ಶನಿವಾರ, ನವೆಂಬರ್ 21, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಿಜವಾದ ಒಳ್ಳೆಯತನಕ್ಕೆ ತನ್ನದು ಒಳ್ಳೆಯ ಗುಣ ಎಂಬುದು ತಿಳಿದಿರುವುದಿಲ್ಲ.
--ಸಾಫೊಕ್ಲಿಸ್
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಆರೋಗ್ಯ
ಚಿತ್ರ ವಿಮರ್ಶೆ
ಭೂಮಿಕಾ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಯುವಜನ
ಕೃಷಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ಜೆಡಿಎಸ್- ಕಾಂಗ್ರೆಸ್ ಮಾತುಕತೆ
ಮೇಲ್ಮನೆ ಚುನಾವಣೆಗೆ ಹೊಂದಾಣಿಕೆ?
ಪ್ರಜಾವಾಣಿ ವಾರ್ತೆ
ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷಗಳ ಪಾರಮ್ಯವನ್ನು ಉಳಿಸಿಕೊಳ್ಳಲು ಯೋಚಿಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಡಿಸೆಂಬರ್‌ನಲ್ಲಿ ನಡೆಯುವ ಪರಿಷತ್ ಚುನಾವಣೆಗೆ ಪರಸ್ಪರ ಕೈಜೋಡಿಸಲು ಮಾತುಕತೆ ಆರಂಭಿಸಿವೆ


ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷಗಳ ಪಾರಮ್ಯವನ್ನು ಉಳಿಸಿಕೊಳ್ಳಲು ಯೋಚಿಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಡಿಸೆಂಬರ್‌ನಲ್ಲಿ ನಡೆಯುವ ಪರಿಷತ್ ಚುನಾವಣೆಗೆ ಪರಸ್ಪರ ಕೈಜೋಡಿಸಲು ಮಾತುಕತೆ ಆರಂಭಿಸಿವೆ. ಕೆಲ ದಿನಗಳಿಂದ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಜೆಡಿಎಸ್ ಶುಕ್ರವಾರ ಬಹಿರಂಗವಾಗಿಯೇ ಕಾಂಗ್ರೆಸ್ ಜತೆ ಮೈತ್ರಿಗೆ ಮುಕ್ತ ಆಹ್ವಾನ ನೀಡಿದೆ.

2010ರ ಜನವರಿ 5ರಂದು ವಿಧಾನ ಪರಿಷತ್‌ನ 25 ಸದಸ್ಯರು ನಿವೃತ್ತರಾಗಲಿದ್ದಾರೆ. ಈ ಸ್ಥಾನಗಳಿಗೆ ಇದೇ ಡಿಸೆಂಬರ್ 18ರಂದು ಚುನಾವಣೆ ನಡೆಯಲಿದೆ. ಈ ಪೈಕಿ ಕನಿಷ್ಠ 15 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪರಿಷತ್‌ನಲ್ಲಿ ಬಹುಮತ ಪಡೆಯಲು ಆಡಳಿತಾರೂಢ ಬಿಜೆಪಿ ಹವಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಪ್ರತಿಪಕ್ಷಗಳಲ್ಲಿ ಸಂಘಟಿತ ಹೋರಾಟದ ಕುರಿತು ಚರ್ಚೆ ಆರಂಭವಾಗಿದೆ.

ಪ್ರಸ್ತುತ ಪರಿಷತ್‌ನಲ್ಲಿ 29 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅತಿದೊಡ್ಡ ಪಕ್ಷ. ಜೆಡಿಎಸ್‌ನ 12 ಸದಸ್ಯರಿದ್ದು, ಪ್ರತಿಪಕ್ಷಗಳೇ ಬಹುಮತ ಪಡೆದಿವೆ. ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಕೇವಲ 25 ಸದಸ್ಯರನ್ನು ಹೊಂದಿದ್ದು, ಸದನದ ಕಲಾಪದಲ್ಲಿ ಪದೇ ಪದೇ ಮುಖಭಂಗ ಅನುಭವಿಸುತ್ತಿದೆ. ಪರಿಷತ್ ಅನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಳ್ಳುವ ಬಯಕೆ ಈಗ ಪ್ರತಿಪಕ್ಷಗಳನ್ನು ಮೈತ್ರಿಯ ಸಮೀಪ ಕರೆತಂದು ನಿಲ್ಲಿಸಿದೆ.

click here
ಚುನಾವಣೆ ನಡೆಯುವ 25 ಸ್ಥಾನಗಳ ಪೈಕಿ 21ರಲ್ಲಿ ಕಾಂಗ್ರೆಸ್ ಸದಸ್ಯರಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯ ತಲಾ ಎರಡು ಸದಸ್ಯರ ಅವಧಿಯೂ ಇದೇ ವೇಳೆ ಕೊನೆಗೊಳ್ಳಲಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆದ ಸಂದರ್ಭದಲ್ಲಿ 23 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 21ರಲ್ಲಿ ಗೆಲುವು ಸಾಧಿಸಿತ್ತು. ಕೆಲ ತಿಂಗಳಿನಿಂದ ಪಕ್ಷದಿಂದ ದೂರ ಉಳಿದಿರುವ ಶುಭಲತಾ ಆಸ್ನೋಟಿಕರ್ ತಟಸ್ಥರಾಗಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ಸದಸ್ಯ ಬ್ಲೇಸಿಯಸ್ ಡಿಸೋಜಾ ಅವರು ಮೃತರಾಗಿದ್ದಾರೆ.

ರಹಸ್ಯ ಭೇಟಿ: ಸಂಸತ್‌ನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುರುವಾರ ರಾತ್ರಿ ಕಾಂಗ್ರೆಸ್‌ನ ಕೆಲವು ಹಿರಿಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುವ ಗುಲಾಂ ನಬಿ ಆಜಾದ್ ಸೇರಿದಂತೆ ಹಲವರ ಜೊತೆ ಉಭಯ ಪಕ್ಷಗಳ ನಡುವಣ ಮೈತ್ರಿ ಕುರಿತು ಪ್ರಸ್ತಾಪಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಮಾತುಕತೆಯ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ಎಲ್ಲವೂ ಆರಂಭದ ಹಂತದಲ್ಲಿದೆ. ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸದಂತೆ ನಿಯಂತ್ರಿಸುವುದು ನಮ್ಮ ಉದ್ದೇಶ. ಮೈತ್ರಿಯ ಪ್ರಸ್ತಾವ ಇನ್ನೂ ಚಿಂತನೆಯ ಹಂತದಲ್ಲಿದೆ. ಕಾಂಗ್ರೆಸ್ ಮುಖಂಡರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರೆ ಮಾತ್ರ ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು’ ಎಂದರು.

ಕಾಂಗ್ರೆಸ್‌ನಲ್ಲಿ ಗೊಂದಲ?: ಜೆಡಿಎಸ್ ಜೊತೆಗಿನ ಮೈತ್ರಿ ಕುರಿತು ಕಾಂಗ್ರೆಸ್‌ನಲ್ಲಿ ಗೊಂದಲ ಇದೆ. ಒಂದು ಗುಂಪು ಮೈತ್ರಿಯ ಪರವಾಗಿದ್ದರೆ,  ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಮತ್ತೊಂದು ಬಣ ಈ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸುತ್ತಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

‘ಇತ್ತೀಚೆಗೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕೈಜೋಡಿಸಲು ಜೆಡಿಎಸ್ ಮುಂದಾಗಿತ್ತು. ಪದೇ ಪದೇ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳಲು ಪ್ರಯತ್ನಿಸುತ್ತಿರುವ ಆ ಪಕ್ಷ ಚುನಾವಣೆಗೆ ಸಂಬಂಧಿಸಿದಂತೆ ಮಾತ್ರ ಕಾಂಗ್ರೆಸ್ ಜೊತೆ ಮೈತ್ರಿ ಮಾತನಾಡುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಜೆಡಿಎಸ್ ಜೊತೆಗೆ ಮೈತ್ರಿ ಸರಿಯಲ್ಲ’ ಎಂಬ ಅಭಿಪ್ರಾಯವನ್ನು ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಗೊತ್ತಾಗಿದೆ.

ಹೈಕಮಾಂಡ್ ಸೂಚನೆಯ ಮೇರೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮತ್ತು ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ನಿರ್ದೇಶನದಂತೆ ಒಂದೆರಡು ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ.

ಇತರ ಸುದ್ದಿಗಳು
ಇದು ಹೆದ್ದಾರಿಯಲ್ಲ, ಸಾವಿಗೆ ರಹದಾರಿ!
ಬಾಗಲಕೋಟೆಯಲ್ಲಿ ಕಂಡ ‘ಪ್ರೊಜೇರಿಯಾ’
ರೆಡ್ಡಿ ಸಖ್ಯ: ಜಗದೀಶ ಶೆಟ್ಟರ ಸಮರ್ಥನೆ
ಕಾವೇರಿ ತಳಿ ಕೋಳಿಯ ಆಕರ್ಷಣೆ...
ಮೇಲ್ಮನೆ ಚುನಾವಣೆಗೆ ಹೊಂದಾಣಿಕೆ?
ದೂರವಾಣಿ ಕಾರ್ಖಾನೆ
ದೇಶಕಂಡ ಅಪೂರ್ವ ರಾಜಕಾರಣಿ ಶಂಕರಾನಂದ
‘ಶಂಕಿತ ನಕ್ಸಲರ ಬಂಧನ ನಿಜ’
ಅಧಿಕಾರಿಗಳ ವರ್ಗ
ಒಂಟಿ ಹೆಣ್ಣುಮಗುವಿಗೆ ಉನ್ನತ ಶಿಕ್ಷಣ : ಮೀಸಲಾತಿ ಪರಿಶೀಲನೆಗೆ ಆದೇಶ
ಸಿಎಂ ಹೇಳಿಕೆ ಉದ್ಧಟತನದ ಪರಮಾವಧಿ- ಟೀಕೆ
ಅಡುಗೆಗೆ ‘ಮೊಬೈಲ್ ಗ್ಯಾಸ್’ ತಂತ್ರಜ್ಞಾನ
ಎಐಸಿಸಿ ಕಚೇರಿಯಲ್ಲಿ ಸಭೆ
ನಾಲೆ ನೀರು ಉಳಿತಾಯಕ್ಕೆ ‘ಇಲೆಕ್ಟ್ರೋ ಸಿಸ್ಟಂ’
ಅಧಿಕಾರಿ ವರ್ಗಾವಣೆ: ಸಚಿವ, ಶಾಸಕರಿಗೆ ಹೈಕೋರ್ಟ್ ತರಾಟೆ
ಭಾರಿ ಉದ್ಯಮಿಗಳ ಮೇಲೆ ತೆರಿಗೆ ದಾಳಿ
ನೆರೆ ಪರಿಹಾರ ಸಮರ್ಪಕ:ಸಿಎಂ
ರೆಡ್ಡಿ ಸಹೋದರರಗಣಿ ಸ್ಥಗಿತಕ್ಕೆ ಶಿಫಾರಸು
ಹಿರಿಯ ಮುತ್ಸದ್ದಿ ಶಂಕರಾನಂದ ಇನ್ನಿಲ್ಲ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618