ವಾಷಿಂಗ್ಟನ್ (ಎಎಫ್‌ಪಿ): ಅಲಾಸ್ಕಾದ ಅಲ್ಯೂಟಿಯನ್ ದ್ವೀಪದಲ್ಲಿ ಮಂಗಳವಾರ ಪ್ರಬಲ ಭೂಕಂಪನ ಸಂಭವಿಸಿದ್ದು ರಿಚರ್ ಮಾಪಕದಲ್ಲಿ ಇದರ ತೀವ್ರತೆ 6.2ರಷ್ಟಿತ್ತೆಂದು ಅಮೆರಿಕ ಭೂಸರ್ವೇಕ್ಷಣಾ ಇಲಾಖೆಯ ವರದಿ ತಿಳಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಭೂಕಂಪದಿಂದ ಯಾವುದೇ ಸಾವು-ನೋವು ಸಂಭವಿಸಿರುವ ವರದಿಯಾಗಿಲ್ಲ.