ಬುಧವಾರ, ಅಕ್ಟೋಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನದ ಕೊನೆಯು ಜ್ಞಾನವೇ ಹೊರತು ಯಶಸ್ಸಾಗಲಿ, ಹಣವಾಗಲೀ ಅಲ್ಲ.
--ನ್ಯೂಮನ್
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕರ್ನಾಟಕ ದರ್ಶನ
ಮೆಟ್ರೊ ಮಂಗಳವಾರ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ಕೃಷಿ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ಸರ್ಕಾರಿ ನೌಕರರ ಕೆಲಸದ ಅವಧಿ ಹೆಚ್ಚಳಕ್ಕೆ ನಿರ್ಧಾರ
ನೆರೆ ಹಾವಳಿ ಹಿನ್ನೆಲೆಯಲ್ಲಿ ಕನಿಷ್ಠ ಆರು ತಿಂಗಳ ಕಾಲ ಸರ್ಕಾರಿ ನೌಕರರ ಕೆಲಸದ ಅವಧಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.


ಬೆಂಗಳೂರು:
ಬೆಳಿಗ್ಗೆ ಒಂದು ಗಂಟೆ ಮುಂಚಿತವಾಗಿ ಕಚೇರಿ ತಲುಪಬೇಕು. ಸಂಜೆ ಒಂದು ಗಂಟೆ ತಡವಾಗಿ ಮನೆಗೆ ಹೊರಡಬೇಕು ಎನ್ನುವ ಆದೇಶವನ್ನು ಹೊರಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಇದಕ್ಕೆ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಒಪ್ಪಿಗೆ ಸೂಚಿಸಿದ್ದು, ಆರು ತಿಂಗಳ ಕಾಲ ಈ ರೀತಿ ಕೆಲಸ ಮಾಡುವಂತೆ ಕೋರಲಾಗಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿ ಸುತ್ತೋಲೆ ಹೊರಬೀಳುವ ಸಾಧ್ಯತೆ ಇದೆ.

ಸರ್ಕಾರದ ಹೊಸ ತೀರ್ಮಾನದ ಪ್ರಕಾರ ಬೆಳಿಗ್ಗೆ 9ರಿಂದ ಸಂಜೆ 6.30ರವರೆಗೆ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಚೇರಿಗಳಲ್ಲಿ ಇದ್ದು ಕೆಲಸ ಮಾಡಬೇಕಾಗುತ್ತದೆ. ಈ ಹೊಸ ವ್ಯವಸ್ಥೆ ಎಂದಿನಿಂದ ಜಾರಿಗೆ ಬರುತ್ತದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.

ಜಿಂದಾಲ್‌ಗೆ ಸಿಎಂ ವಾಪಸ್: ನಗರದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟದ ತುರ್ತು ಸಭೆ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ರಾಂತಿ ಸಲುವಾಗಿ ಪುನಃ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ವಾಪಸಾದರು.

ಸೋಮವಾರ ಸಂಜೆಯೇ ವಿಶ್ರಾಂತಿಗೆ ತೆರಳಿದ್ದ ಅವರು ಸಂಪುಟ ಸಭೆ ಹಿನ್ನೆಲೆಯಲ್ಲಿ ಸಂಜೆ ವಿಧಾನಸೌಧಕ್ಕೆ ಆಗಮಿಸಿದರು. ಇದಾದ ನಂತರ ಜಿಂದಾಲ್‌ಗೆ ವಾಪಸಾಗಿರುವ ಅವರು ಇನ್ನೂ ಎರಡು ದಿನ ಅಲ್ಲೇ ಉಳಿಯುವ ಸಾಧ್ಯತೆ ಇದೆ. ಈ ನಡುವೆ, ಇದೇ 15ರಿಂದ ನೆರೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಬೇಕಿದ್ದ ಕಾರ್ಯಕ್ರಮವನ್ನೂ ಅವರು ಮುಂದಕ್ಕೆ ಹಾಕಿದ್ದಾರೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿಯವರು ಈ ಕೂಡಲೇ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುವುದರಿಂದ ಪರಿಹಾರ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ದೀಪಾವಳಿ ನಂತರ ಪ್ರವಾಸ ಕೈಗೊಳ್ಳುವುದು ವಿಹಿತ ಎಂದು ಕೆಲವು ಸಚಿವರು ನೀಡಿದ ಸಲಹೆಗೆ ಅವರು ಓಗೊಟ್ಟಿದ್ದಾರೆ ಎನ್ನಲಾಗಿದೆ.

ಇತರ ಸುದ್ದಿಗಳು
ಶೃಂಗೇರಿ: ಇಬ್ಬರು ನಕ್ಸಲ್ ಬೆಂಬಲಿಗರ ಬಂಧನ
ಲಾರಿಗಳ ಮೇಲೆ ಸುಂಕದ ಹೊರೆ
ವಿಜಯನಗರ: ಪಟ್ಟಾಭಿಷೇಕ ಮಹೋತ್ಸವ ಮುಂದೂಡಿಕೆ
ವರ್ತುಲ ರಸ್ತೆ ಟೆಂಡರ್: ತನಿಖೆಗೆ ಮೀನಾಮೇಷ
ಕೃಪಾಂಕ ನೌಕರರ ಅತಂತ್ರ ಸ್ಥಿತಿ
ಡೋಣಿ ಎಂಬ ‘ಹುಚ್ಚು ಹೊಳೆ’
ಬಿತ್ತನೆ ಬೀಜಕ್ಕೆ ರೈತರ ಪರದಾಟ
‘ವಾಣಿಜ್ಯ ಕೋರ್ಟ್’
ಮೈಸೂರು: ಉದ್ಯಮಿ, ಪುತ್ರನ ಅಪಹರಣ
ನೆರೆ: 1,080 ಕೋಟಿ ನಷ್ಟ
22ರಿಂದ ಪ್ರಸ್ತಕ ಪ್ರದರ್ಶನ
ಬಿರುಕುಬಿಟ್ಟ ಹತ್ತೇ ದಿನದಲ್ಲಿ ದುರಸ್ತಿ
ಸರ್ಕಾರಿ ನೌಕರರ ಕೆಲಸದ ಅವಧಿ ಹೆಚ್ಚಳಕ್ಕೆ ನಿರ್ಧಾರ
ದೀಪಾವಳಿಗೆ ವಿಶೇಷ ಸಾರಿಗೆ
ಪ್ರವಾಹ ಪರಿಹಾರ ನಿಧಿಗೆ ಕಾಣಿಕೆ ನೀಡಿದವರು
ಸಾಹಿತ್ಯ ಸಮ್ಮೇಳನ ಮುಂದೂಡಿಕೆ?
‘ನೆರೆ ತೆರಿಗೆ’ಗೆ ಸಿದ್ಧರಾಮಯ್ಯ ವಿರೋಧ
ಈ ಬಾರಿ ತಲಕಾಡು ಉತ್ಸವವೂ ಸರಳ
ಕುಸಿದ ಶಾಲೆ: ಕ್ಷೀಣಿಸಿದ ಶಿಕ್ಷಣ
ದಿನಕರನ್ ರಾಜೀನಾಮೆ ವದಂತಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618