ಬುಧವಾರ, ಅಕ್ಟೋಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನದ ಕೊನೆಯು ಜ್ಞಾನವೇ ಹೊರತು ಯಶಸ್ಸಾಗಲಿ, ಹಣವಾಗಲೀ ಅಲ್ಲ.
--ನ್ಯೂಮನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕರ್ನಾಟಕ ದರ್ಶನ
ಮೆಟ್ರೊ ಮಂಗಳವಾರ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಕೃಷಿ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
ಪಾಕಿಸ್ತಾನ ವಶಪಡಿಸಿಕೊಳ್ಳುವುದು ತಾಲಿಬಾನ್ ಗುರಿ
ಇಸ್ಲಾಮಿಕ್ ಉಗ್ರರು ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನದ ಮೇಲೆ ನಿಯಂತ್ರಣ ಹೊಂದುವ ಗುರಿಯಿಟ್ಟುಕೊಂಡಿದ್ದಾರೆಂದು ಅಮೆರಿಕದ ಮಾಧ್ಯಮಗಳು ಒಬಾಮಾ ಆಡಳಿತಕ್ಕೆ ಕಿವಿ ಮಾತು ಹೇಳಿವೆ


ವಾಷಿಂಗ್ಟನ್: ಇಸ್ಲಾಮಿಕ್ ಉಗ್ರರು ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನದ ಮೇಲೆ ನಿಯಂತ್ರಣ ಹೊಂದುವ ಗುರಿಯಿಟ್ಟುಕೊಂಡಿದ್ದಾರೆಂದು ಒಬಾಮಾ ಆಡಳಿತಕ್ಕೆ ಕಿವಿ ಮಾತು ಹೇಳಿರುವ ಅಮೆರಿಕದ ಮಾಧ್ಯಮಗಳು ತಾಲಿಬಾನ್‍ಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಅಮೆರಿಕ ಹಿಂದೆ ಸರಿದರೆ ಅದು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ದೊಡ್ಡ ತಿರುಗೇಟಾಗಬಹುದೆಂದು ಅಭಿಪ್ರಾಯಪಟ್ಟಿವೆ.

ಒಂದು ಕಾಲದಲ್ಲಿ ತಾಲಿಬಾನ್‍ಗಳ ವಿರುದ್ಧ ದಾಳಿ ನಡೆಸಲು ಹಿಂಜರಿಯುತ್ತಿದ್ದ ಪಾಕಿಸ್ತಾನ ಸೇನೆ ಈಗ ವಾಝಿರಿಸ್ತಾನದಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಇದನ್ನು ಸ್ವಾಗತಿಸುತ್ತಿರುವ ಒಬಾಮ ಆಡಳಿತ ಮಾತ್ರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‍ಗಳನ್ನು ಸೋಲಿಸುವ ತನ್ನ ತಂತ್ರದಿಂದ ಹಿಂದೆ ಸರಿಯು ತಂತ್ರವೊಂದರ ಬಗ್ಗೆ ಚಿಂತಿಸುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಈ ಬಗೆಯ ತಂತ್ರವೊಂದರನ್ನು ಬಳಸುವುದರಿಂದ ತಾಲಿಬಾನ್‍ಗಳ ವಿರುದ್ಧ ಸಾವನ್ನೂ ಲೆಕ್ಕಿಸದೇ ಹೋರಾಡುತ್ತಿರುವ ಅಮೆರಿಕನ್ ಸೈನಿಕರಿಗೆ ಗೆಲ್ಲುವ ಅವಕಾಶವೇ ಕೊಡದೆ ಹೀಗಳೆದಂತಾಗುತ್ತದೆ. ಮಾತ್ರವಲ್ಲ ಜಿಹಾದಿಗಳ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಹೋರಾಟಕ್ಕೂ ಅಡ್ಡಿಯಾಗುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ಅಭಿಪ್ರಾಯಪಟ್ಟಿದೆ.

ಕಳೆದ ಕೆಲವು ದಿನಗಳಿಂದ ತಾಲಿಬಾನ್ ಮತ್ತು ಪಾಕಿಸ್ತಾನಿ ಸೇನೆಯ ನಡುವೆ ನಡೆಯುತ್ತಿರುವ ಘರ್ಷಣೆ ಒಂದು ಪೂರ್ಣ ಪ್ರಮಾಣದ ಯುದ್ಧದ ಮಟ್ಟಕ್ಕೆ ತಲುಪಿದೆ ಎಂದಿರುವ ವಾಷಿಂಗ್ಟನ್ ಪೋಸ್ಟ್ ಕಳೆದ ಒಂದು ವಾರದಲ್ಲಿ ನಡೆದಿರುವ ನಾಲ್ಕು ದೊಡ್ಡ ಪ್ರಮಾಣದ ದಾಳಿಗಳು ತಾಲಿಬಾನ್‍ಗಳು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡಿರುವ ಸೂಚನೆ. ಅಷ್ಟೇ ಅಲ್ಲ ತಾಲಿಬಾನ್ ಕೇವಲ ಬುಡಕಟ್ಟು ಸಮುದಾಯಗಳಿರುವ ಪಷ್ತೂನ್ ಪ್ರದೇಶಗಳನ್ನು ನಿಯಂತ್ರಿಸುವುದರಲ್ಲಿ ತೃಪ್ತಿ ಕಾಣುತ್ತಿಲ್ಲ. ಅದು ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನದ ಮೇಲೆ ನಿಯಂತ್ರಣ ಹೊಂದುವ ಅಭಿಲಾಷೆಯನ್ನು ಹೊಂದಿರುವಂತಿತೆದೆ  ಎಂದಿದೆ.

ಇತರ ಸುದ್ದಿಗಳು
ಪಾಕಿಸ್ತಾನ ವಶಪಡಿಸಿಕೊಳ್ಳುವುದು ತಾಲಿಬಾನ್ ಗುರಿ
ಚೀನಾ ತೀವ್ರ ಅಸಮಾಧಾನ
ರಷ್ಯಾಗೆ ಆಂಟನಿ: ರಕ್ಷಣಾ ಬಾಂಧವ್ಯ ವೃದ್ಧಿ ಸಾಧ್ಯತೆ
ಶಿಲ್ಪಾ ಶೆಟ್ಟಿ ರೆಸ್ಟೊರೆಂಟ್ ವಿರುದ್ಧ ಪರಿಹಾರಕ್ಕೆ ಮಾಜಿ ಮಾಲೀಕ ದಾವೆ
ಕ್ಯಾನ್ಸರ್: ತಾಯಿಯಿಂದ ಮಗುವಿಗೆ...
ಆಫ್ಘನ್‌ಗೆ 13ಸಾವಿರ ಪಡೆ
ನಾಲ್ವರಿಗೆ ರೈಟ್ ಲೈವ್ಲಿಹುಡ್ ಪ್ರಶಸ್ತಿ
ಬುಗ್ತಿ ಹತ್ಯೆ: ಮುಷರಫ್ ವಿರುದ್ಧ ಮೊಕದ್ದಮೆ
ಅತ್ಯಂತ ಪುಟ್ಟ ಡೈನೋಸಾರ್
ಅಲಾಸ್ಕಾದಲ್ಲಿ ಪ್ರಬಲ ಭೂಕಂಪ
‘ಆರ್ಥಿಕವಾಗಿ ಅಲ್‌ಖೈದಾಗಿಂತ ತಾಲಿಬಾನ್ ಬಲಿಷ್ಠ’
‘ಕೃಪಾಣ’ ಮಸೂದೆ ತಿರಸ್ಕರಿಸಿದ ಅರ್ನಾಲ್ಡ್
ಆಫ್ಘನ್ ಪೊಲೀಸರಿಗೆ ಗುಂಡು: ಸ್ಪಷ್ಟನೆ
ರಷ್ಯಾ-ಚೀನಾ ವಾಣಿಜ್ಯ ಒಪ್ಪಂದ
ಮಾದಕವಸ್ತು ಕಳ್ಳಸಾಗಣೆ: ಸೆರೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618