ಗುರುವಾರ, ಅಕ್ಟೋಬರ್ 29, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಸತ್ಯಕ್ಕಾಗಿ ಏನನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗಮಾಡಬೇಡಿ.
--ಸ್ವಾಮಿ ವಿವೇಕಾನಂದ
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಕರ್ನಾಟಕ ದರ್ಶನ
ಯುವಜನ
ವಾಣಿಜ್ಯ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಅನಂತ್‌ನಾಗ್- ಕಾಸಿಗಂದ್ ರೈಲು ಸಂಚಾರಕ್ಕೆ ಪ್ರಧಾನಿ ನಿಶಾನೆ
‘ಉಗ್ರರನ್ನು ನಿಗ್ರಹಿಸಿದರೆ ಮಾತ್ರ ಚರ್ಚೆ’
ಹಿಂಸೆ ಮತ್ತು ಭಯೋತ್ಪಾದನೆಯು ಕಾಲ ಮುಗಿದಿದೆ ಎಂದು ಇಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ ಅವರು, ರಾಜ್ಯದಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಇದೇ ವೇಳೆ ಕೇಂದ್ರದ ನೆರವು ಪ್ರಕಟಿಸಿದರು.


ಕಾಶ್ಮಿರ ಹಾಗೂ ದೇಶದ ಇತರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಅನಂತ್‌ನಾಗ್- ಕಾಸಿಗಂದ್ ರೈಲು ಸೇವೆ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಕೇಂದ್ರ ಮರುಬಳಕೆ ಇಂಧನ ಖಾತೆ ಸಚಿವ ಫಾರೂಕ್ ಅಬ್ದುಲ್ಲಾ ಅವರು ನೆರೆದಿದ್ದ ಜನಸ್ತೋಮದತ್ತ ಕೈ ಬೀಸಿದರು. 
 - ಪಿಟಿಐ ಚಿತ್ರ

ಅನಂತನಾಗ್ (ಕಾಶ್ಮೀರ) (ಪಿಟಿಐ): ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ‘ಅರ್ಥ ಪೂರ್ಣ ವಿಚಾರ’ ಹೊಂದಿದ ಯಾರೊಂದಿಗಾದರೂ ಮಾತನಾಡಲು ಸಿದ್ಧ ಎಂದ ಪ್ರಧಾನಿ ಮನಮೋಹನ್ ಸಿಂಗ್, ರಾಷ್ಟ್ರದಲ್ಲಿ ಭಯೋತ್ಪಾದನೆ ಬಿತ್ತುತ್ತಿರುವ ವರಿಗೆ ಲಗಾಮು ಹಾಕಿದರೆ ಮಾತ್ರ ಪಾಕಿಸ್ತಾನ ದೊಂದಿಗೆ ಚರ್ಚೆ ನಡೆಸುವುದಾಗಿ ಸ್ಪಷ್ಟಪಡಿಸಿದರು.

ಹಿಂಸೆ ಮತ್ತು ಭಯೋತ್ಪಾದನೆಯು ಕಾಲ ಮುಗಿದಿದೆ ಎಂದು ಇಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ ಅವರು, ರಾಜ್ಯದಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಇದೇ ವೇಳೆ ಕೇಂದ್ರದ ನೆರವು ಪ್ರಕಟಿಸಿದರು.

ಜಮ್ಮು ಕಾಶ್ಮೀರದ ರಾಜಕೀಯ ಮ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ಎಲ್ಲಾ ವರ್ಗಗಳ ಜನರನ್ನೂ ಭಾಗಿಯಾಗಿಸಬೇಕು ಎಂದರು.

ಸಭೆಯ ನಂತರ, 18 ಕಿ.ಮೀ. ಅಂತರದಲ್ಲಿರುವ ಅನಂತ್‌ನಾಗ್- ಕಾಜಿಗಂದ್ ನಡುವೆ ರೈಲ್ವೆ  ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಅವರು, ಜಮ್ಮು ಮತ್ತು ಶ್ರೀನಗರಗಳ ನಡುವೆ ಬನಿಹಾಲ್ ಪಾಸ್ ಮೂಲಕ ರೈಲು ಸಂಚರಿಸುವ ದಿನ ಕೂಡ ದೂರವಿಲ್ಲ ಎಂದು ಭರವಸೆ ನೀಡಿದರು. ಉಗ್ರರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಇದೀಗ ನಡೆಸುತ್ತಿರುವ ಕಾರ್ಯಾಚರಣೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಭಯೋತ್ಪಾದಕ ಸಂಘಟನೆಗಳನ್ನು ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಭಯೋತ್ಪಾದಕರ ಸಿದ್ಧಾಂತದ ಜತೆ ಹೊಂದಾಣಿಕೆ ಮಾಡಿಕೊಂಡು, ಅವರನ್ನು ಗುರಾಣಿಯಾಗಿ ಬಳಸಿ ಕೊಳ್ಳಬಹುದು ಎಂಬ ಯೋಚನೆಗೆ ಯಾವ ಅರ್ಥವೂ ಇಲ್ಲ. ಉಗ್ರರು ಅಂತಿಮವಾಗಿ ಆಶ್ರಯದಾತರ ವಿರುದ್ಧವೇ ತಿರುಗಿ ಬಿದ್ದು ಸಾವು ಮತ್ತು ವಿಪತ್ತಿಗೆ ಮಾತ್ರ ಕಾರಣರಾಗುತ್ತಾರೆ. ಉಗ್ರರ ನಿಜವಾದ ಮುಖವನ್ನು ಪಾಕಿಸ್ತಾನದ ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಒಂದು ವೇಳೆ, ಪಾಕಿಸ್ತಾನ ಹೇಳುತ್ತಿರುವಂತೆ, ಅಲ್ಲಿರುವ ಉಗ್ರರು ‘ರಾಷ್ಟ್ರರಹಿತ’ರೇ ಆಗಿದ್ದರೆ, ಅವರನ್ನು ಬಂಧಿಸಿ, ಅವರ ಶಿಬಿರಗಳನ್ನು ನಾಶ ಮಾಡುವುದು ಅಲ್ಲಿನ ಸರ್ಕಾರದ ಗುರಿಯಾಗಬೇಕು ಎಂದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ, ಮುಖ್ಯ ಮಂತ್ರಿ ಒಮರ್ ಅಬ್ದುಲ್ಲಾ, ಕೇಂದ್ರ ಸಚಿವರಾದ ಫಾರೂಕ್ ಅಬ್ದುಲ್ಲಾ, ಗುಲಾಂ ನಬಿ ಆಜಾದ್, ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ವೇದಿಕೆಯಲ್ಲಿದ್ದರು.

ಇತರ ಸುದ್ದಿಗಳು
ಭದ್ರತಾಪಡೆಗಳ ಗುಂಡಿಗೆ 3 ಉಗ್ರರ ಬಲಿ
‘ಉಗ್ರರನ್ನು ನಿಗ್ರಹಿಸಿದರೆ ಮಾತ್ರ ಚರ್ಚೆ’
‘ಆಂಧ್ರದಿಂದ ಬಚಾವತ್ ವರದಿ ಉಲ್ಲಂಘನೆ’
ನಕ್ಸಲ್ ಪ್ರದೇಶಕ್ಕೆ ಸೇನೆ ರವಾನೆ: ಮಮತಾ ಬೇಡಿಕೆಗೆ ನಕಾರ
13 ಯುವಕರ ವಿರುದ್ಧ ದೂರು ದಾಖಲು
ಪಕ್ಷವೊಂದರ ವಿರುದ್ಧ ಪ್ರಶ್ನೆಪತ್ರಿಕೆ !
ಸದ್ಯದಲ್ಲೆ ತನಿಖಾ ತಂಡ ಅಮೆರಿಕಕ್ಕೆ
ಉದ್ಯೋಗ ಖಾತ್ರಿ ಗುರುತು ಚೀಟಿ:ಪರಿಶೀಲನೆಗೆ ಸೂಚನೆ
ಯೋಜನೆಗಳ ಶೀಘ್ರ ಅನುಷ್ಠಾನ: ಪ್ರಣವ್ ಸೂಚನೆ
ತೇಕ್ಕಡಿ: ದೋಣಿ ದೋಷ ಕಾರಣ
ರಾಹುಲ್ ಹೊಸ ಆಂದೋಲನ
ದೂರದ ರೈಲುಗಳ ಓಡಾಟಕ್ಕೆ ಮುನ್ನ ಪರೀಕ್ಷಾರ್ಥ ರೈಲು
ಶಿಶು ಮರಣ ಪ್ರಮಾಣದಲ್ಲಿ ಇಳಿಕೆ
ಉರ್ದುವಿನಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ
ಹೆರಿಗೆ ಸಮಯದಲ್ಲಿ ಕಡ್ಡಾಯ ನಗದು ಸವಲತ್ತು
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618