ಶುಕ್ರವಾರ, ನವೆಂಬರ್ 6, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ದ್ವೇಷವನ್ನು ನಾಶಪಡಿಸುವ ಶಕ್ತಿ ಇರುವುದು ಸ್ನೇಹಕ್ಕೆ ಮಾತ್ರ. ಆದ್ದರಿಂದ ಸ್ನೇಹ ಇದ್ದೆಡೆ ಶಾಂತಿ ಮತ್ತು ನೆಮ್ಮದಿ ಸಾಧ್ಯ.
--ಬುದ್ಧ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ಕರ್ನಾಟಕ ದರ್ಶನ
ಯುವಜನ
ಶಿಕ್ಷಣ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಸಾಪ್ತಾಹಿಕ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕ್ರೀಡಾ ಪುರವಣಿ
ಚಿತ್ರ ವಿಮರ್ಶೆ
ಕೃಷಿ
ತಂತ್ರಜ್ಞಾನ
ವಾಣಿಜ್ಯ ಪುರವಣಿ
ಮೆಟ್ರೊ ಗುರುವಾರ
ಮೆಟ್ರೊ ಮಂಗಳವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಸಿನಿಮಾ- ಕಿರುತೆರೆ ರಂಜನೆ
‘ಮೃದು ಮಧುರ ಪರಿಚಯ’
ಆಡಲು ಯಾರಲ್ಲೂ ಹೆಚ್ಚು ಮಾತುಗಳಿಲ್ಲದ ಗೋಷ್ಠಿ ಅದು. ನಿರ್ದೇಶಕ ಸಂಜಯ್‌ಗೆ ‘ಪರಿಚಯ’ ಈ ವಾರ ತೆರೆ ಕಾಣುತ್ತಿದೆ ಎಂಬ ಸಂತೋಷ.


ಹಾಡುಗಳು ಹಿಟ್ ಆಗಿರುವುದರ ಗುಂಗಲ್ಲಿ ಜನ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆಂಬ ವಿಶ್ವಾಸ. ನಾಯಕ ತರುಣ್‌ಗೆ ಈ ಚಿತ್ರವಾದರೂ ತಮಗೆ ಬ್ರೇಕ್ ನೀಡೀತೆ ಎಂಬ ತವಕ. ನಿರ್ಮಾಪಕ ಎಸ್.ಜಿ.ಕೃಷ್ಣಮೂರ್ತಿ ಸಂತೋಷ್ ಚಿತ್ರಮಂದಿರದಲ್ಲಿ ತಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬುದಕ್ಕೇ ಖುಷಿಪಟ್ಟರು.

ಮುಂಬೈನಿಂದ ಬಂದಿದ್ದ ನಾಯಕಿ ರೇಖಾ ಅಪರೂಪಕ್ಕೆ ಮಾತಿಗಿಳಿದರು. ಸಂಗೀತ ಹಾಗೂ ಕಥೆಯೇ ಚಿತ್ರವನ್ನು ಗೆಲ್ಲಿಸುತ್ತದೆ ಎಂಬ ವಿಶ್ವಾಸ ಅವರದ್ದು. ಮೃದು ಮಧುರ ಪ್ರೇಮಕಥೆ ಇದು. ಚಿತ್ರದ ನಿರೂಪಣೆ ಚೆನ್ನಾಗಿದೆ. ದೀರ್ಘ ಕಾಲ ಕಾದಿದ್ದಕ್ಕೂ ಬೆಂಗಳೂರಿನಲ್ಲಿ ಒಳ್ಳೆಯ ಚಿತ್ರಮಂದಿರ ಸಿಕ್ಕಿತು ಎಂದು ತರುಣ್ ತಡೆದು ತಡೆದು ಹೇಳಿದರು.

ತಾವು ಬರೆದ ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ ಎಂದವರು ಕವಿರಾಜ್. ‘ಏನೆಂದರೂ ಸುಂದರ ಸುಳ್ಳು’ ಎಂಬ ಸಾಲು ಹೇಳಿ ಪ್ರಿಯತಮೆಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ಹುಡುಗನೊಬ್ಬ ಇ-ಮೇಲ್ ಮಾಡಿ ತನ್ನ ದುಃಖ ಹಂಚಿಕೊಂಡನಂತೆ. ಸಾಲುಗಳ ಅರ್ಥವನ್ನು  ತಪ್ಪಾಗಿ ಭಾವಿಸಿದರೆ ಹೀಗಾಗುತ್ತದೆ ಎಂದು ಕವಿರಾಜ್ ನಕ್ಕರು.

click here
‘ಎದೆಯಲ್ಲಿ ಕನಸು ನೂರು ಜಿಗಿಜಿಗಿಜಿಗಿದು’ ಹಾಡು ಡೀಜೆ ಗೀತೆಯಾಗಿದೆ ಎಂದು ಅವರು ಮಾತು ಸೇರಿಸಿದರು. ಕಣ್ಣಲ್ಲಿ ಮಾತಾಡಿ, ಮನಸ್ಸಲ್ಲಿ ಪ್ರೀತಿ ಮಾಡುವ ಈ ಚಿತ್ರ ನಿಜಕ್ಕೂ ವಿಭಿನ್ನ ಎಂದವರು ಮಾತು ಬರೆದಿರುವ ಸಾಯಿಕೃಷ್ಣ.

‘ಹಾಡು ಸಂತೋಷಕ್ಕೆ’ ಎಂಬ ಚಿತ್ರದ ತಮ್ಮ ಕಥೆಯನ್ನು ಸಂಜಯ್ ಕದ್ದಿದ್ದಾರೆ ಎಂದು ಗೆಳೆಯ ಆನಂದ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ‘ಪರಿಚಯ’ ಕದ್ದ ಕಥೆ ಅಲ್ಲವೇ ಅಲ್ಲ ಎಂದು ಸಂಜಯ್ ವಾಣಿಜ್ಯ ಮಂಡಳಿಗೂ ಮನದಟ್ಟು ಮಾಡಿಸಿದ್ದಾರೆ. ‘ಹಾಡು ಸಂತೋಷಕ್ಕೆ’ ಕೂಡ ತಮ್ಮದೇ ಕಥೆ ಎಂದು ಸಂಜಯ್ ಎದೆಮುಟ್ಟಿಕೊಂಡು ಹೇಳಿದರು. ಸ್ಟೈಲಿಶ್ ಆಗಿರುವ ‘ಪರಿಚಯ’ ಯುವಕರ ಮನಸ್ಸನ್ನು ಖಂಡಿತ ಗೆಲ್ಲುತ್ತದೆ ಎಂಬುದು ಸಂಜಯ್ ವಿಶ್ವಾಸ.

ತರುಣ್ ತಂಗಿಯ ಪಾತ್ರದಲ್ಲಿ ನಟಿಸಿರುವ ಮೋನಿಷಾ ಅವಕಾಶ ಕೊಟ್ಟವರಿಗೆ ಧನ್ಯವಾದ ಸಲ್ಲಿಸಿದರು. ಎರಡನೇ ನಾಯಕಿ ಸಿಂಧು ‘ಚಿತ್ರವನ್ನು ಪ್ರೀತಿಯಿಂದ ಮಾಡಿದೀವಿ. ಆಶೀರ್ವದಿಸಿ’ ಎಂದು ಹೇಳಿ ಕೂತರು.

ಇತರ ಸುದ್ದಿಗಳು
ಸಂಜು- ಗೀತಾ ಮದುವೆಗೆ ಸಜ್ಜು
98ರ ನಾಯಕ 88ರ ನಾಯಕಿ
‘ಯಾವ ಅವಕಾಶವೂ ಚಿಕ್ಕದಲ್ಲ’
‘ಮೃದು ಮಧುರ ಪರಿಚಯ’
ಶಾಲೆಯಿಂದ ಬದುಕಿನವರೆಗೆ...
ಗುಟ್ಟಲ್ಲ, ನಿಜ!
ಇಷಾಗೆ ಅಮ್ಮನ ಸಾಥ್
‘ದೇವರು ಕೊಟ್ಟ ತಂಗಿ’ಗೆ ಪ್ರಥಮ ಪ್ರತಿ
ಎಕ್ಸ್‌ಪೋಸ್ ಇಷ್ಟವಿಲ್ಲ:ಅಸಿನ್
ಸಪೋಟ ಗಾರ್ಡನ್‌ನಲ್ಲಿ ‘ಸಂಚಾರಿ’
ಶೀಘ್ರದಲ್ಲೇ ‘ಸೂರ್ಯಕಾಂತಿ
ಅಜಯ್- ಕೊಂಕಣಾ ಜೋಡಿ
ರಿತೇಶ್ ಬೇಸರ
ಅಪ್ಪು-ವಿಜಯ್ ಅಪ್ಪುಗೆ
ಶರ್ಮಿಳಾ- ಸೋಹಾ ಒಟ್ಟಿಗೆ
ರಣಬೀರ್- ಕತ್ರಿನಾ ಕಣ್ಣಾಮುಚ್ಚಾಲೆ
ಅಜ್ಜಿಯಾಗುವವರೆಗೂ ನಟಿಸುವೆ: ರೇಣು
‘ಶಬರಿ’ ಚಿತ್ರೀಕರಣ ಮುಕ್ತಾಯ
ಶಿವಾರ್ಜುನ್ ಸೈಕಲ್
‘ಹವಾ’ಸಿದ್ಧ
ಕುತೂಹಲದ ‘ಆ... ಮರ್ಮ’
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618