ಬೀಜಿಂಗ್ (ಎಎಫ್‌ಪಿ): ಕಳೆದ ವರ್ಷ ಭೂಕಂಪ ಸಂಭವಿಸಿ 87 ಸಾವಿರ ಜನರ ಸಾವನ್ನಪ್ಪಿದ ನೈರುತ್ಯ ಚೀನಾದಲ್ಲಿಯೇ ಸೋಮವಾರ ಮತ್ತೆ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೌಗೋಳಿಕ ಸರ್ವೇಕ್ಷಣಾ ವಿಭಾಗ (ಯುಎಸ್‌ಜಿಎಸ್) ತಿಳಿಸಿದೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.6ರಷ್ಟಿತ್ತೆಂದು ಸರ್ವೇಕ್ಷಣಾ ವಿಭಾಗ ತಿಳಿಸಿದೆ. ಮುಂಜಾನೆ 3.25ಕ್ಕೆ (ಸ್ಥಳೀಯ ಕಾಲಮಾನ) ಸಿಯಾಚಿನ್ ಪ್ರಾಂತ್ಯದಲ್ಲಿ, 10 ಕಿಲೋ ಮೀಟರ್ ಆಳದ ಭೂ ಭಾಗದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ. ಭೂಕಂಪದಿಂದ ಉಂಟಾದ ಪರಿಣಾಮದ ಬಗ್ಗೆ ಯಾವುದೇ ವರದಿಗಳು ಲಭ್ಯವಾಗಿಲ್ಲ ಎಂದು ಚೀನಾ ಸರ್ಕಾರದ ನ್ಯೂಸ್ ಏಜೆನ್ಸಿಗಳು ತಿಳಿಸಿವೆ.