ಶನಿವಾರ, ಅಕ್ಟೋಬರ್ 17, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನ್ಯಾಯ ಪ್ರಾಮಾಣಿಕರಿಗೆ ಸಿಕ್ಕೇ ಸಿಗುತ್ತದೆ. ಆದರೆ ತಡವಾಗಿ.
--ಶೆಲ್ಲಿ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಯುವಜನ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಕೃಷಿ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ನಾಗರಿಕ ಪರಮಾಣು ಇಂಧನ ಒಪ್ಪಂದ
ಅಣು ಸ್ಥಾವರ ಗುರುತಿಸಲು ಅಸ್ತು
ಭಾರತಕ್ಕೆ ನಿರ್ದಿಷ್ಟವಾದ ಪರಮಾಣು ಸುರಕ್ಷತಾ ಒಪ್ಪಂದಕ್ಕೆ (ಐಎಸ್‌ಎಸ್‌ಎ) 35 ಸದಸ್ಯರ ಗವರ್ನರ್‌ಗಳ ಮಂಡಳಿ ಒಪ್ಪಿಗೆ ಸೂಚಿಸಿದ 14 ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.


ಮುಂಬೈ (ಪಿಟಿಐ):
ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (ಐಎಇಎ) ಸುರಕ್ಷತಾ ಸುಪರ್ದಿಗೆ ಒಳಪಡಿಸಲಾಗುವ ಅಣು ವಿದ್ಯುತ್ ಸ್ಥಾವರಗಳನ್ನು ಗುರುತಿಸುವ ಯೋಜನೆಗೆ ಭಾರತ ಸಮ್ಮತಿ ಸೂಚಿಸಿದೆ.

ಗುರುವಾರ ರಾತ್ರಿ ಈ ಮಹತ್ವದ ನಿರ್ಧಾರಕ್ಕೆ ಬರುವ ಮೂಲಕ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೆರಿಕಕ್ಕೆ ಭೇಟಿ ನೀಡುವ ತಿಂಗಳ ಮೊದಲೇ ಅಗತ್ಯದ ವಿಧಿವಿಧಾನವನ್ನು ಭಾರತ ಪೂರೈಸಿದಂತಾಗಿದೆ.

ಈ ಯೋಜನೆಯಂತೆ 2014ರೊಳಗೆ ದೇಶದಲ್ಲಿನ 22 ಅಣು ಸ್ಥಾವರಗಳ ಪೈಕಿ 14 ಸ್ಥಾವರಗಳನ್ನು ಐಎಇಎ ಸುರಕ್ಷತಾ ಸುಪರ್ದಿಗೆ ಒಪ್ಪಿಸಬೇಕಾಗುತ್ತದೆ.   ಭಾರತ ತನ್ನ ಅಣು ಸ್ಥಾವರಗಳನ್ನು ಗುರುತಿಸುವ ಮೂಲಕ ಅಂತರರಾಷ್ಟ್ರೀಯ ನಾಗರಿಕ ಪರಮಾಣು ಸಹಕಾರ ಒಪ್ಪಂದ ಜಾರಿಗೆ ಬರುವುದಕ್ಕೆ ಅನುವು ಮಾಡಿದಂತಾಗಿದೆ ಎಂದು ಅಣು ಶಕ್ತಿ ಇಲಾಖೆ ಮೂಲಗಳು ತಿಳಿಸಿವೆ.

ಭಾರತಕ್ಕೆ ನಿರ್ದಿಷ್ಟವಾದ ಪರಮಾಣು ಸುರಕ್ಷತಾ ಒಪ್ಪಂದಕ್ಕೆ (ಐಎಸ್‌ಎಸ್‌ಎ) 35 ಸದಸ್ಯರ ಗವರ್ನರ್‌ಗಳ ಮಂಡಳಿ ಒಪ್ಪಿಗೆ ಸೂಚಿಸಿದ 14 ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಒಬಾಮಾ ಆಡಳಿತದ ಅವಧಿಯಲ್ಲಿನ ಪ್ರಧಾನಿ ಸಿಂಗ್ ಅವರ ಪ್ರಥಮ ಅಮೆರಿಕ ಭೇಟಿ ನವೆಂಬರ್ 23ರಂದು ಆರಂಭವಾಗಲಿದ್ದು, ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ಜಾರಿಗೆ ತರುವುದು ಅವರ ಪ್ರಥಮ ಆದ್ಯತೆಯಾಗಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ರಾಜಸ್ತಾನ ಅಣು ವಿದ್ಯುತ್ ಸ್ಥಾವರದ (ಆರ್‌ಎಪಿಎಸ್) ತಲಾ 220 ಮೆಗಾವಾಟ್ ಸಾಮರ್ಥ್ಯದ 5 ಮತ್ತು 6ನೇ ಘಟಕಗಳು ಗುರುವಾರ ಔಪಚಾರಿಕವಾಗಿ ಐಎಸ್‌ಎಸ್‌ಎನ ಸುಪರ್ದಿಗೆ ಒಪ್ಪಿಸಲಾಯಿತು. 

ಹೈದರಾಬಾದ್‌ನ ಪರಮಾಣು ಇಂಧನ ಸಂಕೀರ್ಣದಿಂದ ಈ ಘಟಕಗಳಿಗೆ ಯುರೇನಿಯಂ ಸಾಗಿಸುವ ಪ್ರಕ್ರಿಯೆಯನ್ನು ಐಎಇಎ ಸೂಕ್ಷ್ಮವಾಗಿ ಗಮನಿಸಲಿದೆ. ಈ ಸ್ಥಾವರಗಳು ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಿದ್ದು, ಐಎಇಎ ವೀಕ್ಷಕರು ಅಲ್ಲಿ ಈಗಾಗಲೇ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.

ಐಐಇಎ ಈಗಾಗಲೇ ತಾರಾಪುರದ 1-2 ಘಟಕಗಳು, ಆರ್‌ಎಪಿಎಸ್‌ನ 1-2 ಘಟಕಗಳು, ಕಂದನ್‌ಕೊಳಂನ 1-2 ಘಟಕಗಳನ್ನು ಐಎಸ್‌ಎಸ್‌ಎ ಸುಪರ್ದಿಗೆ ಒಳಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.

ಆರ್‌ಎಪಿಎಸ್‌ನ 3-4ನೇ ಸ್ಥಾವರಗಳನ್ನು 2010ರಲ್ಲಿ, ಕಾಕ್ರಪಾರ ಅಣುವಿದ್ಯುತ್ ಸ್ಥಾವರದ 2 ಘಟಕಗಳನ್ನು 2012ರಲ್ಲಿ ಹಾಗೂ ನರೋರಾ ಅಣು ವಿದ್ಯುತ್ ಸ್ಥಾವರದ 2 ಘಟಕಗಳನ್ನು 2014ರಲ್ಲಿ  ಐಎಇಎ ಸುಪರ್ದಿಗೆ ಒಳಪಡಿಸಲು ಭಾರತ ನಿರ್ಧರಿಸಿದೆ.

ಅಣು ಸ್ಥಾವರಗಳನ್ನು ಪ್ರತ್ಯೇಕಿಸುವ ಯೋಜನೆಯಂತೆ ಭಾರತವು ತನ್ನ ಪ್ರಮುಖ ವ್ಯೆಹರಚನಾ ಪ್ರಯೋಗಾಲಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದೊಳಗೆ ಇರುವ ಸಿಐಆರ್‌ಯುಎಸ್ ಸಂಶೋಧನಾ ಘಟಕವನ್ನು 2010ರಲ್ಲಿ ಮುಚ್ಚಲಿದೆ.

ಇತರ ಸುದ್ದಿಗಳು
ಪಟಾಕಿ ಗೋದಾಮಿನಲ್ಲಿ ಭೀಕರ ಸ್ಫೋಟ: 30 ಸಾವು?
ಮಾಧವನ್ ನಾಯರ್ ತಿಂಗಳಾಂತ್ಯಕ್ಕೆ ನಿವೃತ್ತಿ
ಪಟಾಕಿ ಮಳಿಗೆ ಬೆಂಕಿ: 2 ಸಾವು
ನಿಜವಾದ ಸಂತ್ರಸ್ತರಿಗೆ ಪರಿಹಾರ ತಲುಪಿಸಿ
27ಕ್ಕೆ ಬೆಂಗಳೂರಿನಲ್ಲಿ ಸಭೆ
ಜಾಗತಿಕ ತಾಪಮಾನಕ್ಕೂ ಗಾಂಧಿ ಚಿಂತನೆಯೇ ಮದ್ದು
ರಾಜ್ಯಗಳಿಗೆ ಮಾದರಿ ಕಾನೂನು
ಗೋವಾದಲ್ಲಿ ಸ್ಫೋಟ: ಒಬ್ಬನ ಸಾವು
500ಕೋಟಿ ಹಗರಣದಲ್ಲಿ ಅಮಿತಾಬ್, ಅಮರ್ ಸಿಂಗ್
ಅಣು ಸ್ಥಾವರ ಗುರುತಿಸಲು ಅಸ್ತು
ಅವಿತಾಭ್, ಅಮರ್ ವಿರುದ್ಧ ದೂರು
‘ಎನ್‌ಎಸ್‌ಜಿಗೆ ಅಧುನಿಕ ಶಸ್ತ್ರಾಸ್ತ್ರ’
ಗುರುತಿನ ಸಂಖ್ಯೆಗೆ ಬೆರಳಚ್ಚು ಸಂಗ್ರಹ
ಲಘು ಯುದ್ಧ ವಿಮಾನ ಪರೀಕ್ಷಾ ಹಾರಾಟ ಯಶಸ್ವಿ
ಅರ್ಥಶಾಸ್ತ್ರಜ್ಞ ಸುಬ್ರಮಣಿಯನ್ ಇನ್ನಿಲ್ಲ
ದಿನಕರನ್ ಪ್ರಕರಣ ಚರ್ಚೆ ವಿಷಯವಲ್ಲ: ಮೊಯಿಲಿ
ಸಿಂಗ್ ಭೇಟಿಗೆ ಚೀನಾ ಉತ್ಸುಕ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618