ಬುಧವಾರ, ನವೆಂಬರ್ 4, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಮನುಷ್ಯನು ಹುಟ್ಟುವುದು ದ್ವೇಷಕ್ಕಾಗಿ ಅಲ್ಲ, ವಿನಾಶಕ್ಕಾಗಿ ಅಲ್ಲ. ಬದುಕಿಗಾಗಿ, ಪರಸ್ಪರ ಪ್ರೀತಿಗಾಗಿ..
--ಡಾ. ರಾಧಾಕೃಷ್ಣನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಆರೋಗ್ಯ
ಮೆಟ್ರೊ ಗುರುವಾರ
ಶಿಕ್ಷಣ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಸಾಪ್ತಾಹಿಕ ಪುರವಣಿ
ಭೂಮಿಕಾ
ಕ್ರೀಡಾ ಪುರವಣಿ
ಚಿತ್ರ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಕರ್ನಾಟಕ ದರ್ಶನ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಾಣಿಜ್ಯ ಪುರವಣಿ
ಜ್ಯೋತಿಷ- ವಾಸ್ತು

ಪ್ರಭಾಕರ, ಬೆಂಗಳೂರು
ಜನನ 24-9-1976, ಸಮಯ 8-30 ಬೆಳಿಗ್ಗೆ.
ಪ್ರಶ್ನೆ: ಆರೋಗ್ಯ ಮತ್ತು ದಾಂಪತ್ಯ ಜೀವನದ ಬಗ್ಗೆ ತಿಳಿಸಿ.

ಉತ್ತರ: ನಿಮ್ಮದು ತುಲಾ ಲಗ್ನ, ಹಸ್ತ ನಕ್ಷತ್ರ, ಕನ್ಯಾ ರಾಶಿ. ಲಗ್ನವೂ ರಾಹು ನಕ್ಷತ್ರದಲ್ಲಿದ್ದು ಶುಭ ಸಂಬಂಧ ರಹಿತವಾಗಿದೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ನಿಮ್ಮ ಆರೋಗ್ಯ ಸೂಚಕ ಷಷ್ಟವು ಮೀನರಾಶಿಯಾಗಿದ್ದು, ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ವಕ್ರೀ ಅವಯೋಗಿ ಬುಧ, ರವಿ, ಮತ್ತು ಯೋಗಿ, ಕ್ಷೀಣ ಚಂದ್ರ ವೀಕ್ಷಿಸುತ್ತಾರೆ. ಇವು ನಿಮಗೆ ಅಜೀರ್ಣ ಮತ್ತು ರಕ್ತ ಸಂಬಂಧಿ ರೋಗಗಳನ್ನು ತರುಬಲ್ಲುದಾಗಿದೆ. ನಿಮ್ಮ ರೋಗಸ್ಥಾನದ ಸೂಕ್ಷ್ಮಾಧಿಪತಿ ಶನಿಯಾಗಿದ್ದು, ದಶಮದಲ್ಲಿ, ಅವಯೋಗಿ ಬುಧ ನಕ್ಷತ್ರ ಸ್ಥಿತರಿದ್ದು, ನಿಮಗೆ ವಾತ ಸಂಬಂಧಿರೋಗಗಳು, ನರಸಂಬಂಧಿ ರೋಗ ತರುಬಲ್ಲುದಾಗಿದೆ.

ನಿಮ್ಮ ಅರೋಗ್ಯ ಸೂಚಕ ಷಷ್ಟಾಂಶ ಕುಂಡಲಿಯ ಲಗ್ನ ಮಿಥುನವಾಗಿದ್ದು, ಇಲ್ಲಿ ರಾಹು, ಕೇತು ಸ್ಥಿತರಿದ್ದಾರೆ. ಇವು ನಿಮ್ಮ ಕಾಯಿಲೆಗಳು ದೀರ್ಘಕಾಲೀನವೂ, ಸರಿಯಾಗಿ ಗುರುತಿಸಲು ಕಷ್ಟಸಾಧ್ಯವಾದವುಗಳೂ ಆಗಿರುವುದನ್ನು ಸೂಚಿಸುತ್ತವೆ. ಜನ್ಮ ರೋಗಾಧಿಪತಿ ರೋಗಸ್ಥಾನದಲ್ಲೇ ಇದ್ದು, ಬಾಧಕಾಧಿಪತಿಯೊಡನೆ ಇದ್ದಾರೆ. ಇವಾವುವೂ ನಿಮ್ಮ ಆರೋಗ್ಯ ಸುಧಾರಿಸಲು ಪೂರಕವಾಗಿಲ್ಲ.

ನಿಮ್ಮ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಮಕರವಾಗಿದ್ದು ಇಲ್ಲಿ ರಾಹು ಸ್ಥಿತರಿದ್ದಾರೆ. ಇವೆಲ್ಲವೂ ನಿಮ್ಮ ಹೆಂಡತಿ ನಿಮ್ಮಷ್ಟೇ ಚಂಚಲ ಚಿತ್ತರಾಗಿದ್ದು ದಾಂಪತ್ಯದಲ್ಲಿ ಹೊಂದಾಣಿಕೆ ಕಷ್ಟ ಎನ್ನುವುದನ್ನು ಸೂಚಿಸುತ್ತವೆ. ಆದರೆ ಡೈವೋರ್ಸ್ ಸೂಚಿತವಾಗುವುದಿಲ್ಲ. ಈ ಕಾರಣ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಗದಂತೆ ಎಚ್ಚರ ವಹಿಸಿ. ಇಲ್ಲದಿದ್ದರೆ ಮಕ್ಕಳು ನಿಮ್ಮನ್ನು ದ್ವೇಷಿಸಿಯಾರು.

ಈಗ ನಿಮಗೆ ರಾಹು ದಶಾ ಕುಜ ಭುಕ್ತಿ ನಡೆಯುತ್ತಿದ್ದು, ಎಪ್ರಿಲ್ 2010ರಿಂದ ಗುರು ದಶಾ ಪ್ರಾರಂಭವಾಗುವುದು. ಗೋಚಾರದಲ್ಲಿ ಸಾಡೇಸಾತಿ ಇದ್ದು ಪಂಚಮ ಗುರು ಇದ್ದಾರೆ. ಇವಾವುವೂ ನಿಮ್ಮ ಆರೋಗ್ಯಕ್ಕಾಗಲೀ, ದಾಂಪತ್ಯಕ್ಕಾಗಲೀ ಅನುಕೂಲಕರವಲ್ಲ.

ಪರಿಹಾರ: ಆರೋಗ್ಯಕ್ಕಾಗಿ ಗುರುದೆಶೆಯಲ್ಲಿ ಕನಕ ಪುಷ್ಯರಾಗ ಹರಳು ಧರಿಸಿ. ವಿಷ್ಣುಸಹಸ್ರ ನಾಮ ಪಠಿಸಿ, ಹನುಮಾನ್ ಚಾಲೀಸ ಪಠಿಸಿ. ದುರ್ಗಾದೇವಿಯನ್ನು ಪೂಜಿಸಿ.

ಪುರುಷೋತ್ತಮ ಆರ್. ಚಿಕ್ಕಮಗಳೂರು
 ಜನನ 17-9-1974 ಸಮಯ 7-00ಬೆಳಿಗ್ಗೆ.
ಪ್ರಶ್ನೆ: ಆರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ,    ಮಾಟ? ಮಂತ್ರವಾಗಿದ್ದರೆ ಪರಿಹಾರ ತಿಳಿಸಿ.

ಉತ್ತರ: ನಿಮ್ಮದು ಕನ್ಯಾಲಗ್ನ, ಹಸ್ತಾನಕ್ಷತ್ರ, ಕನ್ಯಾರಾಶಿ. ನಿಮ್ಮ ಲಗ್ನಾಧಿಪತಿ ಬುಧರು ವೈರಿ ಚಂದ್ರ ನಕ್ಷತ್ರದಲ್ಲಿ, ಉಚ್ಛರಾಗಿ, ಅವಯೋಗಿಯಾಗಿ, ಚಂದ್ರ, ಕುಜ, ರವಿ ಯೊಡನೆ, ಲಗ್ನ ಸ್ಥಿತರಿದ್ದು, ಪಾಪಿ ಕೇತು ವೀಕ್ಷಿತರಾಗಿದ್ದಾರೆ. ಲಗ್ನಕ್ಕಾಗಲೀ, ಲಗ್ನಾಧಿಪತಿಗಾಗಲೀ ಬೇರಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ. ಇವು ನಿಮ್ಮ ತೀವ್ರ ಮಾನಸಿಕ ಒತ್ತಡವನ್ನು ಸೂಚಿಸುತ್ತವೆ.

ನಿಮ್ಮ ಉದ್ಯೋಗ ಸೂಚಕ ದಶಮವು ಮಿಥುನವಾಗಿದ್ದು ಇಲ್ಲಿ ಷಷ್ಟಾಧಿಪತಿ ಶನಿ, ದಗ್ಧರಾಶ್ಯಾಧಿಪತಿ, ವಕ್ರೀ ಗುರು ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ಗುರು ಷಷ್ಟ ಸ್ಥಾನದಿಂದ ವೀಕ್ಷಿಸುತ್ತಾರೆ. ದಶಮಾಧಿಪತಿ ಬುಧರೇ ಆಗಿದ್ದು ಮೇಲೆ ತಿಳಿಸಿದಂತೆ ಪೀಡಿತರಾಗಿದ್ದಾರೆ. ಇವು ನಿಮಗೆ ಉದ್ಯೋಗದಲ್ಲಿ ಮಾನಸಿಕ ಕಿರಿಕಿರಿಗೆ ಕಾರಣವಾಗಿದೆ.

ನಿಮ್ಮ ಉದ್ಯೊಗ ಸೂಚಕ ದಶಾಂಶ ಕುಂಡಲಿಯ ಲಗ್ನವು ಸಿಂಹವಾಗಿದ್ದು, ಇಲ್ಲಿ ವಕ್ರೀ ಗುರು, ಕುಜ ಸ್ಥಿತರಿದ್ದಾರೆ. ಲಗ್ನಾಧಿಪತಿ ರವಿ ದಶಮಸ್ಥಿತರಿದ್ದು, ಜನ್ಮ ಧನ, ಭಾಗ್ಯಾಧಿಪತಿ ಶುಕ್ರರು ಷಷ್ಟದಲ್ಲಿ, ರಾಹು, ಶನಿ ಯೊಡನೆ ಸ್ಥಿತರಿದ್ದಾರೆ. ಇವು ನಿಮಗೆ ಉದ್ಯೋಗದಲ್ಲಿ ಹಿತಶತ್ರುಗಳ ಕಾಟವನ್ನು ಸೂಚಿಸುತ್ತವೆ. ಇದನ್ನು ನೀವು ಮಾಟ ಮಂತ್ರವಾಗಿ ತೆಗೆದು ಕೊಳ್ಳುವ ಅವಶ್ಯಕತೆ ಇಲ್ಲ.

ನಿಮ್ಮ ಆರೋಗ್ಯ ಸೂಚಕ ಷಷ್ಟವು ಕುಂಭವಾಗಿದ್ದು ಇಲ್ಲಿ ವಕ್ರೀ, ಬಾಧಕ ಗುರು, ದಗ್ಧರಾಶ್ಯಾಧಿಪರಾಗಿ, ರಾಹು ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ಶುಕ್ರರು ವ್ಯಯಸ್ಥಾನದಿಂದ ವೀಕ್ಷಿಸುತ್ತಾರೆ. ರೋಗಾಧಿಪತಿ ಶನಿ ಮೇಲೆ ತಿಳಿಸಿದಂತೆ ಪೀಡಿತರಾಗಿದ್ದಾರೆ.  ಇದರಿಂದ ಕರುಳು ಸಂಬಂಧಿರೋಗ, ಪಿತ್ತಕೋಶದ ತೊಂದರೆ, ಮುಂತಾದವು ನಿಮ್ಮನ್ನು ಪೀಡಿಸುತ್ತವೆ.

ನಿಮಗೆ ಈಗ ರೋಗಸ್ಥಾನ ಸ್ಥಿತ ಗುರು ದಶಾ, ರೋಗಾಧಿಪತಿ ಶನಿ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಸಾಡೇಸಾತಿ, ಪಂಚಮ ಗುರು ಇದ್ದಾರೆ. ಇವಾವುವೂ ನಿಮ್ಮ ಆರೋಗ್ಯಕ್ಕಾಗಲೀ, ಉದ್ಯೋಗಕ್ಕಾಗಲೀ, ಶುಭಕರವಲ್ಲ.
ಪರಿಹಾರ: ವಜ್ರ ಅಥವಾ ೆರ್ಕಾನ್ ಧರಿಸಿ. ರುದ್ರಾಭಿಷೇಕ ಮಾಡಿಸಿ. ಹನುಮಾನ್ ಚಾಲೀಸ ಪಠಿಸಿ. ಚಾಮುಂಡಾಂಬೆಯನ್ನು ಪೂಜಿಸಿ.

ಶಶಿಕೇಶವ ಭಟ್ ಬಿ. ಆಲೂರು
ಜನನ 20-4-1977, ಸಮಯ 12-39 ಮಧ್ಯಾಹ್ನ.
ಪ್ರಶ್ನೆ: ನಾನು ಬ್ಯಾಂಕ್ ಉದ್ಯೋಗಿ. ದಾಂಪತ್ಯ ಸರಿಯಿಲ್ಲ, ಸರಕಾರಿ ಉನ್ನತ ಹುದ್ದೆಗೆ ಪ್ರಯತ್ನಿಸುತ್ತಿದ್ದೇನೆ. ಸಾಧ್ಯವಾಗುವುದೇ? ತಿಳಿಸಿ.

ಉತ್ತರ: ನಿಮ್ಮದು ಕರ್ಕಾಟಕ ಲಗ್ನ, ಕೃತ್ತಿಕಾ ನಕ್ಷತ್ರ, ಮೇಷರಾಶಿ. ನಿಮ್ಮ ಲಗ್ನಾಧಿಪತಿ ಚಂದ್ರರು ಭಾವದಲ್ಲಿ ಲಾಭದಲ್ಲಿ, ಉಚ್ಛರವಿ ನಕ್ಷತ್ರದಲ್ಲಿ ವ್ಯಯಾಧಿಪತಿ, ವಕ್ರೀ ಬುಧರೊಡನೆ ಸ್ಥಿತರಿದ್ದಾರೆ. ಇವರನ್ನು ಲಗ್ನಸ್ಥಿತ, ಅಷ್ಟಮಾಧಿಪತಿ ಶನಿ ವೀಕ್ಷಿಸುತ್ತಾರೆ.  ಲಗ್ನದಲ್ಲಿ ಪಾಪಿ ಶನಿ, ಸ್ವನಕ್ಷತ್ರ ಸ್ಥಿತರಿದ್ದು, ಶುಭ ಸಂಬಂಧ ರಹಿತರಾಗಿದ್ದಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ನಿಮ್ಮ ಉದ್ಯೋಗ ಸೂಚಕ ದಶಮವು ಮೇಷರಾಶಿಯಾಗಿದ್ದು ಇಲ್ಲಿ ಯೋಗಿ, ಕೇತು, ಪುಷ್ಕರ ನವಾಂಶಸ್ಥಿತ ಉಚ್ಛರವಿ, ವ್ಯಯಾಧಿಪತಿ ವಕ್ರೀ ಬುಧರು ಸ್ಥಿತರಿದ್ದಾರೆ. ಈ ಸ್ಥಾನವನ್ನು ಅಷ್ಟಮಾಧಿಪತಿ  ಶನಿ ಮತ್ತು ಅವಯೋಗಿ ರಾಹು ವೀಕ್ಷಿಸುತ್ತಾರೆ.  ದಶಮಾಧಿಪತಿ ಕುಜರು ತನ್ನ ಸ್ಥಾನದಿಂದ ವ್ಯಯಕ್ಕೆ ಹೋಗಿದ್ದು, ಉಚ್ಛ, ವಕ್ರೀ ಶುಕ್ರರೊಡನೆ, ದಗ್ಧರಾಶಿಯಲ್ಲಿ ಪುಷ್ಕರ ನವಾಂಶ ಸ್ಥಿತರಿದ್ದಾರೆ. ಇವು ನಿಮಗೆ ವಿದ್ಯೆಗೆ ತಕ್ಕ ಉದ್ಯೋಗ ಸಿಗದಿರುವುದಕ್ಕೆ ಕಾರಣ ವಾಗಿದೆ.

ನಿಮ್ಮ ಉದ್ಯೋಗ ಸೂಚಕ ದಶಾಂಶ ಕುಂಡಲಿಯ ಲಗ್ನವು ಮಿಥುನವಾಗಿದ್ದು, ಲಗ್ನದಲ್ಲಿ ರವಿ ಸ್ಥಿತರಿದ್ದಾರೆ. ಲಗ್ನಾಧಿಪತಿ ಬುಧರು ಷಷ್ಟದಲ್ಲಿ, ವೈರಿ ಕ್ಷೇತ್ರದಲ್ಲಿ, ವೈರಿ ಕುಜರೊಡನೆ ಸ್ಥಿತರಿದ್ದಾರೆ. ಎರಡು ಮುಖ್ಯಗ್ರಹರು ದುಃಸ್ಥಾನ ಸ್ಥಿತರಿದ್ದು ನಿಮಗೆ ಇವು  ಉನ್ನತ ಹುದ್ದೆ ಕಷ್ಟಸಾಧ್ಯವೆಂದು ಸೂಚಿಸುತ್ತವೆ.

ನಿಮ್ಮ ಕಳತ್ರ ಸ್ಥಾನ ಮಕರ ರಾಶಿಯಾಗಿದ್ದು, ರಾಶ್ಯಾಧಿಪತಿ ಶನಿ ಲಗ್ನಸ್ಥಿತರಿದ್ದಾರೆ. ಸಪ್ತಮವನ್ನು ದಗ್ಧರಾಶ್ಯಾಧಿಪತಿ  ಗುರು ವೀಕ್ಷಿಸುತ್ತಾರೆ. ಕಾರಕ ಶುಕ್ರರು ಉಚ್ಛರಾದರೂ ವಕ್ರೀ ಆಗಿ ದಗ್ಧರಾಶಿ ಸ್ಥಿತರಿದ್ದಾರೆ.

ನಿಮ್ಮ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ತುಲಾ ಆಗಿದ್ದು ಲಗ್ನದಲ್ಲಿ ರಾಹು ಮತ್ತು ವಕ್ರೀ ಬುಧ ಸ್ಥಿತರಿದ್ದಾರೆ. ಜನ್ಮ ಸಪ್ತಮಾಧಿಪತಿ ಶನಿ, ಕಳತ್ರಕಾರಕ ಶುಕ್ರರೊಡನೆ ಕುಟುಂಬಸ್ಥಾನ ಸ್ಥಿತರಿದ್ದಾರೆ.  ನೀವು ನಿಮ್ಮ ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಿ, ಮುಕ್ತಮನಸ್ಸಿನಿಂದ ಪ್ರಯತ್ನಿಸಿದರೆ  ದಾಂಪತ್ಯ ಜೀವನ ಸರಿಹೊಂದುವ ಸಾಧ್ಯತೆ ಇದೆ. ನಿಮಗೆ ಈಗ ಅವಯೋಗಿ ರಾಹು ದಶಾ ವ್ಯಯಾಧಿಪತಿ ಬುಧಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಷಷ್ಟ ಶನಿ, ದಶಮ ಗುರು ಇದ್ದಾರೆ. ಇವು ಅಶುಭಕರ. ಬುಧ ಭುಕ್ತಿ ಮುಗಿದ ನಂತರ ಸೆಪ್ಟೆಂಬರ್ 2010ರ ನಂತರ ನೀವು ಶೃದ್ಧೆ ಯಿಂದ ಪ್ರಯತ್ನಿಸಿದರೆ ನಿಮಗೆ ಉದ್ಯೋಗ ಮತ್ತು ದಾಂಪತ್ಯ ಜೀವನದಲ್ಲಿ ಹೆಚ್ಚಿನ ನೆಮ್ಮದಿ ಸಿಗುವುದು.
ಪರಿಹಾರ: ಚಂದ್ರಕಾಂತ ಮಣಿ ಧರಿಸಿ. ಕನಕ ಧಾರಾ ಸ್ತೋತ್ರ ಪಠಿಸಿ. ದುರ್ಗಾದೇವೀಯನ್ನು ಪೂಜಿಸಿ. ದತ್ತಾತ್ರೇಯ ಚರಿತ್ರೆ ಪಠಿಸಿ.

ಕೃಷ್ಣಪ್ಪ, ಮಂಡ್ಯ
ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ, ಯಜಮಾನರ ಪ್ರಗತಿಗೆ ತೊಂದರೆ. ಮನೆಯ ನಕ್ಷೆ ಕಳಿಸಿದ್ದೇನೆ. ದೋಷವಿದ್ದರೆ ತಿಳಿಸಿ.

ಉತ್ತರ: ನಿಮ್ಮ ಮನೆಯ ನಕ್ಷೆ ಪ್ರಕಾರ ನಿಮ್ಮದು ಉತ್ತರ ನಿವೇಶನದ ಮನೆ. ನಿವೇಶನದಲ್ಲಿ ಉತ್ತರ ಮತ್ತು ಪೂರ್ವಕ್ಕೆ ಹೆಚ್ಚು ಖಾಲಿ ಸ್ಥಳವಿದ್ದು ಇದು ವಾಸ್ತು ಶಾಸ್ತ್ರದಂತೆ ಶುಭಕರವಾಗಿದೆ. ಆದರೆ ಆಗ್ನೇಯ ಮೂಲೆಯಲ್ಲಿ ಶೌಚಾಲಯವಿದ್ದು ಇದು ತಪ್ಪು. ಇದು ಅಗ್ನಿಮೂಲೆಯಾಗಿದ್ದು ಇಲ್ಲಿ ಶೌಚಾಲಯವಿರುವುದು ಹೆಣ್ಣುಮಕ್ಕಳ ಆರೋಗ್ಯ, ಅಭಿವೃದ್ಧಿಗೆ ತೊಂದರೆ, ಯಜಮಾನರ ಪ್ರಗತಿಗೆ ಅಡೆತಡೆ ತರುತ್ತದೆ. ಇದನ್ನು ದಕ್ಷಿಣಕ್ಕೆ ಬದಲಾಯಿಸಿ. ನಿಮ್ಮ ಮನೆಯ ಮೆಟ್ಟುಲುಗಳು ಪೂರ್ವಗೋಡೆಗೆ ಇದೆ, ಇದೂ ಕೂಡ ತಪ್ಪು. ಇದರಿಂದ  ಮನೆಯ ಯಜಮಾನರ ಪ್ರಗತಿ ಕುಂಠಿತ ಗೊಳ್ಳುತ್ತದೆ. ಇದನ್ನೂ ಕೂಡ ದಕ್ಷಿಣ ಗೋಡೆಗೆ ಬದಲಾಯಿಸಿ.  ಮನೆಗೆ 8 ಬಾಗಿಲು ಇರುವುದು ಶುಭಕರ, ಆದರೆ 11 ಕಿಡಿಕಿ ಇರುವುದು ಅಶುಭಕರ. ಇನ್ನೊಂದು ಕಿಡಿಕಿ ಸೇರಿಸಿ 12 ಆಗುವಂತೆ ನೋಡಿಕೊಳ್ಳಿ.

ಈ ಬದಲಾವಣೆ ನಂತರ ವಾಸ್ತು ಪೂಜೆ ಮಾಡಿಸಿ.

ಶಿ. ಸಿದ್ಧನಾಥ ಸ್ವಾಮಿ, ಸೋಲಾಪುರ
ಯಜಮಾನರಿಗೆ ಸಾಲದ ಬಾಧೆ, ಆರೋಗ್ಯ ತೊಂದರೆ. ಮನೆಯ ನಕ್ಷೆ ಕಳಿಸಿದ್ದೇನೆ ಪರಿಹಾರ ತಿಳಿಸಿ.

ಉತ್ತರ: ನಿಮ್ಮ ಮನೆಗೆ ಕಂಪೌಂಡ ಇದೆಯೋ ತಿಳಿಸಿಲ್ಲ. ಇದು ಅತ್ಯಾವಶ್ಯಕ. ಕಂಪೌಂಡ ಸುತ್ತಲೂ ಇರುವ ಖಾಲಿ ಜಾಗವನ್ನು ಪಿಶಾಚ ವೀಧಿ ಎನ್ನುತ್ತೇವೆ. ಉತ್ತರ ಮತ್ತು ಪೂರ್ವಕ್ಕೆ ಹೆಚ್ಚು ಖಾಲಿಜಾಗ ವಿದ್ದರೆ ಯಜಮಾನನಿಗೆ ಪ್ರಗತಿ ತರುತ್ತದೆ. ಇಲ್ಲದಿದ್ದರೆ ಮನೆಯ ಪೂರ್ವ ಗೋಡೆಗೆ ವಾಸ್ತು ಯಂತ್ರ ಪೂಜಿಸಿ, ಸ್ಥಾಪಿಸಿ.

ನಿಮ್ಮ ಮನೆಯ ಮುಖ್ಯ ಬಾಗಿಲು ಗುರುವಿನ ಸ್ಥಾನದಲ್ಲಿದೆ. ಇದು ಮನೆಯ ಯಜಮಾನನಿಗೆ ಆರ್ಥಿಕ ಸಂಕಷ್ಟ ತರುತ್ತದೆ. ಇದನ್ನು ಉತ್ತರದ ಕಡೆಗೆ ಸರಿಸಿ. ಇದರಿಂದ ಮನೆಯಲ್ಲಿ ಒಂದೇ ನೇರಕ್ಕೆ ಮೂರು ಬಾಗಿಲು ಬರುವುದೂ ತಪ್ಪುತ್ತದೆ.

ನಿಮ್ಮ ಅಡುಗೆಮನೆ ನೈರುತ್ಯದಲ್ಲಿದ್ದು ಇದು ಅಶುಭಕರ. ಇಲ್ಲಿರುವ ಅಡುಗೆ ಮನೆಯ ಅಗ್ನಿ ಮನೆಯ ಯಜಮಾನನ ಸಂಪತ್ತನ್ನು ಭಸ್ಮ ಮಾಡುತ್ತದೆ. ಇದನ್ನು ಅಗ್ನೇಯಕ್ಕೆ ಬದಲಾಯಿಸಿ.  ಮನೆಗೆ 10 ಬಾಗಿಲು ಇದೆ, ಇದೂ ಕೂಡ ಅಶುಭಕರ. ಇವು ಮನೆಯ ಹೆಂಗಸರಿಗೆ ಸಂಕಷ್ಟ, ಕಳುವಿನ ಸಾಧ್ಯತೆ ಸೃಷ್ಟಿಸುತ್ತದೆ. ಆದ್ದರಿಂದ ಮನೆಯ ಎರಡು ಬಾಗಿಲನ್ನು ಆರ್ಚಾಆಗಿ ಬದಲಾಯಿಸಿ 8 ಬಾಗಿಲು ಇರುವಂತೆ ನೋಡಿಕೊಳ್ಳಿ. ಇದು ಮನೆಯ ಯಜಮಾನರಿಗೆ ಪ್ರಗತಿ ಕೊಡುತ್ತದೆ. ಉಳಿದಂತೆ ನಿಮ್ಮ ನಕ್ಷೆ ವಾಸ್ತು ಪ್ರಕಾರ ಇದ್ದು ಬದಲಾವಣೆ ನಂತರ ವಾಸ್ತು ಪೂಜೆ ಮಾಡಿಸಿ.

ದೂರವಾಣಿ ಸಂಖ್ಯೆ: 22445707
ಸಮಯ: ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30
ಪ್ರಶ್ನೆ ಈ  ವಿಳಾಸಕ್ಕೆ ಕಳುಹಿಸಿ: ಸಂಪಾದಕರು, ಪ್ರಜಾವಾಣಿ,   ಜ್ಯೋತಿಷ ವಿಭಾಗ, ನಂ. 75, ಎಂ.ಜಿ. ರಸ್ತೆ, ಬೆಂಗಳೂರು- 01

ಇತರ ಸುದ್ದಿಗಳು
ಆಹಾರ ತಯಾರಿಕಾ ಘಟಕಕ್ಕೆ ಪೌಷ್ಟಿಕಾಂಶ ಕೊರತೆ!
ಉದಾರ ಹಣಕಾಸು ನೀತಿ ಅಂತ್ಯದ ಆರಂಭ..
ಮಾರುಕಟ್ಟೆ ಮಾಯೆ
ಸೌರಶಕ್ತಿ ಜನಪ್ರಿಯಗೊಳಿಸಲು ಶ್ರಮಿಸುವ ‘ಎಸ್‌ಇಎಸ್‌ಐ’
ಪಾರಿಭಾಷಿಕ ವಿಶ್ಲೇಷಣೆ-3
ಸಣ್ಣ ಹೂಡಿಕೆದಾರರ ನಿರಾಸಕ್ತಿ; ಪೇಟೆ ಕಳಾಹೀನ
ಜ್ಯೋತಿಷ- ವಾಸ್ತು
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618