ಬುಧವಾರ, ಅಕ್ಟೋಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನದ ಕೊನೆಯು ಜ್ಞಾನವೇ ಹೊರತು ಯಶಸ್ಸಾಗಲಿ, ಹಣವಾಗಲೀ ಅಲ್ಲ.
--ನ್ಯೂಮನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕರ್ನಾಟಕ ದರ್ಶನ
ಮೆಟ್ರೊ ಮಂಗಳವಾರ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಕೃಷಿ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ಶೃಂಗೇರಿ: ಇಬ್ಬರು ನಕ್ಸಲ್ ಬೆಂಬಲಿಗರ ಬಂಧನ
ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಸೋಮವಾರ ರಾತ್ರಿ ಇಬ್ಬರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.


ಶೃಂಗೇರಿ:
 ಇಲ್ಲಿಗೆ ಸಮೀಪದ ಯಡದಳ್ಳಿ ಕಾಲೋನಿಯ ಚಂದ್ರು ಬಿನ್ ಗೋಪಾಲ (27), ನಾರಾಯಣ ಬಿನ್ ಕಾಳಯ್ಯ (21) ಎಂಬುವರನ್ನು ಸೋಮವಾರ ರಾತ್ರಿ ನೆಮ್ಮಾರಿನ ಮಾಣಿಬೈಲು ಬಳಿ ಪೊಲೀಸ್ ಇನ್‌ಸ್ಪೆಕ್ಟರ್ ಸದಾನಂದ ತಿಪ್ಪಣ್ಣನವರ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ದ್ವಿಚಕ್ರ ವಾಹನವನ್ನೂ ವಶಪಡಿಸಿಕೊಂಡಿದೆ.

ಆರೋಪಿಗಳು ಕಳೆದ 3-4 ವರ್ಷಗಳಿಂದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ, ಮಂಡಗಾರು ಲತಾ, ಹೊಸಗದ್ದೆ ಪ್ರಭಾ ಸೇರಿದಂತೆ ಪ್ರಮುಖ ನಕ್ಸಲರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ನಕ್ಸಲರಿಗೆ ಬೇಕಾದ ವಸ್ತುಗಳನ್ನು ಒದಗಿಸುವುದು, ಅವರು ನೀಡಿದ ಭಿತ್ತಿಪತ್ರ ಅಂಟಿಸುವುದು, ಕರಪತ್ರ ಹಂಚುವುದು ಮೊದಲಾದ ಕೆಲಸ ಮಾಡುತ್ತಿದ್ದರು. ಇದನ್ನು ತನಿಖೆ ವೇಳೆ ಬಂಧಿತರಿಬ್ಬರೂ ಒಪ್ಪಿಕೊಂಡಿದ್ದಾರೆ. 

 ಇದೇ 3ರಂದು ರಾತ್ರಿ ಕುಂಚೇಬೈಲು ಶಾಲೆ ಹಾಗೂ ಬಸ್ ನಿಲ್ದಾಣದಲ್ಲಿ ಭಿತ್ತಿಪತ್ರ ಅಂಟಿಸಿದ್ದು, ಕರಪತ್ರಗಳನ್ನು ಎಸೆದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಬಂಧಿತ ಆರೋಪಿಗಳನ್ನು ಮಾಧ್ಯಮದವರೆದು ಪ್ರದರ್ಶಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ಸುದ್ದಿಗಾರರ ಜತೆ ಮಾತನಾಡಿ, ದಲಿತ ಮತ್ತು ಗಿರಿಜನ ಸಂಘಟನೆಗಳ ಪ್ರಮುಖರು ಬುಧವಾರ ಪೊಲೀಸ್ ಇನ್‌ಸ್ಪೆಕ್ಟರ್‌ರನ್ನು ಭೇಟಿ ಮಾಡಿ, ‘ನಕ್ಸಲ್ ಪರ ಸಹಾಯ ಮಾಡುತ್ತಿರುವ ವ್ಯಕ್ತಿಗಳನ್ನು, ಅಂತಹ ಚಟುವಟಿಕೆ ಬೆಂಬಲಿಸುವವರನ್ನು ಹತ್ತಿಕ್ಕುವ ಪೊಲೀಸರ ಕ್ರಮ ಸ್ವಾಗತಿಸುತ್ತೇವೆ. ಆದರೆ ತಮಗೆ ರಕ್ಷಣೆ ನೀಡಬೇಕು’ ಎಂದು ಕೋರಿದ್ದಾಗಿ ಎಸ್‌ಪಿ ವಿವರಿಸಿದರು. ದಿಂಡೋಡಿಯ ಗುಂಡಿನ ಚಕಮಕಿ ನಂತರ ನಕ್ಸಲ್ ಚಟುವಟಿಕೆ ಬಗ್ಗೆ ಕೈಗೊಂಡ ಯಶಸ್ವೀ ಕಾರ್ಯಾಚರಣೆ ಇದಾಗಿದೆ ಎಂದೂ ತಿಳಿಸಿದರು.

ಹೆಚ್ಚುವರಿ ಎಸ್‌ಪಿ ಮುತ್ತೂರಾಯ, ನಕ್ಸಲ್ ನಿಗ್ರಹ ದಳದ ಪ್ರಭಾಕರ್, ಡಿವೈಎಸ್‌ಪಿ ಅಬ್ದುಲ್ ಅಹಾದ್, ಇನ್‌ಸ್ಪೆಕ್ಟರ್ ಸದಾನಂದ ತಿಪ್ಪಣ್ಣನವರ್, ಸಬ್ ಇನ್‌ಸ್ಪೆಕ್ಟರ್ ಸಚಿನ್ ಸುದ್ದಿಗೋಷ್ಠಿಯಲ್ಲಿದ್ದರು.

ಇತರ ಸುದ್ದಿಗಳು
ಶೃಂಗೇರಿ: ಇಬ್ಬರು ನಕ್ಸಲ್ ಬೆಂಬಲಿಗರ ಬಂಧನ
ಲಾರಿಗಳ ಮೇಲೆ ಸುಂಕದ ಹೊರೆ
ವಿಜಯನಗರ: ಪಟ್ಟಾಭಿಷೇಕ ಮಹೋತ್ಸವ ಮುಂದೂಡಿಕೆ
ವರ್ತುಲ ರಸ್ತೆ ಟೆಂಡರ್: ತನಿಖೆಗೆ ಮೀನಾಮೇಷ
ಕೃಪಾಂಕ ನೌಕರರ ಅತಂತ್ರ ಸ್ಥಿತಿ
ಡೋಣಿ ಎಂಬ ‘ಹುಚ್ಚು ಹೊಳೆ’
ಬಿತ್ತನೆ ಬೀಜಕ್ಕೆ ರೈತರ ಪರದಾಟ
‘ವಾಣಿಜ್ಯ ಕೋರ್ಟ್’
ಮೈಸೂರು: ಉದ್ಯಮಿ, ಪುತ್ರನ ಅಪಹರಣ
ನೆರೆ: 1,080 ಕೋಟಿ ನಷ್ಟ
22ರಿಂದ ಪ್ರಸ್ತಕ ಪ್ರದರ್ಶನ
ಬಿರುಕುಬಿಟ್ಟ ಹತ್ತೇ ದಿನದಲ್ಲಿ ದುರಸ್ತಿ
ಸರ್ಕಾರಿ ನೌಕರರ ಕೆಲಸದ ಅವಧಿ ಹೆಚ್ಚಳಕ್ಕೆ ನಿರ್ಧಾರ
ದೀಪಾವಳಿಗೆ ವಿಶೇಷ ಸಾರಿಗೆ
ಪ್ರವಾಹ ಪರಿಹಾರ ನಿಧಿಗೆ ಕಾಣಿಕೆ ನೀಡಿದವರು
ಸಾಹಿತ್ಯ ಸಮ್ಮೇಳನ ಮುಂದೂಡಿಕೆ?
‘ನೆರೆ ತೆರಿಗೆ’ಗೆ ಸಿದ್ಧರಾಮಯ್ಯ ವಿರೋಧ
ಈ ಬಾರಿ ತಲಕಾಡು ಉತ್ಸವವೂ ಸರಳ
ಕುಸಿದ ಶಾಲೆ: ಕ್ಷೀಣಿಸಿದ ಶಿಕ್ಷಣ
ದಿನಕರನ್ ರಾಜೀನಾಮೆ ವದಂತಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618