ಬುಧವಾರ, ಅಕ್ಟೋಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನದ ಕೊನೆಯು ಜ್ಞಾನವೇ ಹೊರತು ಯಶಸ್ಸಾಗಲಿ, ಹಣವಾಗಲೀ ಅಲ್ಲ.
--ನ್ಯೂಮನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕರ್ನಾಟಕ ದರ್ಶನ
ಮೆಟ್ರೊ ಮಂಗಳವಾರ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಕೃಷಿ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ವಶಿಲಿಬಾಜಿ ವ್ಯವಸ್ಥೆಗೆ ಅಂತ್ಯ-ರಾಹುಲ್ ಆಶಯ
ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಪಡೆಯುವುದಕ್ಕೆ ಹಾಗೂ ಪಕ್ಷದ ಉನ್ನತ ಹುದ್ದೆಗೆ ಏರಲು ಪ್ರಭಾವಿ ವ್ಯಕ್ತಿಗಳ ಮೊರೆ ಹೋಗುವುದು ಸಾಮಾನ್ಯ. ಆದರೆ ಇನ್ನು ಮುಂದೆ ಯುವ ಕಾಂಗ್ರೆಸ್‌ನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.


ಶಿಮ್ಲಾ (ಪಿಟಿಐ):
  ಟಿಕೆಟ್ ಪಡೆಯಲು ಮತ್ತು ಪಕ್ಷದ ಉನ್ನತ ಹುದ್ದೆಗೆ ಏರಲು ಕೆಲವು ಬಾರಿ ಪ್ರಭಾವಿ ವ್ಯಕ್ತಿಗಳ ಸಹಾಯ ಪಡೆದ ಪ್ರಕರಣಗಳಿರುವುದು ನಿಜ ಎಂದು ರಾಹುಲ್ ಒಪ್ಪಿಕೊಂಡಿದ್ದಾರೆ.

ಯುವಕರನ್ನು ಕಾಂಗ್ರೆಸ್‌ಗೆ ಸೆಳೆಯಲು ಇಲ್ಲಿಗೆ ಒಂದು ದಿನದ ಭೇಟಿಗೆ ಆಗಮಿಸಿರುವ ರಾಹುಲ್, ಪಕ್ಷದಲ್ಲಿ ವಶಿಲಿಬಾಜಿ ವ್ಯವಸ್ಥೆಯನ್ನು ಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ತಿಳಿಸಿದ್ದಾರೆ.

ಈ ಬದಲಾವಣೆಯನ್ನು ತತ್‌ಕ್ಷಣದಿಂದ ಜಾರಿ ಮಾಡಲು ಸಾಧ್ಯವಿಲ್ಲ. ಕ್ರಮೇಣವಾಗಿ ಬದಲಾವಣೆ ತರಲಾಗುವುದು ಎಂದು ಹೇಳಿದರು. 

ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ಮುಗಿಯುತ್ತ ಬಂದಿದೆ. ಉಳಿದ ರಾಜ್ಯಗಳಲ್ಲೂ ಆದಷ್ಟು ಬೇಗ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐನ ಜಿಲ್ಲಾ ಅಧ್ಯಕ್ಷರ ಪೈಕಿ ಶೇಕಡಾ 50ರಷ್ಟು ಪ್ರಜಾಸತಾತ್ಮಕವಾಗಿಯೇ ಆಯ್ಕೆಯಾಗಿದ್ದಾರೆ. ಬ್ಲಾಕ್ ಮತ್ತು ಪಂಚಾಯತ್ ಮಟ್ಟದಲ್ಲಿ ನೂರಕ್ಕೆ ನೂರರಷ್ಟು ಪ್ರಜಾಸತಾತ್ಮಕವಾಗಿ ಆಯ್ಕೆಯಾಗಿದ್ದಾರೆ ಎಂದು ರಾಹುಲ್ ತಿಳಿಸಿದ್ದಾರೆ.

ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡುವ ವಿಧಾನವನ್ನು ಮುಂದಿನ ವರ್ಷ ದೇಶದಾದ್ಯಂತ ಅನುಸರಿಸಲಾಗುವುದು ಎಂದು ಹೇಳಿದ್ದಾರೆ.

35 ವರ್ಷದೊಳಗಿನ ಅಪರಾಧ ಹಿನ್ನೆಲೆ ಇರದ ಯುವಕರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಹಾಗೂ ಚುನಾಯಿತ ಪದಾಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ರಾಹುಲ್ ಹೆಳಿದ್ದಾರೆ.

ಇತರ ಸುದ್ದಿಗಳು
ನಕ್ಸಲರಿಂದ ವ್ಯಾಪಕ ಹಿಂಸಾಚಾರ
ಅರುಣಾಚಲ ನಮ್ಮದು: ಚೀನಾಕ್ಕೆ ತಿರುಗೇಟು
ಮಹಿಳಾ ಮೀಸಲಾತಿ ಶೀಘ್ರ ಅಂಗೀಕಾರಕ್ಕೆ ಒತ್ತಾಯ
ಆಂಧ್ರದಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಬಿರುಸು
ಮಹಾರಾಷ್ಟ್ರ: ಶೇ 60ರಷ್ಟು ಮತದಾನ
ಅರುಣಾಚಲ: ಶೇ 70 ಮತದಾನ
ಹರಿಯಾಣ: ಶೇ 65 ಮತದಾನ
ಚೀನಾಕ್ಕೆ ತಿರುಗೇಟು ನೀಡಿದ ಭಾರತ
ತೇಕ್ಕಡಿ : ದೋಣಿ ದೋಷಕಾರಣ
ಪೊಲೀಸ್ ಅಧಿಕಾರಿಗಳ ಹತ್ಯೆ
ತಿರುಪತಿ ಲಾಡು: ನೋಟಿಸ್
ಏಕರೂಪದ ಪ್ರವೇಶ ಪರೀಕ್ಷೆ
ಲೈಂಗಿಕ ಕಿರುಕುಳ: ಬಂಧನ
ಲಂಚ ಸ್ವೀಕಾರ: ಕೇಂದ್ರ ಸ್ಪಷ್ಟನೆ
ಅಭಿನಂದನಾ ಇ-ಮೇಲ್ ಕಿರಿಕಿರಿ
ವಶಿಲಿಬಾಜಿ ವ್ಯವಸ್ಥೆಗೆ ಅಂತ್ಯ-ರಾಹುಲ್ ಆಶಯ
ರಾಜಕೀಯ:ಹೋಟೆಲ್ ಮುಚ್ಚಿಸಿದ ಅಧಿಕಾರಿ
ಚಾಲಕನ ದೇಹ ತೂರಿ ಹೊರ ಬಂದ 7 ಅಡಿ ಉದ್ದದ ಸಲಾಕೆ
ಇಬ್ಬರು ಬಲಿ
ಸೂರ್ಯ ದೇವಾಲಯ: ತೊಲೆ ಕುಸಿತ
ಎಂಎನ್‌ಎಸ್ ಬೆಂಬಲ ಬಯಸುವುದಿಲ್ಲ: ಪವಾರ್
ರೈಲಿನಲ್ಲಿ ಡಕಾಯಿತಿ: ಗ್ರಾಮಸ್ಥರಿಂದ ಹತ್ಯೆ
ತನಿಖೆಗೆ ಸಿಪಿಐ ಆಗ್ರಹ
ಚುನಾವಣಾಧಿಕಾರಿಗಳ ರಕ್ಷಣೆಗೆ ಹೆಲಿಕಾಪ್ಟರ್
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618