ಲಂಡನ್ (ಪಿಟಿಐ): ಪಾಪ್ ಸಂಗೀತದ ರಾಣಿ ಎಂದೇ ಖ್ಯಾತಿ ಪಡೆದಿರುವ ಮಡೊನ್ನಾ ತಾನು ಬಯಸಿದ್ದನ್ನೆಲ್ಲಾ ಪಡೆದಿರಬಹುದು. ಆದರೆ ಭಾರತದ ಯೋಗ ಗುರು ವಿಕ್ರಮ್ ಚೌಧರಿ ಅವರಿಂದ ಖಾಸಗಿಯಾಗಿ ಯೋಗ ತರಬೇತಿ ಪಡೆಯುವಲ್ಲಿ ಮಾತ್ರ ವಿಫಲ ರಾಗಿದ್ದಾರೆ.
ತಮಗೆ ಪ್ರತ್ಯೇಕವಾಗಿ ಯೋಗ ತರಬೇತಿ ನೀಡಬೇಕು ಎಂಬ ಮಡೊನ್ನಾ ಅವರ ಕೋರಿಕೆಯನ್ನು ತಿರಸ್ಕರಿಸಿರುವ ಚೌಧರಿ, ಎಲ್ಲಾ ಶಿಷ್ಯರ ಜೊತೆಯಲ್ಲಿ ಯೋಗ ತರಬೇತಿ ಪಡೆಯುವುದಾದರೆ ಮಾತ್ರ ಬರಬಹುದು ಎಂದು ತಿಳಿಸಿದ್ದಾರೆ.
ಯೋಗ ಕಲಿಯಬೇಕಾದರೆ ಅಹಂ ಬಿಟ್ಟು ಎಲ್ಲರ ಜೊತೆಯಲ್ಲಿ ಕಲಿಯಬೇಕು ಎಂದು ತಿಳಿಸಿರುವುದಾಗಿ ಚೌಧರಿ ತಿಳಿಸಿದ್ದಾರೆ.
ಖ್ಯಾತನಾಮರಾದ ಜಾರ್ಜ್ ಕ್ಲೂನಿ, ಜೆಸ್ಸಿಕಾ ಸಿಂಪ್ಸನ್ ಮತ್ತು ಜಿಮ್ಮಿ ಕೆರಿ ಸಹ ಎಲ್ಲಾ ಶಿಷ್ಯರ ಜತೆ ಯೋಗ ಕಲಿಯುತ್ತಿರುವುದರಿಂದ ಮಡೊನ್ನಾಗೆ ಪ್ರತ್ಯೇಕವಾಗಿ ಯೋಗ ಕಲಿಸುವುದು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ತಮ್ಮ ಖಾಸಗಿ ವ್ಯಾಯಾಮ ಶಿಕ್ಷಕ ಟ್ರೆಸಿ ಅಂಡರ್‌ಸನ್ ಅವರ ಸೇವೆಯನ್ನು ನಿಲ್ಲಿಸಿರುವ ಮಡೊನ್ನಾ ಅವರು, ದೇಹ ಸೌಂದರ್ಯ ಕಾಪಾಡಿಕೊಳ್ಳಲು ಹೊಸ ಮಾರ್ಗ ಹುಡುಕುತ್ತ ಯೋಗ ಗುರುವಿನಿಂದ ತಿರಸ್ಕೃತರಾಗಿದ್ದಾರೆ.