ಶನಿವಾರ, ನವೆಂಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು, ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ಅಂತಹವರ ಬದುಕು ನಿಜಕ್ಕೂ ಸಾರ್ಥಕ.
--ಆಚಾರ್ಯ ವಿನೋಭಾ ಭಾವೆ.
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಕೃಷಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಕಲ್ಯಾಣಮಂಟಪದಲ್ಲಿ ಸಿನಿಮೀಯ ಘಟನೆ
ಪ್ರಿಯಕರನ ಮದುವೆ ನಿಲ್ಲಿಸಲು ವಿಫಲ ಯತ್ನ
ಪ್ರಜಾವಾಣಿ ವಾರ್ತೆ
ನ್ಯಾಯ ಕೇಳಲು ಹೋದ ಯುವತಿ ಪ್ರಿಯಾಂಕ ಮತ್ತು ಆಕೆಯ ಕುಟುಂಬದವರನ್ನು ವರ ಆನಂದ್‌ನ ಸಂಬಂಧಿಕರು ಅಮಾನವೀಯವಾಗಿ ಥಳಿಸಿದರು. ಇಷ್ಟೆಲ್ಲ ಗೊಂದಲಗಳ ಮಧ್ಯೆಯೂ ಆನಂದ್ ವಿವಾಹ ನೆರವೇರಿತು.


ಬೆಂಗಳೂರು: ಪ್ರೀತಿಸಿ ಮೋಸ ಮಾಡಿದ ಯುವಕ ಬೇರೊಬ್ಬ ಯುವತಿಯ ಜತೆ ವಿವಾಹವಾಗುತ್ತಿದ್ದಾನೆ ಎಂದು ಆರೋಪಿಸಿದ ಯುವತಿ ವಿವಾಹ ಸಮಾರಂಭ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ನುಗ್ಗಿ ಗಲಾಟೆ ಮಾಡಿದ ಘಟನೆ ಬೆಂಗಳೂರಿನ ರಾಜಾಜಿನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಿತು.

ನ್ಯಾಯ ಕೇಳಲು ಹೋದ ಯುವತಿ ಪ್ರಿಯಾಂಕ ಮತ್ತು ಆಕೆಯ ಕುಟುಂಬದವರನ್ನು ವರ ಆನಂದ್‌ನ ಸಂಬಂಧಿಕರು ಅಮಾನವೀಯವಾಗಿ ಥಳಿಸಿದರು. ಇಷ್ಟೆಲ್ಲ ಗೊಂದಲಗಳ ಮಧ್ಯೆಯೂ ಆನಂದ್ ವಿವಾಹ ನೆರವೇರಿತು.

ನಂದಿನಿ ಲೇಔಟ್‌ನ ಸರಸ್ವತಿನಗರದ ನಿವಾಸಿ ಪ್ರಿಯಾಂಕ ಅವರು ಎಂಬಿಎ ಓದುತ್ತಿದ್ದಾರೆ. ಅವರ ಎದುರು ಮನೆಯ ನಿವಾಸಿಯೇ ಆದ ಆನಂದ್ ಜತೆ ಅವರಿಗೆ ಪ್ರೇಮಾಂಕುರವಾಗಿತ್ತು. ಪರಸ್ಪರರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆನಂದ್ ಬೇರೊಬ್ಬ ಯುವತಿಯ ಜತೆ ವಿವಾಹ ಆಗುತ್ತಿರುವ ವಿಷಯ ತಿಳಿದ ಪ್ರಿಯಾಂಕ ಅವರು ಅಕ್ಟೋಬರ್ 30ರಂದು ನಂದಿನಿಲೇಔಟ್ ಠಾಣೆಗೆ ದೂರು ನೀಡಿದ್ದರು. ಆದರೂ ಪ್ರಯೋಜನ ಆಗಿರಲಿಲ್ಲ.

ಬೆಳಿಗ್ಗೆ 8.15ಕ್ಕೆ ಮಹೂರ್ತ ನಿಗದಿಯಾಗಿತ್ತು. ಬೆಳಿಗ್ಗೆಯೇ ಕಲ್ಯಾಣ ಮಂಟಪಕ್ಕೆ ಬಂದ ಪ್ರಿಯಾಂಕ, ಅವರ  ಸಹೋದರಿಯರು ಮತ್ತಿತರರು ವಿವಾಹ ನಿಲ್ಲಿಸುವಂತೆ ಮನವಿ ಮಾಡಿದರು. ಆದರೆ ಆನಂದ್ ಅವರ ಸಂಬಂಧಿಕರು ಎಲ್ಲರ ಮೇಲೆ ಹಲ್ಲೆ ಮಾಡಿ ಹೊರಗೆ ತಳ್ಳಿದರು. ಗಲಾಟೆ ಮಧ್ಯೆಯೇ ಆನಂದ್ ವಧುವಿಗೆ ತಾಳಿ ಕಟ್ಟಿದರು. ‘ಕಾಲೇಜಿನ ಬಳಿ ಬರುತ್ತಿದ್ದ ಆನಂದ್ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆತನನ್ನು ನಂಬಿದ ನಾನು ಪ್ರೀತಿಸಲು ಆರಂಭಿಸಿದೆ. ನಾಲ್ಕು ವರ್ಷದಿಂದ ಪರಸ್ಪರರು ಪ್ರೀತಿಸುತ್ತಿದ್ದೇವೆ.

ಇಬ್ಬರ ಜಾತಿ ಬೇರೆ ಆದ್ದರಿಂದ ಮನೆಯಲ್ಲಿ ಮದುವೆಗೆ ಒಪ್ಪುವುದು ಕಷ್ಟ. ಆದ್ದರಿಂದ ಗರ್ಭಿಣಿಯಾದರೆ ವಿವಾಹಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಲಾರರು ಎಂದು ಆನಂದ್ ನಂಬಿಸಿದ’ ಎಂದು ಪ್ರಿಯಾಂಕ ಮಾಧ್ಯಮದವರಿಗೆ ತಿಳಿಸಿದರು.

‘ಈಗ ನಾನು ಗರ್ಭಿಣಿಯಾಗಿದ್ದೇನೆ. ಆದರೆ ವಿವಾಹ ಆಗಲು ಆತ ಒಪ್ಪಲಿಲ್ಲ. ಹತ್ತು ಲಕ್ಷ ನೀಡಿದರೆ ಮಾತ್ರ ಮದುವೆಯಾಗುವುದಾಗಿ ಹೇಳಿದ’ ಎಂದು ಅವರು ದೂರಿದರು.

ಆನಂದ್ ಬಗ್ಗೆ ಇಷ್ಟೆಲ್ಲ ಆರೋಪಗಳು ಕೇಳಿ ಬಂದರೂ ವಧುವಿನ ಮನೆಯವರು ಮಾತ್ರ ಯಾವುದೇ ಪ್ರತಿಕ್ರಿಯೆ ತೋರದೆ ವಿವಾಹಕ್ಕೆ ಸಹಕಾರ ಕೊಟ್ಟಿದ್ದು ಮಾತ್ರ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತು.

‘ಆನಂದ್ ಅತ್ಯಾಚಾರ ಮಾಡಿದ್ದಾನೆ ಮತ್ತು ವಂಚನೆ ಮಾಡಿದ್ದಾನೆ ಎಂದು ಪ್ರಿಯಾಂಕ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ತಿಳಿಸಿದ್ದಾರೆ.

ಮದುವೆ ನಿಲ್ಲಿಸಲು ಹೋಗಿದ್ದವರ ಮೇಲೆ ಆನಂದ್ ಮತ್ತಿತರರು ಹಲ್ಲೆ ನಡೆಸಿದ್ದಾರೆ ಎಂದು ರಾಜಾಜಿನಗರ ಠಾಣೆಗೆ ಪ್ರಿಯಾಂಕ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ. ಆರೋಪಿ ಆನಂದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಇತರ ಸುದ್ದಿಗಳು
ನಗರಾಭಿವೃದ್ಧಿ ಕರಡು ನೀತಿ ಬಿಡುಗಡೆ
ಏಳು ಮಂದಿ ಅಂತರರಾಜ್ಯ ಕಳ್ಳರ ಬಂಧನ; 12 ಚಿನ್ನದ ಸರ ವಶ
ರಾಜಭವನದ ಎದುರು ಪ್ರತಿಭಟನೆ
ಲಕ್ಷಾಂತರ ಮೌಲ್ಯದ ಆಭರಣ ವಶ
ರೇಣುಕಾಚಾರ್ಯಗೆ ಜಾಮೀನು
ಅಪಸ್ಮಾರ ದಾಖಲೆಗಳ ವಸ್ತು ಪ್ರದರ್ಶನ
ವಿಶ್ವಕರ್ಮ ಸಮುದಾಯಕ್ಕೆ ರಾಜ್ಯಪಾಲರ ಕರೆ
ಮಧುಮೇಹ ಜಾಗೃತಿ ಶಿಬಿರ
ಪ್ರಿಯಕರನ ಮದುವೆ ನಿಲ್ಲಿಸಲು ವಿಫಲ ಯತ್ನ
ಸೈಲೆಂಟ್ ಕಿಲ್ಲರ್ ಆಗುತ್ತಿರುವ ಮಧುಮೇಹ
ಸಾರಿಗೆ ಸೇವೆಗೆ ‘ಅಂಬಾರಿ ಸ್ಲೀಪರ್’ ಸೇರ್ಪಡೆ
ನಿರ್ದಾಕ್ಷಿಣ್ಯ ಕ್ರಮ: ಸಚಿವ ಅಶೋಕ್
ನಾಡು, ನುಡಿಯ ಋಣ ತೀರಿಸಿ: ಹಂಪನಾ
ಸರ್ಕಾರಿ ಸವಲತ್ತು: ವಿಶ್ವ ಕರ್ಮರಿಗೆ ಸಲಹೆ
ರಕ್ತದಾನ, ನೇತ್ರದಾನ ಜಾಗೃತಿ ರ್ಯಾಲಿ
ಸುಟ್ಟ ಗಾಯಗಳಿಂದ ಮಹಿಳೆ ಸಾವು
ಕೆರೆಗೆ ಬಂದ ದುರ್ಗತಿ
ಉದ್ಯೋಗ ಖಾತ್ರಿ ಯೋಜನೆ: ಸಚಿವ ಬಚ್ಚೇಗೌಡ ಸೂಚನೆ
ರಸ್ತೆಯೋ? ಕೆಸರು ಗುಂಡಿಗಳೋ...
ಕಾಂಗ್ರೆಸ್ ಸದಸ್ಯತ್ವ ನೋಂದಣೆ
30 ಲಕ್ಷ ಮೌಲ್ಯದ ಕೆಟಮಿನ್ ವಶ
ನಿಲ್ಲದ ಒತ್ತುವರಿ ತೆರವು ಕಾರ್ಯಾಚರಣೆ
ರ್ಯಾಗಿಂಗ್: 3 ವಿದ್ಯಾರ್ಥಿಗಳಿಗೆ ಶಿಕ್ಷೆ
ಶಾಸಕರ ‘ಕಣ್ಮರೆ’ ತನಿಖೆಗೆ ಆಗ್ರಹ
ಪೇಪರ್ ನೋಟಿಸ್‌ಗೆ ‘ಟಾಟಾ’
ವಲಸಿಗರಿಗೆ ಗುರುತಿನ ಚೀಟಿ-ವಿರೋಧ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618