ಗುರುವಾರ, ನವೆಂಬರ್ 19, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ಮೆಟ್ರೊ ಮಂಗಳವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಭೂಮಿಕಾ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಆರೋಗ್ಯ
ಮೆಟ್ರೊ ಶನಿವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಇಂದಿನಿಂದ ಲೋಕಸಭೆ ಚಳಿಗಾಲದ ಅಧಿವೇಶನ
ಬಿಗಿ ಪಟ್ಟಿಗೆ ಸಜ್ಜಾದ ಪ್ರತಿಪಕ್ಷಗಳು
ವಿವಿಧ ರಾಜ್ಯಗಳಲ್ಲಿನ ಚುನಾವಣಾ ಗೆಲುವಿನಿಂದ ಬಿಗುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಇದೇ ಗುರುವಾರದಿಂದ ಆರಂಭವಾಗುತ್ತಿರುವ ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಬಿಗಿಪಟ್ಟಿಗೆ ಉತ್ತರಿಸಲು ತಿಣುಕಾಡುವ ಸಾಧ್ಯತೆಯಿದೆ.

ನವದೆಹಲಿ (ಪಿಟಿಐ): ವಿವಿಧ ರಾಜ್ಯಗಳಲ್ಲಿನ ಚುನಾವಣಾ ಗೆಲುವಿನಿಂದ ಬಿಗುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಇದೇ ಗುರುವಾರದಿಂದ ಆರಂಭವಾಗುತ್ತಿರುವ ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಬಿಗಿಪಟ್ಟಿಗೆ ಉತ್ತರಿಸಲು ತಿಣುಕಾಡುವ ಸಾಧ್ಯತೆಯಿದೆ.

ರೈತರ ಸಮಸ್ಯೆ ಹಾಗೂ ಏರುತ್ತಿರುವ  ದರದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಎಡಪಕ್ಷಗಳು ಹಾಗೂ ಬಿಜೆಪಿ ಸಜ್ಜಾಗಿವೆ.

‘ದೂರ ಸಂಪರ್ಕ ಕ್ಷೇತ್ರದಲ್ಲಿನ ಹಗರಣ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ ವಿರುದ್ಧದ ಆರೋಪ, ದರ ಏರಿಕೆ ಹಾಗೂ ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧಿವೇಶನದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಲಾಗುವುದು’ ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಲಾಭದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿನ ಬಂಡವಾಳ ಹಿಂತೆಗೆಯುವುದು ಹಾಗೂ ದರ ಏರಿಕೆ ವಿಷಯಗಳನ್ನು ಎಡಪಕ್ಷಗಳು ಪ್ರಧಾನವಾಗಿ ಪ್ರಸ್ತಾಪಿಸಲಿವೆ.

‘ಅಧಿವೇಶನದ ಮೊದಲ ದಿನವೇ ದರ ಏರಿಕೆ ಸಮಸ್ಯೆ ವಿಷಯ ಮಂಡಿಸಲಾಗುವುದು’ ಎಂದು ಸಿಪಿಎಂ ನಾಯಕ ಬಸುದೇವ್ ಆಚಾರ್ಯ ತಿಳಿಸಿದ್ದಾರೆ.

ಚರ್ಚೆಗೆ ಕಾಂಗ್ರೆಸ್ ಸಜ್ಜು:  ಶ್ರೀಸಾಮಾನ್ಯರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ ಎಂದು ಪಕ್ಷದ ವಕ್ತಾರ ಶಕೀಲ್ ಅಹಮದ್ ವಿವರಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರು ಬೆಳೆಗಳಿಗೆ ಉತ್ತಮ ದರ ಪಡೆಯುತ್ತಿದ್ದಾರೆ. ದೇಶದಲ್ಲಿ ದರ ಏರಿಕೆಯಾಗಲು ಇದೂ ಒಂದು ಕಾರಣವಿರಬಹುದು. ಅಕ್ರಮ ದಾಸ್ತಾನುದಾರರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಅಕ್ರಮ ದಾಸ್ತಾನುದಾರರು ಹಾಗೂ ಕಾಳಸಂತೆಕೋರರನ್ನು ಹತ್ತಿಕ್ಕಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ಡಿಸೆಂಬರ್ 21ಕ್ಕೆ ಅಧಿವೇಶನ ಕೊನೆಯಾಗುವ ಸಾಧ್ಯತೆ ಇದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50 ಮೀಸಲಾತಿ, ಸಮಾನ ಅವಕಾಶಗಳ ಆಯೋಗ ರಚನೆ ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಮಸೂದೆ ಮಂಡಿಸಲು ಸರ್ಕಾರ ತಯಾರಿ ಮಾಡಿಕೊಂಡಿದೆ.

ವಾಣಿಜ್ಯ ಕೋರ್ಟ್ ಸ್ಥಾಪನೆ ಹಾಗೂ ನ್ಯಾಯಾಂಗ ತನಿಖಾ ಮಸೂದೆಗಳನ್ನು ಮಂಡಿಸುವ ಬಗ್ಗೆ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಈಗಾಗಲೇ ಸಂದೇಶ ರವಾನಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಅವ್ಯವಹಾರ ನಡೆಸುವವರಿಗೆ ಶಿಕ್ಷೆ ವಿಧಿಸಲು ಹಾಗೂ ಶೈಕ್ಷಣಿಕ ರಂಗದ ವಿವಾದಗಳನ್ನು ಬಗೆಹರಿಸಲು ಪ್ರತ್ಯೇಕ ನ್ಯಾಯಮಂಡಳಿ ರಚನೆ ಬಗ್ಗೆ ಪ್ರಸ್ತಾಪಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಯಾರಿ ಮಾಡಿಕೊಂಡಿದೆ. ನೆನೆಗುದಿಗೆ ಬಿದ್ದಿರುವ ಕೋಮ ಪ್ರಚೋದಿತ ಹಿಂಸಾ ತಡೆ ಮಸೂದೆ, ಮಹಿಳಾ ಮೀಸಲಾತಿ ಮಸೂದೆ ಹಾಗೂ ಮೋಟಾರು ವಾಹನ ತಿದ್ದುಪಡಿ ಮಸೂದೆಗಳು ಕಡತದಿಂದ ಹೊರಬರಲಿವೆಯೇ ಎಂದು ಕಾದು ನೋಡಬೇಕಿದೆ. ವಿದೇಶಿ ವ್ಯಾಪಾರ ಅಭಿವೃದ್ಧಿ ಮಸೂದೆ (ತಿದ್ದುಪಡಿ), ಪಿಂಚಣಿ ನಿಧಿ ನಿಯಂತ್ರಣ ಪ್ರಾಧಿಕಾರದ ಮಸೂದೆ ಹಾಗೂ ನೇರ ತೆರಿಗೆ ನೀತಿಯನ್ನು ಸರ್ಕಾರ ಈ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಆಂತರಿಕ ಕಲಹದಲ್ಲಿ ಮುಳುಗಿರುವ ಭಾರತೀಯ ಜನತಾ ಪಕ್ಷ, ವಂದೇ ಮಾತರಂ ಹಾಡುವುದರ ವಿರುದ್ಧ ಹೊರಡಿಸಿರುವ ಫತ್ವಾ ಬಗ್ಗೆ ಗಟ್ಟಿದನಿ ಮೊಳಗಿಸುವ ನಿರೀಕ್ಷೆಯಿದೆ. ತರಂಗಾಂತರ ಹಂಚಿಕೆ ವಿವಾದದ ಕುರಿತೂ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದೆ.

ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಮಾವೋವಾದಿಗಳ ನಡುವೆ ಸಂಪರ್ಕವಿದೆ ಎಂದು ಎಡಪಕ್ಷಗಳು ಗದ್ದಲ ಎಬ್ಬಿಸಲಿವೆ. ಅದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಒತ್ತಾಯಿಸುವ ನಿರೀಕ್ಷೆಯಿದೆ.

ಇತರ ಸುದ್ದಿಗಳು
‘ಉಗ್ರ ಹೆಡ್ಲಿ ವಿರುದ್ಧ ರಾಹುಲ್ ಸಾಕ್ಷಿ’
ಬಿಗಿ ಪಟ್ಟಿಗೆ ಸಜ್ಜಾದ ಪ್ರತಿಪಕ್ಷಗಳು
9 ಮಂದಿಗೆ ಶಿಕ್ಷೆ, ಐವರು ದೋಷಮುಕ್ತ
ವಿದ್ಯುತ್ ಆಘಾತದಿಂದ ಪಾರಾದ ನಟ ಚಿರಂಜೀವಿ
ಮುಂಬೈ ಭದ್ರತೆ ಅಪೂರ್ಣ
ಸಂಸತ್ತಿನಲ್ಲೂ ರೈತರ ಪರ ದನಿ, ಮುಂದೂಡಲ್ಪಟ್ಟ ಕಲಾಪ
ಎಚ್ಚೆತ್ತ ಸರ್ಕಾರ, ತುರ್ತು ಸಭೆ
ಶೇಖ್ ಹಸೀನಾಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ
ರಾಜಧಾನಿಯಲ್ಲಿ ಪ್ರತಿಭಟನೆಗಿಳಿದ ಅನ್ನದಾತ
ಡಿ.22ರಂದು ಸಂಸತ್ತಿನಲ್ಲಿ ಲಿಬರ್‍ಹಾನ್ ವರದಿ ಮಂಡನೆ
ಸಚಿವ ಎ.ರಾಜಾ ಕೈಬಿಡಲು ಪ್ರಧಾನಿಗೆ ಜಯಾ ಪತ್ರ
ವಿಚಾರಣೆ ಹಾದಿತಪ್ಪಿಸುವ ಯತ್ನ: ಉಜ್ವಲ್ ನಿಕ್ಕಂ
ಇನ್ನುಸಾಮಾನ್ಯರ ಗತಿ?
ಸ್ವರ್ಣಮಂದಿರಕ್ಕೆ ಕೆನಡಾ ಪ್ರಧಾನಿ ಹಾರ್ಪರ್ ಭೇಟಿ
ತಳಮಟ್ಟದ ಸಂಶೋಧನೆ ಅಗತ್ಯ: ರಾಷ್ಟ್ರಪತಿ
ಓಬಳಾಪುರಂ ಅದಿರು ಮುಟ್ಟುಗೋಲಿಗೆ ಆಗ್ರಹ
ಕೌಟುಂಬಿಕ ದೌರ್ಜನ್ಯ: ಗ್ರಾಮಗಳಲ್ಲಿ ಅರಿವು ಇಲ್ಲ
ಸಾವಿರಾರು ಮೀನುಗಳ ಸಾವು
ಹರಿಯಾಣ: ನವಿಲು ಸಂತಾನ ಅಭಿವೃದ್ಧಿ ಕೇಂದ್ರ?
ಮಾದಕ ಪದಾರ್ಥ ಸಾಗಣೆ: ಮಹಿಳೆಯರ ಬಂಧನ
ಈಶಾನ್ಯ ರಾಜ್ಯಗಳಲ್ಲಿ ಲಘು ಭೂಕಂಪ
ಉಗ್ರನ ಬಂಧನ
ಮಧ್ಯಸ್ಥಿಕೆ ಬೇಡ ಭಾರತ ಗರ್ಜನೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618