ಗುರುವಾರ, ಸೆಪ್ಟೆಂಬರ್ 10, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಆರೋಗ್ಯ
ಮೆಟ್ರೊ ಶನಿವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಭೂಮಿಕಾ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ವೃತ್ತಿಪರರಿಗೆ ನಿವೃತ್ತಿ ಇಲ್ಲ- ರಾಜ್ಯಪಾಲ
‘ವೃತ್ತಿಪರರಿಗೆ ನಿವೃತ್ತಿ ಎಂಬುದಿಲ್ಲ. ಅವರು ತಮ್ಮ ಅಪಾರ ಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಬಳಸಲು ಮುಂದಾಗಬೇಕು’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕರೆ ನೀಡಿದರು.


ಬೆಂಗಳೂರು: ‘ವೃತ್ತಿಪರರಿಗೆ ನಿವೃತ್ತಿ ಎಂಬುದಿಲ್ಲ. ಅವರು ತಮ್ಮ ಅಪಾರ ಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಬಳಸಲು ಮುಂದಾಗಬೇಕು’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕರೆ ನೀಡಿದರು.

ನಗರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಭಾರತೀಯ ಎಂಜಿನಿಯರ್‍ಸ್ ಸಂಸ್ಥೆಯ ಅಮೃತ ಮಹೋತ್ಸವ ಸಮಾರಂಭಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎಂಜಿನಿಯರ್ ವೃತ್ತಿ ಶ್ರೇಷ್ಠವಾದುದು. ಅವರು ರಾಷ್ಟ್ರ ನಿರ್ಮಾಣಕಾರರಿದ್ದಂತೆ. ಜನರು ಉತ್ತಮವಾಗಿ ಜೀವನ ನಡೆಸಲು ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ’ ಎಂದರು.

‘ರಾಜ್ಯದಲ್ಲೂ ಸಾಕಷ್ಟು ಮಂದಿ ಪರಿಣತ ಎಂಜಿನಿಯರ್ಗಳಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಅವರಿಗೆ ಗೌರವವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರಮುಖ ಕಾಮಗಾರಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುತ್ತಿಗೆದಾರ ಸಂಸ್ಥೆಗಳು ಭಾಗವಹಿಸುತ್ತಿವೆ. ಹಾಗಾಗಿ ಸ್ಥಳೀಯ ಎಂಜಿನಿಯರ್‌ಗಳು ಆ ಗುಣಮಟ್ಟ ಹಾಗೂ ಪರಿಪಕ್ವತೆ ರೂಢಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ವೃತ್ತಿಪರತೆಗೆ ಯಾವಾಗಲೂ ಸ್ವಾಯತ್ತತೆ ನೀಡಬೇಕು. ಸಮರ್ಪಕ ಜ್ಞಾನ ಸಂಪಾದಿಸಿರುವ ವೃತ್ತಿಪರರು ತಮ್ಮ ಕಾರ್ಯ ನಿರ್ವಹಣೆ ವೇಳೆ ಸೂಕ್ತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನೀಡಬೇಕು. ಆಗ ಅವರ ಜ್ಞಾನದ ಪೂರ್ಣ ಉಪಯೋಗ ಪಡೆಯಬಹುದಾಗಿದೆ’ ಎಂದರು.

‘ಭಾರತದ ನಾಗರಿಕತೆ ಬೆಳವಣಿಗೆಗೆ ರಾಜ್ಯದ ಕೊಡುಗೆ ಅಪಾರವಾಗಿದೆ. ದಕ್ಷಿಣ ಭಾಗವು ಸಾಕಷ್ಟು ತಜ್ಞರನ್ನು ಒಳಗೊಂಡಿದೆ. ಅದರಲ್ಲೂ ಕರ್ನಾಟಕ ಈ ಪೈಕಿ ಮೊದಲ ಸ್ಥಾನದಲ್ಲಿದೆ. ಇದೇ ಸ್ಥಾನವನ್ನು ಕಾಯ್ದುಕೊಳ್ಳಬೇಕಾದ ಹೊಣೆ ಎಲ್ಲರ ಮೇಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಪ್ರಫುಲತಾ ಭಾರದ್ವಾಜ್ ಅವರು ಅಮೃತ ಮಹೋತ್ಸವದ ಲಾಂಛನ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಕರ್ನಾಟಕ ಕೇಂದ್ರದ ಅಧ್ಯಕ್ಷ ಡಾ.ಎಲ್.ವಿ. ಮುರಳಿಕೃಷ್ಣರೆಡ್ಡಿ, ಗೌರವ ಕಾರ್ಯದರ್ಶಿ ಡಾ.ಎಸ್.ಬಿ. ಗಂಜಿಗಟ್ಟಿ, ಮಾಜಿ ಅಧ್ಯಕ್ಷರಾದ ಡಾ.ಎಚ್.ಸಿ. ವಿಶ್ವೇಶ್ವರಾಯ, ಡಾ.ಎಂ.ಪಿ. ಚೌಡಯ್ಯ ಇತರರು ಉಪಸ್ಥಿತರಿದ್ದರು.

‘ಶಾಂತಿ ಸಹಬಾಳ್ವೆ ಮುಖ್ಯ’
‘ಇದು ನಮ್ಮ ಸರ್ಕಾರ. ನಾನು ಕೂಡ ಸರ್ಕಾರದ ಭಾಗವಾಗಿದ್ದು, ಸರ್ಕಾರವು ಜನತೆಗೆ ಉತ್ತಮ ಸೌಲಭ್ಯ ಕಲ್ಪಿಸಲಿ ಎಂಬ ಉದ್ದೇಶದಿಂದ ನಾನು ಹೇಳಿಕೆ ನೀಡಿದ್ದೆೆ’ ಎಂದು ರಾಜ್ಯಪಾಲ  ಭಾರದ್ವಾಜ್ ಹೇಳಿದರು.

ರಾಜ್ಯದಲ್ಲಿನ ಕಾನೂನು-ಸುವ್ಯವಸ್ಥೆ ಕುರಿತು ಇತ್ತೀಚೆಗೆ ತಾವು ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಸರ್ಕಾರ ಜನತೆಗೆ ಉತ್ತಮ ಸೌಲಭ್ಯಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜನತೆ ಶಾಂತಿ- ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂಬುದು ನನ್ನ ಆಶಯ. ಆ ಕಳಕಳಿಯಿಂದ ಹೇಳಿಕೆ ನೀಡಿದೆ’ ಎಂದು ಸಮರ್ಥಿಸಿಕೊಂಡರು.

ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಶಾಂತಿ- ಸುವ್ಯವಸ್ಥೆ ನೆಲೆಸಿ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಈಗಲೂ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಹಿಂದೆ ನೀಡಿದ್ದ ಹೇಳಿಕೆಯ ಒಂದು ಅಂಶವನ್ನಷ್ಟೇ ಮಾಧ್ಯಮಗಳಿಗೆ ಹೆಚ್ಚು ಒತ್ತು ನೀಡಿವೆ’ ಎಂದರು. 

comment on this article
ಇತರ ಸುದ್ದಿಗಳು
ಆನೇಕಲ್: ಚರ್ಚ್ ಮೇಲೆ ದಾಳಿ
ಸದ್ದಿಲ್ಲದೆ ಸಾಗಿರುವ ‘ನಗರ ಹಸಿರೀಕರಣ’
ಮಹಿಳೆಯರಿಗೆ ಸಿಗದ ಪ್ರಾತಿನಿಧ್ಯ- ವಿಷಾದ
45 ಕಿ.ಮೀ. ಅಗೆತ ತಂದ ಸಮಸ್ಯೆ
ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ
ಎಚ್‌ಎಎಲ್ ನಿಲ್ದಾಣ ಆರಂಭಕ್ಕೆ ನಿರ್ದೇಶನ ಇಲ್ಲ
ಕುಂದಾನಗರಿಯಲ್ಲಿ ‘ಕರ್ನಾಟಕ’ ಫೆವರಿಟ್
ನಗರದಲ್ಲಿ ಮತ್ತೆ ಸರ ಅಪಹರಣ
ರೌಡಿ ಮುಲಾಮನ 6 ಸಹಚರರ ಸೆರೆ
ನಕಲಿ ಸಿ.ಡಿ, ಡಿ.ವಿ.ಡಿ ಮಾರಾಟಗಾರರ ಬಂಧನ
ನಿರುದ್ಯೋಗಿ ಶಿಕ್ಷಕರ ಆಮರಣಾಂತ ಉಪವಾಸ
ಆದೇಶ ವಾಪಸ್‌ಗೆ ಎಸ್‌ಎಫ್‌ಐ ಆಗ್ರಹ
ಉದರ ದರ್ಶಕ ಶಸ್ತ್ರಚಿಕಿತ್ಸೆ
ಕ್ರಿಕೆಟ್‌ಆತುರ; ಸಂಚಾರಿ ನಿಯಮ ಗಾಳಿಗೆ
ಭಾರ್ತಿ ಏರ್‌ಟೆಲ್ ಅಧ್ಯಕ್ಷರಿಗೆ ಸಮನ್ಸ್
ಬಿಎಂಎಸ್ ಟ್ರಸ್ಟ್ ವಿವಾದ:ತಡೆಯಾಜ್ಞೆ
ಸಾರಿಗೆ ಸಚಿವರ ಹೇಳಿಕೆಗೆ ಖಂಡನೆ
ತರಕಾರಿ ಸಾಗಾಣಿಕೆಗೆ ಉಚಿತ ಸಾರಿಗೆ
ವೃತ್ತಿಪರರಿಗೆ ನಿವೃತ್ತಿ ಇಲ್ಲ- ರಾಜ್ಯಪಾಲ
9ರ ಮೋಹಕ್ಕೊಳಗಾದ ಜನ
ಚಂದ್ರಯಾನ -1: ನಿರೀಕ್ಷಿತ ಕಾರ್ಯ
ಮನೆಯೊಡತಿಯ ಕತ್ತು ಕೊಯ್ದು ಕೊಲೆ
ಸಂಗೀತ ಸ್ಪರ್ಧೆಗೆ ಅರ್ಜಿ ಆಹ್ವಾನ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618