|
ನಗರದಲ್ಲಿ ಇದೀಗ ಎಂದಿನಂತೆ ಕ್ರಿಕೆಟ್ ಜ್ವರ ಆರಂಭವಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಮ್ಮೆ ಟ್ವೆಂಟಿ-20 ಕ್ರಿಕೆಟ್ ನೋಡುವ ಕುತೂಹಲ. ಅಂತೆಯೇ ಇಂದಿನಿಂದ ನಗರದಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ- 20 ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ನಗರಕ್ಕೆ ಬಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರಿಗೆ ‘ನ್ಯೂ ಹೋಪ್’ ಎಂಬ ಸ್ವಯಂ ಸೇವಾ ಸಂಸ್ಥೆಯ ಮಕ್ಕಳು ಗಂಧದ ಹಾರ ಹಾಕಿ ತಿಲಕ ಇಟ್ಟು ಸ್ವಾಗತಿಸಿದರು. ಆಟದಲ್ಲಿ ಜಯಗಳಿಸಿ ಎಂದು ಹರಿಸಿದರು.
ಈ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿದ್ದ ರಿಗ್ಲೆ ಚೂಯಿಂಗ್ ಗಮ್. ಇದೇ ಸಂದರ್ಭದಲ್ಲಿ ತಂಡದ ನಾಯಕ ಅನಿಲ್ ಕುಂಬ್ಳೆ ಅವರು ರಿಗ್ಲೆ ಇಂಡಿಯಾ ಸಂಸ್ಥೆಯ ನಿರ್ದೇಶಕ ಗೌತಮ್ ಶರ್ಮಾ ಅವರಿಗೆ ತಂಡದ ಸದಸ್ಯರ ಸಹಿ ಹೊಂದಿರುವ ಬ್ಯಾಟ್ ನೀಡಿದರು. g
|