ಶನಿವಾರ, ನವೆಂಬರ್ 21, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಆರೋಗ್ಯ
ಚಿತ್ರ ವಿಮರ್ಶೆ
ಭೂಮಿಕಾ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಕೃಷಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
‘2012 ವೇಳೆಗೆ ಮೆಟ್ರೊ ರೈಲು ಪೂರ್ಣ..’
ಪ್ರಜಾವಾಣಿ ವಾರ್ತೆ
‘ನಮ್ಮ ಮೆಟ್ರೊ’ ರೈಲು ಯೋಜನೆಯ ಕಾಮಗಾರಿ 2007ರ ಜನವರಿಯಲ್ಲಿ ಪ್ರಾರಂಭವಾಯಿತು. 2012ರಲ್ಲಿ ಪೂರ್ಣಗೊಳಿಸುತ್ತೇವೆ. ವಿಳಂಬದ ಪ್ರಶ್ನೆಯೇ ಇಲ್ಲ’-ಇದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಅವರ ಸ್ಪಷ್ಟ ನುಡಿ.


ಸುರಂಗ ಮಾರ್ಗ ಮತ್ತೆ ವಿಳಂಬ
ನೆಲದಡಿಯ ನಿಲ್ದಾಣಗಳು ಸೇರಿದಂತೆ ಸುರಂಗ ಮಾರ್ಗ ನಿರ್ಮಾಣ ಗುತ್ತಿಗೆ ಪ್ರಕ್ರಿಯೆ ಐದಾರು ತಿಂಗಳ ಹಿಂದೆಯೇ ಮುಗಿಯಬೇಕಾಗಿತ್ತು. ಬಿಡ್‌ದಾರರು ಹೆಚ್ಚಿನ ಮೊತ್ತ ನಮೂದಿಸಿರುವುದರಿಂದ ಪುನಃ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಅಂತರರಾಷ್ಟ್ರೀಯ ನಿಯಮಾವಳಿ ಪ್ರಕಾರ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ಮೂರು ತಿಂಗಳ ಅವಧಿ ಬೇಕಾಗುತ್ತದೆ.

ಬಿಐಎಎಲ್‌ಗೆ ಮೆಟ್ರೊ!
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಮೆಟ್ರೊ ಸಂಪರ್ಕ ಮಾರ್ಗ ನಿರ್ಮಿಸುವ ಸಾಧ್ಯತೆ ಬಗ್ಗೆ ‘ರೈಟ್ಸ್’ ಸಂಸ್ಥೆ ಅಧ್ಯಯನ ನಡೆಸುತ್ತಿದ್ದು, ಇನ್ನು 15 ದಿನಗಳ ಒಳಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.

ಮೆಟ್ರೊ 2ನೇ ಹಂತ
ಯೋಜನೆಯ 2ನೇ ಹಂತದ ಡಿಪಿಆರ್ ಮುಂದಿನ ತಿಂಗಳು ಹೊರ ಬರಲಿದೆ. ಎರಡನೇ ಹಂತದಲ್ಲಿ ಹೆಸರಘಟ್ಟ ರಸ್ತೆ ಕ್ರಾಸ್‌ನಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೆ, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿವರೆಗೆ ವಿಸ್ತರಣೆ ಆಗುವ ಸಾಧ್ಯತೆ ಇದೆ. ಇತರ ನಗರಗಳಿಗೆ ಮೆಟ್ರೊ ಮಾರ್ಗ ನಿರ್ಮಿಸುವ ಬಗ್ಗೆ ಉತ್ತರ ಹೇಳುವ ಅಧಿಕಾರ          ನನಗಿಲ್ಲ.

ಟರ್ಮಿನಲ್‌ಗಳಲ್ಲಿ ಪಾರ್ಕಿಂಗ್
ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ಪೀಣ್ಯ, ಬನಶಂಕರಿ ಮೊದಲಾದ ಕಡೆ ನಿರ್ಮಾಣವಾಗುವ ಮೆಟ್ರೊ ಟರ್ಮಿನಲ್ ನಿಲ್ದಾಣಗಳಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಇರುತ್ತದೆ. ಪ್ರತಿ ಟರ್ಮಿನಲ್‌ನಲ್ಲಿ 60ರಿಂದ 80 ಕಾರುಗಳ ನಿಲುಗಡೆಗೆ ಅವಕಾಶ ಇರಲಿದೆ.

176 ಎಸ್ಕಲೇಟರ್‌ಗಳು
ಮೆಟ್ರೊ ನಿಲ್ದಾಣಗಳನ್ನು ಹತ್ತಿಳಿಯಲು ಒಟ್ಟು 176 ಎಸ್ಕಲೇಟರ್‌ಗಳನ್ನು ಅಳವಡಿಸಲಾಗುವುದು. 114.67 ಕೋಟಿ ವೆಚ್ಚದಲ್ಲಿ ಎಸ್ಕಲೇಟರ್‌ಗಳನ್ನು ಚೀನಾದ ಎಸ್‌ಜೆಇಸಿ ಕಾರ್ಪೋರೇಷನ್ ಮತ್ತು ಭಾರತದ ಜಾನ್ಸನ್ ಲಿಫ್ಟ್ಸ್ ಪ್ರೈವೇಟ್ ಲಿಮಿಟೆಡ್‌ಗಳು ಸರಬರಾಜು ಮಾಡಲಿವೆ. ಈ ಸಂಸ್ಥೆಗಳೊಂದಿಗೆ ಒಡಂಬಡಿಕೆ ಪತ್ರಕ್ಕೆ ನಿಗಮವು ಶುಕ್ರವಾರ ಸಹಿ ಹಾಕಿತು.

ಸರ್ಕಾರವನ್ನೇ ಕೇಳಿ!
ಜಯನಗರದ 4ನೇ ಬ್ಲಾಕ್ ಬಳಿ ಒಂದು ಮೆಟ್ರೊ ನಿಲ್ದಾಣ ಸಾಕು. ಅದಕ್ಕೆ ಹತ್ತಿರದಲ್ಲೇ 8ನೇ ಬ್ಲಾಕ್ ಬಳಿ ಆರ್‌ವಿ ರಸ್ತೆ ಹೆಸರಿನ ನಿಲ್ದಾಣ ಅನಗತ್ಯ ಎಂದು ಎಫ್‌ಕೆಸಿಸಿಐ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಶಿವಶೈಲಂ ಮೇಲಿನಂತೆ ಹೇಳಿದರು.
 ‘ಸರ್ಕಾರ ಒಪ್ಪಿ, ಮಂಜೂರು ಮಾಡಿರುವ ಯೋಜನೆಯನ್ನು ಅನುಷ್ಠಾನಗೊಳಿಸುವುದಷ್ಟೇ ನಮ್ಮ ಜವಾಬ್ದಾರಿ. ನಿಲ್ದಾಣವನ್ನು ಕೈ ಬಿಡುವುದರ ಬಗ್ಗೆ ಸರ್ಕಾರವನ್ನೇ ಕೇಳಿ’ ಎಂದು ಅವರು ಕಟುವಾಗಿ ನುಡಿದರು.
ಬೆಂಗಳೂರು:
‘ನಮ್ಮ ಮೆಟ್ರೊ’ ರೈಲು ಯೋಜನೆಯ ಕಾಮಗಾರಿ 2007ರ ಜನವರಿಯಲ್ಲಿ ಪ್ರಾರಂಭವಾಯಿತು. 2012ರಲ್ಲಿ ಪೂರ್ಣಗೊಳಿಸುತ್ತೇವೆ. ವಿಳಂಬದ ಪ್ರಶ್ನೆಯೇ ಇಲ್ಲ’-

ಇದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಅವರ ಸ್ಪಷ್ಟ ನುಡಿ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಶೈಲಂ ನೀಡಿದ ವಿವರ ಇಲ್ಲಿದೆ;

‘ಎಲ್ಲ ವಸ್ತುಗಳ ಬೆಲೆಗಳು ಹೆಚ್ಚುತ್ತಲೇ ಇವೆ. ಮೆಟ್ರೊ ನಿರ್ಮಾಣ ವೆಚ್ಚವೂ ಏರಿಕೆಯಾಗುವುದು ಸಹಜ. ಸುಮಾರು ಒಂದೂವರೆ ಪಟ್ಟು ಹೆಚ್ಚಾಗಬಹುದಷ್ಟೆ. ಎಲ್ಲ ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಪೂರ್ಣಗೊಳಿಸಲಾಗಿದೆ. 2003ರ ದರಗಳ ಪ್ರಕಾರ ಮೆಟ್ರೊಯೋಜನೆಯ ಮೊದಲ ಹಂತದ ವಿವರವಾದ ಯೋಜನಾ ವರದಿಯನ್ನು  (ಡಿಪಿಆರ್) ಸಿದ್ಧಪಡಿಸಲಾಗಿದೆ. 2007ರಲ್ಲಿ ಟನ್‌ಗೆ 12 ಸಾವಿರ ರೂಪಾಯಿಯಷ್ಟಿದ್ದ ಉಕ್ಕಿನ ಬೆಲೆ ಈಗ 42 ಸಾವಿರ ರೂ.ಗಳಷ್ಟಾಗಿದೆ. ಪ್ರತಿ ಚೀಲದ ಸಿಮೆಂಟ್ ಬೆಲೆ ರೂ. 120ರಿಂದ 240ಕ್ಕೆ ಹೆಚ್ಚಾಗಿದೆ. ಮೆಟ್ರೊ ಮಾತ್ರವಲ್ಲ ಯಾವುದೇ ಕಾಮಗಾರಿಗೂ ದರ ಹೆಚ್ಚಳ ಅನ್ವಯವಾಗುತ್ತದೆ’.

‘ಸುರಕ್ಷತೆಗೆ ಅತಿ ಹೆಚ್ಚು ಆದ್ಯತೆ ನೀಡಿದ್ದೇವೆ. ಆದರೆ ಏನೇನು ಕ್ರಮ ಕೈಗೊಂಡಿದ್ದೇವೆ ಎಂಬುದನ್ನು ಸಾರ್ವಜನಿಕವಾಗಿ ಹೇಳುವುದಿಲ್ಲ. ಸರ್ಕಾರದ ಸಂಬಂಧಪಟ್ಟ ಸಂಸ್ಥೆಗಳಿಗೆ ಕಾಲಕಾಲಕ್ಕೆ ವರದಿ ಸಲ್ಲಿಸುತ್ತಿದ್ದೇವೆ. ಕಳ್ಳನೊಬ್ಬ ಕಬ್ಬಿಣದ ರಾಡ್ ಕಳವು ಮಾಡಿ ಓಡುತ್ತಿದ್ದಾಗ ಕಾರ್‌ಗೆ ಬಡಿಯಿತು. ಕಾಮಗಾರಿ ಸ್ಥಳಗಳಲ್ಲಿ ಸಂಬಂಧಪಡದ ವ್ಯಕ್ತಿಗಳಿಗೆ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ’.

‘ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಭಯಬೇಕಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ ಮಣ್ಣಿನ ಪರೀಕ್ಷೆಯನ್ನು ನಡೆಸಿದೆ. ಅದರ ಪ್ರಕಾರ ಸುರಂಗ ಮಾರ್ಗ ಕೊರೆಯುವಾಗ ಆಗುವ ಪರಿಣಾಮ ಅತ್ಯಲ್ಪ. ಚಿಕ್ಕಪೇಟೆ ಪ್ರದೇಶದಲ್ಲಿ ಅಂತರ್ಜಲ ಮೇಲ್ಮಟ್ಟದಲ್ಲಿ ಇದ್ದು, ಅಲ್ಲಿ ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸಲಾಗುವುದು’.‘ದೊಡ್ಡ ಕೊಳವೆ ಆಕಾರದಲ್ಲಿ ನಿರ್ಮಾಣವಾಗುವ ಸುರಂಗ ಮಾರ್ಗ ಒಂದು ರೀತಿ ಕೃತಕ ಕಲ್ಲಿನಂತೆ. ನೆಲ ಮಟ್ಟದಿಂದ ಕನಿಷ್ಠ 6 ಮೀಟರ್ ಕೆಳಗೆ ಹಾದು ಹೋಗುವ ಸುರಂಗ ಮಾರ್ಗದಿಂದ ಅಂತರ್ಜಲ ಹರಿವಿಗೆ ಯಾವುದೇ ತೊಂದರೆ ಆಗುವುದಿಲ್ಲ’.

‘ಸುರಂಗ ಮಾರ್ಗ ಕಾಮಗಾರಿ ನಡೆಯುವಾಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾವಿ, ಕೊಳವೆ ಬಾವಿಗಳನ್ನು ಬಂದ್ ಮಾಡಿಸಲಾಗುವುದು. ಬಾವಿ, ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಂಡಿದ್ದ ಮನೆಗಳಿಗೆ ಜಲ ಮಂಡಳಿಯಿಂದ ನಿಗಮದ ಖರ್ಚಿನಲ್ಲಿ ನೀರಿನ ಸಂಪರ್ಕ ಕೊಡಿಸಲಾಗುವುದು’.

‘ಮೆಟ್ರೊ ಕಾಮಗಾರಿಯಿಂದಾಗಿ ನೀರು, ಒಳಚರಂಡಿ ಕೊಳವೆ ಮಾರ್ಗಗಳಿಗೆ ತೊಂದರೆ ಆದರೆ ಅಂತಹುದನ್ನು ನಿಗಮವೇ ರಿಪೇರಿ ಮಾಡಿಸಿಕೊಡಲಿದೆ. ಕಾಮಗಾರಿ ಆರಂಭಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಗಳಿಂದ ನಕ್ಷೆಗಳನ್ನು ತರಿಸಿಕೊಳ್ಳಲಾಗಿದೆ. ಆದರೆ ಆ ನಕ್ಷೆಗಳಲ್ಲಿ ಶೇಕಡಾ 60ರಷ್ಟು ಕೊಳವೆ ಮಾರ್ಗಗಳು ನಮೂದಾಗಿರುವುದಿಲ್ಲ’.

‘ಜನರಿಗೆ ಬಹು ಉಪಯುಕ್ತವಾದ ಮೆಟ್ರೊ ಮಾರ್ಗಕ್ಕಾಗಿ ಮರಗಳನ್ನು ಕಡಿಯುವುದು ಅನಿವಾರ್ಯ. ನೆಲದಡಿಯ ನಿಲ್ದಾಣ ಮತ್ತು ಸುರಂಗ ಮಾರ್ಗಕ್ಕಾಗಿ 1000 ಮರಗಳು ಸೇರಿದಂತೆ ಒಟ್ಟು 1500 ಮರಗಳನ್ನು ಕಡಿದು ಹಾಕಬೇಕಾಗಿದೆ. ಇದಕ್ಕೆ ಪರಿಹಾರವಾಗಿ ತಿಪ್ಪಗೊಂಡನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶದ 300 ಎಕರೆ ಜಮೀನಿನಲ್ಲಿ ಗಿಡಮರಗಳನ್ನು ಬೆಳೆಸುತ್ತೇವೆ’.

‘ಮೆಟ್ರೊ ಸಂಚಾರ ಪ್ರಾರಂಭವಾದ ಮೇಲೆ ನಿರೀಕ್ಷಿಸಿರುವ ವಾರ್ಷಿಕ ವರಮಾನದ ಪೈಕಿ ಜಾಹೀರಾತಿನಿಂದ ಶೇಕಡಾ 5ರಷ್ಟು ಆದಾಯ ಬರಬಹುದೆಂದು ಅಂದಾಜಿಸಲಾಗಿದೆ. ಮೆಟ್ರೊ ನಿಲ್ದಾಣಗಳಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ಯೋಚಿಸಿಲ್ಲ’. ‘ದೆಹಲಿ ಮೆಟ್ರೊ ಯೋಜನೆಯಲ್ಲಿ ಆಸ್ತಿ ನಿರ್ಮಾಣದ ಉದ್ದೇಶವೂ ಇದೆ. ಆದರೆ ಬೆಂಗಳೂರಿನಲ್ಲಿ ಆ ಉದ್ದೇಶವನ್ನು ಇಟ್ಟುಕೊಂಡಿಲ್ಲ’.

ಇತರ ಸುದ್ದಿಗಳು
‘2012 ವೇಳೆಗೆ ಮೆಟ್ರೊ ರೈಲು ಪೂರ್ಣ..’
ಕನ್ನಡ ಬದುಕು ಕಟ್ಟಿಕೊಡುವ ಭಾಷೆಯಾಗಿ ಬೆಳೆಯಲಿ...
ಕೃಷಿಮೇಳದಲ್ಲಿ ಮಾಹಿತಿ ಸುಗ್ಗಿ
ನೈಸ್‌ಗೆ ಭೂಮಿ ನೀಡಲು ಮುಂದಾದ ಮುಖ್ಯಮಂತ್ರಿ
ಪ್ರಿಯಾಂಕ ಪ್ರಕರಣ: ದಿಢೀರ್ ವರ್ಗಾವಣೆ
ವಿದ್ಯುತ್ ವ್ಯತ್ಯಯ
ಪ್ರತಿಭಟನೆ
ಲಿಫ್ಟ್‌ನಲ್ಲಿ ತಾಂತ್ರಿಕ ದೋಷ
ಮೋಹನ್ ಭಾಗವತ್ ಆಗಮನ
ವಿಳಾಸ ಕೇಳುವ ನೆಪದಲ್ಲಿ ದರೋಡೆ
ವಿದ್ಯಾರ್ಥಿಗಳ ಪ್ರತಿಭಟನೆ ವಾಪಸ್
ವರದಕ್ಷಿಣೆಗಾಗಿ ಕೊಲೆ: ದೂರು
ಗೊಟ್ಟಿಗೆರೆ: ರಾಜಕಾಲುವೆ ಒತ್ತುವರಿ ತೆರವು
ನೆಲಮಂಗಲ: ಕಾನ್ಸ್‌ಟೇಬಲ್ ಕೊಲೆ
ವಿದ್ಯಾರ್ಥಿಆತ್ಮಹತ್ಯೆಗೆ ಯತ್ನ
ಆಧುನಿಕ ತಂತ್ರಜ್ಞಾನದ ಪ್ರದರ್ಶನ..
ದಕ್ಷ ಅಧಿಕಾರಿಗಳಿಗೆ ಶಿಕ್ಷೆ ಏಕೆ?
‘ಪಾರಂಪರಿಕ ವೈದ್ಯ ಪದ್ಧತಿಯ ರಕ್ಷಣೆ ’
ಬಾರ್ ನೃತ್ಯ: ಸಿಸಿ ಕ್ಯಾಮೆರಾ ಅಳವಡಿಕೆ?
ಸಾರ್ವಕಾಲಿಕ ಸತ್ಯಕ್ಕೆ ಕಾವ್ಯ ಕನ್ನಡಿ: ಎಲ್‌ಎಸ್‌ಎಸ್
ಬಂಧಿತ ನಕ್ಸಲರ ಹಾಜರಿಗೆ ಬಂಜಗೆರೆ ಒತ್ತಾಯ
‘ಮುಂಗಾರು ಮಳೆ’ ರಿಮೇಕ್ ಹೆಸರಲ್ಲಿ ವಂಚನೆ: ವ್ಯಕ್ತಿ ಸೆರೆ
ಸಿಎಂ ಮನೆ ಮುಂದೆ ಪ್ರತಿಭಟನೆ: ಸಿಐಟಿಯು ಎಚ್ಚರಿಕೆ
ಹೆಸರಾಂತ ಕಂಪೆನಿಗಳ ನಕಲಿ ಟ್ಯಾಗ್ ಮುದ್ರಣ: ಇಬ್ಬರ ಬಂಧನ
ಕಲಾಸಿಪಾಳ್ಯ : ದರೋಡೆ ಹೊಂಚು-3 ಬಂಧನ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618