ಗುರುವಾರ, ಸೆಪ್ಟೆಂಬರ್ 10, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಆರೋಗ್ಯ
ಮೆಟ್ರೊ ಶನಿವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಭೂಮಿಕಾ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಮಹಿಳೆಯರಿಗೆ ಸಿಗದ ಪ್ರಾತಿನಿಧ್ಯ- ವಿಷಾದ
ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ರಾಜಕೀಯದಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ ಇಂದಿನವರೆಗೂ ಅವರಿಗೆ ಸರಿಯಾದ ಪ್ರಾತಿನಿಧ್ಯ ಸಿಗದೇ ಇರುವುದು ವಿಷಾದನೀಯ.


ಬೆಂಗಳೂರು: ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ರಾಜಕೀಯದಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ ಇಂದಿನವರೆಗೂ ಅವರಿಗೆ ಸರಿಯಾದ ಪ್ರಾತಿನಿಧ್ಯ ಸಿಗದೇ ಇರುವುದು ವಿಷಾದನೀಯ ಎಂದು ರಾಜ್ಯ ಸಭಾ ಸದಸ್ಯೆ ಬೃಂದಾ ಕಾರಟ್ ಹೇಳಿದರು.

ಬುಧವಾರ ಸುರಾನಾ ಕಾಲೇಜಿನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ‘ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆ’ ಕುರಿತು ಅವರು ಮಾತನಾಡಿದರು.

ಪಾಕಿಸ್ತಾನ (ಶೇ 22), ಅಪಘಾನಿಸ್ತಾನ (ಶೇ 27), ಬಾಂಗ್ಲಾ (ಶೇ 13)ದಂತಹ ನೆರೆಯ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶದ ಮಹಿಳೆಯರು (ಶೇ 11) ರಾಜಕೀಯವಾಗಿ ಬಹಳ ಹಿಂದೆ ಉಳಿದಿದ್ದಾರೆ. ಸಂಸತ್ತು ಇನ್ನೂ ಪುರುಷರ ರಾಜ್ಯವಾಗಿಯೇ ಉಳಿದಿದೆ. ರಾಜಕೀಯವನ್ನು ಮುನ್ನಡೆಸುವ ಪ್ರತಿಭೆ ಇದ್ದಾಗ್ಯೂ ಭಾರತದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಬೇರೆ ಕ್ಷೇತ್ರಗಳಲ್ಲಿ ಪುರುಷರನ್ನು ಹಿಂದೆ ಹಾಕಿದರೂ ಈ ಕ್ಷೇತ್ರದಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಬೃಂದಾ ಅಭಿಪ್ರಾಯಪಟ್ಟರು.

click here
ಯಾವುದೇ ರಾಜಕೀಯ ಪಕ್ಷಗಳು ಟಿಕೆಟ್ ನೀಡುವಾಗ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳೆಯರ ರಾಜಕೀಯ ಭವಿಷ್ಯವನ್ನು ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚೆಂದರೆ ತಾಲ್ಲೂಕು ಪಂಚಾಯ್ತಿಗಳಿಗೆ ಸೀಮಿತಗೊಳಿಸಲಾಗುತ್ತದೆ. ಆದರೆ ಎಲ್ಲ ಮಟ್ಟದಲ್ಲಿಯೂ ನಮಗೆ ನಮ್ಮ ಪಾಲು ಬೇಕು. ನಾವು ಬಿಕ್ಷೆ ಕೇಳುತ್ತಿಲ್ಲ, ಸಮಾನತೆಯ ಹಕ್ಕಿಗಾಗಿ ಹೋರಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮಹಿಳಾ ಮೀಸಲಾತಿ ಮಸೂದೆ ಜಾರಿಯಾದರೆ ಮಹಿಳೆಯರ ಎಲ್ಲ ಸಮಸ್ಯೆಗಳೂ ಮುಕ್ತಿ ಕಾಣುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಸಮಸ್ಯೆಗಳಿಗೂ ಇದೊಂದೇ ಪರಹಾರ ಮಾರ್ಗವಲ್ಲ ಎಂದರು. ಒಂದು ಗುಂಪಿನ ಒಂದು ಸಮಸ್ಯೆಗೆ ಹಾಗೂ ಅದರ ಸುತ್ತ ಇರುವ ವಲಯಕ್ಕೆ ಇದರಿಂದ ಅನುಕೂಲವಾಗುತ್ತದೆ. ಬೇರೆ ಬೇರೆ ಸಮಸ್ಯೆಗಳಿಗೆ ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳಬೇಕಾಗುತ್ತದೆ ಎಂದರು.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಜ್ಞಾಪೂರ್ವಕವಾಗಿ ಹಾಗೂ ಚಾಣಾಕ್ಷತನದಿಂದ ತಡೆಹಿಡಿಯಲಾಗಿದೆ ಎಂದರು. ಪ್ರತಿಭಾ ಪಟೇಲ್ ಅವರು ರಾಷ್ಟ್ರಾಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಮಹಿಳಾ ಮೀಸಲಾತಿ ಮಸೂದೆಗೆ ಭರದ ಚಾಲನೆ ಸಿಗುತ್ತದೆ ಎಂದು ಕಟ್ಟಿಕೊಂಡ ಕನಸೂ ನನಸಾಗಲಿಲ್ಲ ಎಂದು ಅವರು ತಿಳಿಸಿದರು.

  ಕಾಲೇಜು ಪ್ರಾಚಾರ್ಯ ಎ.ಎಸ್.ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಕೆ.ಎಸ್.ಶಾರದಾ, ಕಾರ್ಯದರ್ಶಿ ಗೌರಮ್ಮ, ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮ ಯೋಜನಾಧಿಕಾರಿ ಬಾಲಾಜಿ ನಾಯಕ್ ಇತರರಿದ್ದರು.

comment on this article
ಇತರ ಸುದ್ದಿಗಳು
ಆನೇಕಲ್: ಚರ್ಚ್ ಮೇಲೆ ದಾಳಿ
ಸದ್ದಿಲ್ಲದೆ ಸಾಗಿರುವ ‘ನಗರ ಹಸಿರೀಕರಣ’
ಮಹಿಳೆಯರಿಗೆ ಸಿಗದ ಪ್ರಾತಿನಿಧ್ಯ- ವಿಷಾದ
45 ಕಿ.ಮೀ. ಅಗೆತ ತಂದ ಸಮಸ್ಯೆ
ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ
ಎಚ್‌ಎಎಲ್ ನಿಲ್ದಾಣ ಆರಂಭಕ್ಕೆ ನಿರ್ದೇಶನ ಇಲ್ಲ
ಕುಂದಾನಗರಿಯಲ್ಲಿ ‘ಕರ್ನಾಟಕ’ ಫೆವರಿಟ್
ನಗರದಲ್ಲಿ ಮತ್ತೆ ಸರ ಅಪಹರಣ
ರೌಡಿ ಮುಲಾಮನ 6 ಸಹಚರರ ಸೆರೆ
ನಕಲಿ ಸಿ.ಡಿ, ಡಿ.ವಿ.ಡಿ ಮಾರಾಟಗಾರರ ಬಂಧನ
ನಿರುದ್ಯೋಗಿ ಶಿಕ್ಷಕರ ಆಮರಣಾಂತ ಉಪವಾಸ
ಆದೇಶ ವಾಪಸ್‌ಗೆ ಎಸ್‌ಎಫ್‌ಐ ಆಗ್ರಹ
ಉದರ ದರ್ಶಕ ಶಸ್ತ್ರಚಿಕಿತ್ಸೆ
ಕ್ರಿಕೆಟ್‌ಆತುರ; ಸಂಚಾರಿ ನಿಯಮ ಗಾಳಿಗೆ
ಭಾರ್ತಿ ಏರ್‌ಟೆಲ್ ಅಧ್ಯಕ್ಷರಿಗೆ ಸಮನ್ಸ್
ಬಿಎಂಎಸ್ ಟ್ರಸ್ಟ್ ವಿವಾದ:ತಡೆಯಾಜ್ಞೆ
ಸಾರಿಗೆ ಸಚಿವರ ಹೇಳಿಕೆಗೆ ಖಂಡನೆ
ತರಕಾರಿ ಸಾಗಾಣಿಕೆಗೆ ಉಚಿತ ಸಾರಿಗೆ
ವೃತ್ತಿಪರರಿಗೆ ನಿವೃತ್ತಿ ಇಲ್ಲ- ರಾಜ್ಯಪಾಲ
9ರ ಮೋಹಕ್ಕೊಳಗಾದ ಜನ
ಚಂದ್ರಯಾನ -1: ನಿರೀಕ್ಷಿತ ಕಾರ್ಯ
ಮನೆಯೊಡತಿಯ ಕತ್ತು ಕೊಯ್ದು ಕೊಲೆ
ಸಂಗೀತ ಸ್ಪರ್ಧೆಗೆ ಅರ್ಜಿ ಆಹ್ವಾನ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618