ಶುಕ್ರವಾರ, ನವೆಂಬರ್ 20, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಕೃಷಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ಭಿನ್ನಮತಕ್ಕೆ ವಿರಾಮ: ಚುನಾವಣೆಯತ್ತ ಚಿತ್ತ
ಪ್ರಜಾವಾಣಿ ವಾರ್ತೆ
ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನ ಪರಿಷತ್‌ನಲ್ಲಿ ಮೇಲುಗೈ ಸಾಧಿಸಲು ಬಿಜೆಪಿ ಹವಣಿಸುತ್ತಿದೆ.


ಬೆಂಗಳೂರು: ಒಂದು ತಿಂಗಳಿಗೂ ಹೆಚ್ಚು ಕಾಲ ಭಿನ್ನಮತದ ಬೇಗೆಯಲ್ಲಿ ನಲುಗಿದ್ದ ಆಡಳಿತಾರೂಢ ಬಿಜೆಪಿ ಈಗ ವಿಧಾನ ಪರಿಷತ್ ಚುನಾವಣೆ ತಯಾರಿಯತ್ತ ಹೊರಳಿದೆ. ಭಿನ್ನಮತೀಯ ಶಾಸಕರಲ್ಲಿ ಇನ್ನೂ ಅಸಮಾಧಾನ ಇದ್ದರೂ ಬಹಿರಂಗ ಸಮರಕ್ಕೆ ಅವಕಾಶ ನೀಡದೇ ಚುನಾವಣೆ ಎದುರಿಸಲು ಪಕ್ಷ ಸಜ್ಜಾಗುತ್ತಿದೆ.

ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಗಿಯುತ್ತಿದ್ದಂತೆ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ, ಡಿಸೆಂಬರ್ 18ರಂದು ನಡೆಯುವ ಪರಿಷತ್ ಚುನಾವಣೆಯ ಸಿದ್ಧತೆಗೆ ಚಾಲನೆ ನೀಡಿದ್ದರು. ಗುರುವಾರ ಈ ಪ್ರಕ್ರಿಯೆ ಮತ್ತಷ್ಟು ಚುರುಕಾಗಿದ್ದು, ಸಚಿವರು ಮತ್ತು ಪ್ರಮುಖ ಶಾಸಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಲಾಬಿ ಆರಂಭಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನ ಪರಿಷತ್‌ನಲ್ಲಿ ಮೇಲುಗೈ ಸಾಧಿಸಲು ಬಿಜೆಪಿ ಹವಣಿಸುತ್ತಿದೆ. ಆದರೆ, ಭಿನ್ನಮತದ ಪರಿಣಾಮ ಚುನಾವಣೆಯ ಮೇಲೂ ಬೀರುವ ಅಪಾಯವನ್ನು ಪಕ್ಷದ ಮುಖಂಡರು ಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಕ್ಕಟ್ಟು ಶಮನದ ಬೆನ್ನಲ್ಲೇ ಅಭ್ಯರ್ಥಿಗಳ ಆಯ್ಕೆಯತ್ತ ಚಿತ್ತ ಹರಿಸಿದ್ದಾರೆ.

click here
ಆಕಾಂಕ್ಷಿಗಳ ಪಟ್ಟಿಗೆ ಗಡುವು: ಜಿಲ್ಲಾ ಮಟ್ಟದಿಂದಲೇ ಅಭ್ಯರ್ಥಿಗಳ ಆಯ್ಕೆ ನಡೆಸಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿ ಇದೇ 24ರೊಳಗೆ ರಾಜ್ಯ ಘಟಕದ ಅಧ್ಯಕ್ಷರಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಹಲವು ಜಿಲ್ಲಾ ಸಮಿತಿಗಳು ಈಗಾಗಲೇ ಪಟ್ಟಿಯನ್ನು ಒಪ್ಪಿಸಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪ್ರಭಾವಿ ಸಚಿವರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಕಸರತ್ತು ಆರಂಭಿಸಿದ್ದಾರೆ. ಕೆಲವು ಸಚಿವರು ಬುಧವಾರವೇ ಜಿಲ್ಲೆಗಳಿಗೆ ತೆರಳಿದ್ದಾರೆ. ಹಲವರು ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದು ತಮ್ಮವರ ಪರವಾಗಿ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ ಮುಖ್ಯಮಂತ್ರಿಯವರ ನಿವಾಸದತ್ತ ಟಿಕೆಟ್ ಆಕಾಂಕ್ಷಿಗಳು ಹೆಜ್ಜೆ ಹಾಕುತ್ತಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕದ ಹಲವರು ತಮ್ಮ ಬೆಂಬಲಿಗರ ಸಮೇತ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡುತ್ತಿದ್ದು, ತಮ್ಮ ಪರವಾಗಿ ಲಾಬಿ ನಡೆಸುವಂತೆ ಒತ್ತಡ ಹೇರುತ್ತಿದ್ದಾರೆ.

ಇತರ ಸುದ್ದಿಗಳು
ಬಂಧಿತ ನಕ್ಸಲರು ಅಜ್ಞಾತ ಸ್ಥಳದಲ್ಲಿ
ಶಂಕಿತ ನಕ್ಸಲ್ ಬಂಧನ
ಚಂಡಮಾರುತದಿಂದ ನಾಪತ್ತೆಯಾದ ಮೀನುಗಾರ
ರೈತರ ಅಧ್ಯಯನ ಪೀಠ ಸ್ಥಾಪನೆಗೆ ಸಲಹೆ
ಉಸ್ತುವಾರಿ ಸಚಿವರಿಗೆ ಸೂಚನೆ- ಸಿಎಂ
ಹಂಪಿಯಲ್ಲಿ ಶೀಘ್ರವೇ ‘ಥೀಂ ಪಾರ್ಕ್’
ವೆುಜೆಸ್ಟಿಕ್ ಬಸ್ ನಿಲ್ದಾಣ ಸ್ಥಳಾಂತರ
ಮುತ್ಸದ್ಧಿ ರಾಜಕಾರಣಿ ಶಂಕರಾನಂದ ಅಸ್ತಂಗತ
ಅಂಗವಿಕಲ ಮಕ್ಕಳ ಮನೆ ಬಾಗಿಲಿಗೆ ಶಿಕ್ಷಣ
ವೈದ್ಯರ ಕಾಯಂಗೆ ಆದೇಶ:ಆಗ್ರಹ
ಭಿನ್ನಮತಕ್ಕೆ ವಿರಾಮ: ಚುನಾವಣೆಯತ್ತ ಚಿತ್ತ
‘ಕೋಮು ಶಕ್ತಿ ನಿಯಂತ್ರಿಸಿದರೆ ಇಂದಿರಾ ಜನ್ಮದಿನ ಅರ್ಥಪೂರ್ಣ
ರ್‍ಯಾಂಬುಲೆಟ್ ಕುರಿಗಳದೇ ಆಕರ್ಷಣೆ
ನಗರ- ಗ್ರಾಮ ಅಂತರ ಕಡಿಮೆಗೆ ಯತ್ನ: ಶೆಟ್ಟರ್
ಕನ್ನಡದಲ್ಲಿ ರೈಲ್ವೆ
ಬೈಂದೂರು: ರಸ್ತೆ ಅಪಘಾತ-9 ಸಾವು
ಸರ್ಕಾರದ ವೈಫಲ್ಯ ರಾಜ್ಯಪಾಲರ ತರಾಟೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618