಕ.
--ಆಚಾರ್ಯ ವಿನೋಭಾ ಭಾವೆ.
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಕೃಷಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಲಕ್ಷಾಂತರ ಮೌಲ್ಯದ ಆಭರಣ ವಶ
ಪ್ರಜಾವಾಣಿ ವಾರ್ತೆ
ಕೇಂದ್ರ ಅಪರಾಧ ವಿಭಾಗದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ಇಪ್ಪತ್ತು ಲಕ್ಷ ರೂಪಾಯಿ ಮೌಲ್ಯದ 38 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.


ಬೆಂಗಳೂರು: ಪ್ರಕರಣಗಳ ಪತ್ತೆ ಮತ್ತು ವಸ್ತುಗಳ ವಶಪಡಿಸಿಕೊಳ್ಳುವ ಕಾರ್ಯಾಚರಣೆ ಮುಂದುವರಿಸಿರುವ ನಗರ ಪೊಲೀಸರು ವಿವಿಧ ಪ್ರಕರಣಗಳನ್ನು ಭೇದಿಸಿ 95 ಲಕ್ಷ ರೂಪಾಯಿ ಮೌಲ್ಯದ ವಾಹನ ಮತ್ತು ಐವತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಒಟ್ಟು 73 ಬೈಕ್ ಮತ್ತು ಹತ್ತು ಕಾರುಗಳನ್ನು ಜಫ್ತಿ ಮಾಡಿದ್ದಾರೆ.

ಕೇಂದ್ರ ಅಪರಾಧ ವಿಭಾಗದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ಇಪ್ಪತ್ತು ಲಕ್ಷ ರೂಪಾಯಿ ಮೌಲ್ಯದ 38 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಗೋವಿಂದರಾಜನಗರದ ಎಂ.ಶಿವರಾಜ್ (19), ಕಾಡುಗೋಡಿಯ ಎಂ. ನಾರಾಯಣಸ್ವಾಮಿ (46), ಶಿವಕುಮಾರ್ (39), ಕೋಲಾರದ ಮಂಜಲಿ ಗ್ರಾಮದ ಸುರೇಶ (28), ಕಾಮಾಕ್ಷಿಪಾಳ್ಯದ ಶ್ರೀರಾಮ್‌ಪುರ ಜೋಪಡಿಯ ರವಿಕುಮಾರ್ (22) ಮತ್ತು ಅನಿಲ್ ಕುಮಾರ್ (28) ಬಂಧಿತರು.

ಮನೆ ಮುಂದೆ ನಿಲ್ಲಿಸಿರುತ್ತಿದ್ದ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿಯುತ್ತಿದ್ದ ಆರೋಪಿಗಳು ಅವುಗಳನ್ನು ತುಮಕೂರು, ನೆಲಮಂಗಲ, ಹುಲಿಯೂರು ಮುಂತಾದೆಡೆ ಮಾರಾಟ ಮಾಡುತ್ತಿದ್ದರು. ಕಾಮಾಕ್ಷಿಪಾಳ್ಯ, ಪೀಣ್ಯ, ಯಲಹಂಕ ಮುಂತಾದ ಬಡಾವಣೆಗಳಲ್ಲಿ ಅವರು ಕಳವು ಮಾಡಿದ್ದಾರೆ ಎಂದು ಇನ್ಸ್‌ಪೆಕ್ಟರ್ ಎಚ್. ಸಿದ್ದಪ್ಪ ತಿಳಿಸಿದ್ದಾರೆ.

ಅಪರಾಧ ವಿಭಾಗದ ಡಿಸಿಪಿ ಎಸ್.ಎಸ್ ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ಎಸಿಪಿ ಎಚ್.ಆರ್ ಮಹಾದೇವಯ್ಯ, ಇನ್ಸ್‌ಪೆಕ್ಟರ್‌ಗಳಾದ ಸಿದ್ದಪ್ಪ, ಆರ್. ಮಲ್ಲಿಕಾರ್ಜುನಯ್ಯ, ಯಶವಂತ್ ಸಾವರ್ಕರ್, ಎಸ್‌ಐ ಡಿ. ಹನುಮಂತಯ್ಯ ಮತ್ತು ಮುಖ್ಯ ಪೇದೆ ರಾಜಣ್ಣ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ಹೆಣ್ಣೂರು: ಜಯನಗರದ ಆರನೇ ಬ್ಲಾಕ್‌ನ ಗೋವಿಂದೇಗೌಡ (50), ಹೆಬ್ಬಾಳದ ಭದ್ರಪ್ಪಲೇಔಟ್‌ನ ಬಾಲಕೃಷ್ಣ (50) ಮತ್ತು ಟಿ. ದಾಸರಹಳ್ಳಿಯ ಕಾಳಹಸ್ತಿನಗರದ ಪುನೀತ್ ಕುಮಾರ್ (50) ಎಂಬುವರನ್ನು ಬಂಧಿಸಿ ಇಪ್ಪತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್ ಎನ್. ಹನುಮಂತರಾಯ ತಿಳಿಸಿದ್ದಾರೆ. ಇವುಗಳ ಮೌಲ್ಯ 6.72 ಲಕ್ಷ ರೂಪಾಯಿ.

ಮೈಕೋಲೇಔಟ್: ದೇವರಜೀವನಹಳ್ಳಿಯ ಇಮ್ತಿಯಾಜ್ (33) ಎಂಬಾತನನ್ನು ಬಂಧಿಸಿರುವ ಮೈಕೋಲೇಔಟ್ ಪೊಲೀಸರು 25 ಲಕ್ಷ ರೂಪಾಯಿ ಮೌಲ್ಯದ 1.50 ಕೆ.ಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹತ್ತು ವರ್ಷಗಳಿಂದ ಕಳವು ಮಾಡುತ್ತಿರುವ ಆರೋಪಿ ಹಲವು ಪ್ರಕರಣಗಳಲ್ಲಿ ಬಂಧಿತನಾಗಿ ಬಿಡುಗಡೆಯಾಗಿದ್ದ. ಈತನ ಬಂಧನದಿಂದ ಮೈಕೋಲೇಔಟ್ ಠಾಣೆಯಲ್ಲಿ ನಡೆದಿದ್ದ ಹತ್ತೊಂಬತ್ತು ಕನ್ನಕಳವು ಪ್ರಕರಣ ಮತ್ತು ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಪ್ರಕರಣ ಬಗೆಹರಿದಿವೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಬಿ.ಎನ್.ಎಸ್ ರೆಡ್ಡಿ ಹೇಳಿದ್ದಾರೆ.

ಕಾಡುಗೊಂಡನಹಳ್ಳಿ: ಸಾರ್ವಜನಿಕರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ವಿನೋಬನಗರದ ವಹೀದ್ ಖಾನ್ (27) ಎಂಬಾತನನ್ನು ಬಂಧಿಸಿರುವ ಕಾಡುಗೊಂಡನಹಳ್ಳಿ ಪೊಲೀಸರು ಸ್ವಯಂ ಚಾಲಿತ ಪಿಸ್ತೂಲ್ ಮತ್ತು ಮೂರು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಮೇಲೆ ಕೊಲೆ ಯತ್ನ, ಹಲ್ಲೆ ಮುಂತಾದ ಪ್ರಕರಣಗಳಿವೆ. ಕಾಡುಗೊಂಡನಹಳ್ಳಿಯಲ್ಲಿ ನಡೆದ ಆನಂದ ಎಂಬಾತನ ಕೊಲೆ ಪ್ರಕರಣದಲ್ಲಿ ವಹೀದ್ ಪ್ರಮುಖ ಆರೋಪಿ ಎಂದು ಇನ್ಸ್‌ಪೆಕ್ಟರ್ ಟಿ. ರಂಗಪ್ಪ ಮಾಹಿತಿ ನೀಡಿದ್ದಾರೆ.

ಇತರ ಸುದ್ದಿಗಳು
ನಗರಾಭಿವೃದ್ಧಿ ಕರಡು ನೀತಿ ಬಿಡುಗಡೆ
ಏಳು ಮಂದಿ ಅಂತರರಾಜ್ಯ ಕಳ್ಳರ ಬಂಧನ; 12 ಚಿನ್ನದ ಸರ ವಶ
ರಾಜಭವನದ ಎದುರು ಪ್ರತಿಭಟನೆ
ಲಕ್ಷಾಂತರ ಮೌಲ್ಯದ ಆಭರಣ ವಶ
ರೇಣುಕಾಚಾರ್ಯಗೆ ಜಾಮೀನು
ಅಪಸ್ಮಾರ ದಾಖಲೆಗಳ ವಸ್ತು ಪ್ರದರ್ಶನ
ವಿಶ್ವಕರ್ಮ ಸಮುದಾಯಕ್ಕೆ ರಾಜ್ಯಪಾಲರ ಕರೆ
ಮಧುಮೇಹ ಜಾಗೃತಿ ಶಿಬಿರ
ಪ್ರಿಯಕರನ ಮದುವೆ ನಿಲ್ಲಿಸಲು ವಿಫಲ ಯತ್ನ
ಸೈಲೆಂಟ್ ಕಿಲ್ಲರ್ ಆಗುತ್ತಿರುವ ಮಧುಮೇಹ
ಸಾರಿಗೆ ಸೇವೆಗೆ ‘ಅಂಬಾರಿ ಸ್ಲೀಪರ್’ ಸೇರ್ಪಡೆ
ನಿರ್ದಾಕ್ಷಿಣ್ಯ ಕ್ರಮ: ಸಚಿವ ಅಶೋಕ್
ನಾಡು, ನುಡಿಯ ಋಣ ತೀರಿಸಿ: ಹಂಪನಾ
ಸರ್ಕಾರಿ ಸವಲತ್ತು: ವಿಶ್ವ ಕರ್ಮರಿಗೆ ಸಲಹೆ
ರಕ್ತದಾನ, ನೇತ್ರದಾನ ಜಾಗೃತಿ ರ್ಯಾಲಿ
ಸುಟ್ಟ ಗಾಯಗಳಿಂದ ಮಹಿಳೆ ಸಾವು
ಕೆರೆಗೆ ಬಂದ ದುರ್ಗತಿ
ಉದ್ಯೋಗ ಖಾತ್ರಿ ಯೋಜನೆ: ಸಚಿವ ಬಚ್ಚೇಗೌಡ ಸೂಚನೆ
ರಸ್ತೆಯೋ? ಕೆಸರು ಗುಂಡಿಗಳೋ...
ಕಾಂಗ್ರೆಸ್ ಸದಸ್ಯತ್ವ ನೋಂದಣೆ
30 ಲಕ್ಷ ಮೌಲ್ಯದ ಕೆಟಮಿನ್ ವಶ
ನಿಲ್ಲದ ಒತ್ತುವರಿ ತೆರವು ಕಾರ್ಯಾಚರಣೆ
ರ್ಯಾಗಿಂಗ್: 3 ವಿದ್ಯಾರ್ಥಿಗಳಿಗೆ ಶಿಕ್ಷೆ
ಶಾಸಕರ ‘ಕಣ್ಮರೆ’ ತನಿಖೆಗೆ ಆಗ್ರಹ
ಪೇಪರ್ ನೋಟಿಸ್‌ಗೆ ‘ಟಾಟಾ’
ವಲಸಿಗರಿಗೆ ಗುರುತಿನ ಚೀಟಿ-ವಿರೋಧ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618