ವಾಷಿಂಗ್ಟನ್ (ಪಿಟಿಐ): ಆರ್ಥಿಕ ಕುಸಿ ಅಮೆರಿಕದಲ್ಲಿ ವಿಚ್ಛೇದನ ಸಂಖ್ಯೆಯ ಮೇಲೂ ಪರಿಣಾಮ ಬೀರಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ಆರ್ಥಿಕ ಕುಸಿತ ಕಾಣಿಸಿಕೊಂಡ ನಂತರದಲ್ಲಿ ದೇಶದಲ್ಲಿ ವಿಚ್ಛೇದನಗಳ ಸಂಖ್ಯೆಯಲ್ಲೂ ಕುಸಿತ ಉಂಟಾಗಿದೆ ಎಂದು ಪ್ರತಿಷ್ಠಿತ ದಿ ಅಮೆರಿಕನ್ ಅಕಾಡೆಮಿ ಆಫ್ ಮ್ಯಾಟ್ರಿಮೋನಿಯಲ್ ಲಾಯರ್ಸ್ (ಎಎಎಂಎಲ್) ನಡೆಸಿದ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 57ರಷ್ಟು ಮಂದಿ ವಿಚ್ಛೇದನ ಸಲ್ಲಿಸಲು ಭಯ ವ್ಯಕ್ತಪಡಿಸಿದ್ದಾರೆ.