ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ಚಿಕ್ಕಮಾರನಹಳ್ಳಿ. ರಾಜಮಹಲ್ ವಿಲಾಸ 2ನೇ ಹಂತದಲ್ಲಿ ನಿರ್ಮಿಸಿರುವ ನೂತನ ಬಸ್ ನಿಲ್ದಾಣದ ಉದ್ಘಾಟನೆ- ಸಚಿವ ಆರ್.ಅಶೋಕ. ಅತಿಥಿಗಳು- ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು, ಲೋಕಸಭಾ ಸದಸ್ಯ ಡಿ.ಬಿ.ಚಂದ್ರೇಗೌಡ. ನಟ ಶಿವರಾಜ್‌ಕುಮಾರ್. ಬೆಳಿಗ್ಗೆ 11.
ಟೆಕ್ಸ್‌ಟೈಲ್ ಕೋ-ಆಪರೇಟಿವ್ ಬ್ಯಾಂಕ್: ಕರ್ನಾಟಕ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ. ಉದ್ಘಾಟನೆ- ಐಪಿಎಸ್ ಡಾ.ರಮೇಶ್. ಅತಿಥಿಗಳು- ರಾಜ್ಯ ನೌಕರರ ಸಂಘದ ಅಧ್ಯಕ್ಷ ಕೆ.ಆರ್.ಸುರೇಶ್. ಪ್ರಾಧ್ಯಾಪಕ ಎಂ.ಶ್ರೀಧರ್, ನೇಕಾರ ಮುಖಂಡ ವೈ.ವಿ.ವೆಂಕಟಪ್ಪ. ಅಧ್ಯಕ್ಷತೆ- ಬ್ಯಾಂಕ್ ಅಧ್ಯಕ್ಷ ಆರ್.ಭಾಸ್ಕರ್. ಸಂಜೆ 5.
ಕರ್ನಾಟಕ ಜಾನಪದ ಅಕಾಡೆಮಿ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂದೆ. ‘ಪೊನ್ನ ಬಿತ್ತೇವು ಹೊಲಕೆಲ್ಲ’ ಕೃತಿ ಬಿಡುಗಡೆ ಹಾಗೂ ಜನಪದ ಕಲಾ ಪ್ರದರ್ಶನ. ಕೃತಿ ಬಿಡುಗಡೆ- ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ.ಆರ್.ಜಯರಾಮರಾಜೇ ಅರಸ್. ಕೃತಿ ಕುರಿತು- ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಕಾಳೇಗೌಡ ನಾಗವಾರ. ಅತಿಥಿ- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ. ಅಧ್ಯಕ್ಷತೆ- ಅಕಾಡೆಮಿಯ ಅಧ್ಯಕ್ಷ ಗೊ.ರು.ಚನ್ನಬಸಪ್ಪ. ಸಂಜೆ 6.
ಗಾನಗಂಗಾ: ನಯನ ಸಭಾಂಗಣ, ಕನ್ನಡ ಭವನ. ರಾಜ್ಯಮಟ್ಟದ ‘ಗೀತಗಾಯನ’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಮತ್ತು ಕನ್ನಡ ಸಂಗೀತ ರಸಸಂಜೆ. ಉದ್ಘಾಟನೆ- ಸಾಹಿತಿ ಡಾ.ದೊಡ್ಡರಂಗೇಗೌಡ. ಅತಿಥಿಗಳು- ಚಿತ್ರ ನಿರ್ದೇಶಕ ಫಣಿರಾಮಚಂದ್ರ, ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು. ಅಧ್ಯಕ್ಷತೆ- ಸಾಹಿತಿ ಕಾ.ತ.ಚಿಕ್ಕಣ್ಣ. ಸಂಜೆ 4.
ಇಂಡಿಯನ್ ಪಬ್ಲಿಕ್ ಸ್ಕೂಲ್: ಚೌಡಯ್ಯ ಸ್ಮಾರಕ ಭವನ, 16ನೇ ಅಡ್ಡರಸ್ತೆ, ವೈಯಾಲಿಕಾವಲ್. ‘ರಂಜನಿ’ 25ನೇ ವಾರ್ಷಿಕೋತ್ಸವ. ಅತಿಥಿ- ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್. ಸಂಜೆ 5.
ರೋಟರಿ ಕ್ಲಬ್ ಆಫ್ ಬೆಂಗಳೂರು: ರೋಟರಿ ಹೌಸ್ ಆಫ್ ಫ್ರೆಂಡ್‌ಶಿಪ್. ಲ್ಯಾವೆಲ್ಲೆ ರಸ್ತೆ. ಮಾಸಿಕ ಸಭೆ. ಸಂಜೆ 7.
ಸಂಭ್ರಮ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: ಅಂಬಾಭವಾನಿ ದೇವಸ್ಥಾನ ರಸ್ತೆ, ಜ್ಯೋತಿನಗರ, ವಿದ್ಯಾರಣ್ಯಪುರ ಅಂಚೆ. ‘ಮಿಷನ್ 10ಎಕ್ಸ್’ ಕಾರ್ಯಾಗಾರ. ಅತಿಥಿಗಳು- ಸಂಭ್ರಮ ಗ್ರೂಪ್‌ನ ಸಿಇಒ ಬಿ.ಎನ್.ನಾಗರಾಜ್, ಗುಣಮಟ್ಟ ವ್ಯವಸ್ಥಾಪಕ ವಿಶ್ವನಾಥ್ ಗುರುಪ್ರಸಾದ್, ಪ್ರಾಚಾರ್ಯ ಡಾ.ಪಿ.ಶಿವಾನಂದ. ಅಧ್ಯಕ್ಷತೆ- ಸಂಭ್ರಮ ಗ್ರೂಪ್‌ನ ಉಪಾಧ್ಯಕ್ಷ ವಿ.ನಾಗರಾಜ್. ಬೆಳಿಗ್ಗೆ 10.
ಅಖಿಲ ಕರ್ನಾಟಕ ರಂಗ ಕಲಾವಿದರ ರಕ್ಷಣಾ ವೇದಿಕೆ: ರವೀಂದ್ರ ಕಲಾಕ್ಷೇತ್ರ. ಸಾಂಸ್ಕೃತಿಕ ಕಲಾ ಮೇಳ. ಬೆಳಿಗ್ಗೆ 10.
ಧಾರ್ಮಿಕ ಕಾರ್ಯಕ್ರಮ
ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್, ಜಯನಗರ. ಕರ್ನಾಟಕ ಕೈಲಾಸ ಮಾನಸ ಸರೋವರ ಭಕ್ತಾದಿಗಳ ಸಂಘ ಪ್ರಕಟಿಸಿದ ‘ಅನ್ವೇಷಕ ಸ್ವಾಮಿ ಪ್ರಣವಾನಂದರು’ ಮತ್ತು ‘ಕೈಲಾಸ ಮಾನಸ ಸರೋವರ’ ಪುಸ್ತಕ ಲೋಕಾರ್ಪಣೆ. ಸಂಜೆ 6.30.
ಗಾಂಧಿ ಸಾಹಿತ್ಯ ಸಂಘ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು: ಗಾಂಧಿ ಸಾಹಿತ್ಯ ಸಂಘ, 8ನೇ ಅಡ್ಡರಸ್ತೆ, ಮಲ್ಲೇಶ್ವರ. ಗಮಕ ಕಾರ್ಯಕ್ರಮ. ಸಂಜೆ 6.30.
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆ ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ. ಗಣೇಶ್ ಭಟ್ ಬಾಗೇಪಲ್ಲಿ ಅವರಿಂದ ‘ಗೀತಾಶಾಸ್ತ್ರಾರ್ಥ ವಿವೇಕ’ ಉಪನ್ಯಾಸ. ಬೆಳಿಗ್ಗೆ 9.30.
ನಾದರಂಜಿನಿ ಸಂಗೀತ ಸಭಾ: ಧಾರಿಣಿ ಮಹಿಳಾ ಸಂಘ, ಪ್ರಧಾನ ಅಂಚೆ ಕಚೇರಿ ಹಿಂಭಾಗ, ಬಸವೇಶ್ವರನಗರ. 9ನೇ ಕಾರ್ತಿಕ ಸಂಗೀತೋತ್ಸವ. ವಿದ್ಯಾಭೂಷಣ ಅವರಿಂದ ಗಾಯನ. ಕಂಡದೇವಿ ವಿಜಯರಾಘವನ್ (ಪಿಟೀಲು), ಎನ್. ವಾಸುದೇವ್ (ಮೃದಂಗ), ಎಂ. ಗುರುರಾಜ್ (ಮೋರ್ಸಿಂಗ್). 6.30.
ಟಿಟಿಡಿ ಹಿಂದೂ ಧರ್ಮ ಪ್ರಚಾರ ಪರಿಷತ್ತು: ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಟಿಟಿಡಿ ವಾರ್ತಾ ಕೇಂದ್ರ, ವೈಯಾಲಿಕಾವಲ್. ಸಿ. ನಾಗರಾಜ್ ಅವರಿಂದ ‘ಶ್ರೀವಾರಿ ಶ್ರವಣಂ’ ಹರಿಕಥೆ. ಸಂಜೆ 6.
ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, 8ನೇ ಅಡ್ಡರಸ್ತೆ, 21ನೇ ಮುಖ್ಯ ರಸ್ತೆ, ಜೆ.ಪಿ. ನಗರ, 2ನೇ ಹಂತ. ನಿತ್ಯ ಭಜನೆ. ಸಂಜೆ 6.30.
ಪರಮಾರ್ಥ ವಿಚಾರ ಸಂಘ ಟ್ರಸ್ಟ್: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಕೆ.ಜಿ. ಸುಬ್ರಾಯಶರ್ಮ ಅವರಿಂದ ‘ಅಧ್ಯಾಸ ಭಾಷ್ಯಂ’ ಉಪನ್ಯಾಸ. ಬೆಳಿಗ್ಗೆ 7.45.
ಶಿವಬಾಲಯೋಗಿ ಆಶ್ರಮ: ಜೆ.ಪಿ. ನಗರ, 3ನೇ ಹಂತ. ನಿತ್ಯ ಧ್ಯಾನ ಮತ್ತು ಭಜನೆ. ಸಂಜೆ 6.
ವಿಶ್ವಚೇತನ ಸಾಂಸ್ಕೃತಿಕ ಸಂಘ: ಮರಾಠ ಹಾಸ್ಟೆಲ್, ಬಸವನಗುಡಿ. ಬೆಳಿಗ್ಗೆ 6.30 ರಿಂದ ವಿಶೇಷ ಪೂಜೆ ಮತ್ತು ಪಾರಾಯಣ. ಸಂಜೆ 5ಕ್ಕೆ ಕಲಶ ಸ್ಥಾಪನೆ, ರುದ್ರ ಪಾರಾಯಣ.