ಶುಕ್ರವಾರ, ಸೆಪ್ಟೆಂಬರ್ 11, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕೃಷಿ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಕಾಲ್ತುಳಿತ: ಆಸ್ಪತ್ರೆಯ ಮುಂದೆ ಪೋಷಕರ ಕಂಬನಿ


ನವದೆಹಲಿ(ಪಿಟಿಐ):ಶಾರ್ಟ್ ಸರ್ಕೀಟ್ ಸಂಭವಿಸಿದೆ ಎಂಬ ವದಂತಿಯಿಂದ ಇಲ್ಲಿನ ಖಜೂರಿ ಖಾಸ್‌ನಲ್ಲಿ ಸರ್ಕಾರಿ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಕಾಲ್ತುಳಿದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯರ ಕುಟುಂಬದವರ ಆಸ್ಪತ್ರೆಯ ಎದುರು ರೋದಿಸುತ್ತಿದ್ದ ಸನ್ನಿವೇಶ ಕರುಳು ಕಿವಿಚುವಂತಿತ್ತು.

‘ಇದು ರಂಜಾನ್ ಮಾಸದ ತಿಂಗಳು. ಆಕೆ ಉಪವಾಸ ವ್ರತದಲ್ಲಿದ್ದಳು. ಬೆಳಿಗ್ಗೆ ಏನೂ ತಿನ್ನದೇ ಶಾಲೆಗೆ ಬಂದಿದ್ದಳು. ಈಗ ಅಧಿಕಾರಿಗಳು ಆಕೆ ಸತ್ತಿದ್ದಾಳೆ ಎನ್ನುತ್ತಾರೆ’ ಎಂದು ಮೃತಪಟ್ಟ ವಿದ್ಯಾರ್ಥಿನಿ ಆಫ್ರೋಜ್‌ಳ ತಾಯಿ ಶಂಷಾರಿ ಗೋಳಿಟ್ಟರು.

ಶಂಷಾರಿಯಂತೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಇಲ್ಲವೇ ಗಾಯಗೊಂಡ ಮಕ್ಕಳ ತಂದೆ-ತಾಯಂದಿರು, ನೂರಾರು ಮಂದಿ ಬಂಧು ಬಳಗದವರು ಆಸ್ಪತ್ರೆ ಎದುರು ಜಮಾಯಿಸಿ, ತಮ್ಮ ನೋವುಗಳನ್ನು ತೋಡಿಕೊಳ್ಳುತ್ತಿದ್ದರು. ಆಸ್ಪತ್ರೆಯೊಳಗೆ ತಮ್ಮನ್ನು ಕಳುಹಿಸುವಂತೆ ಅಂಗಲಾಚುತ್ತಿದ್ದರು. ‘ನಮ್ಮನ್ನು ಅಧಿಕಾರಿಗಳು ಕತ್ತಲಲ್ಲಿಟ್ಟಿದ್ದಾರೆ. ಆಸ್ಪತ್ರೆಯೊಳಗೆ ನನ್ನ ಮಗಳ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುತ್ತಿಲ್ಲ. ಕೆಲವರು ಅವಳ ಬಲಗಾಲು ಮುರಿದಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಆರೋಪಿಸುತ್ತಿದ್ದಾರೆ.

ಮುಖ್ಯಮಂತ್ರಿ ಭೇಟಿ: ಸುದ್ದಿ ತಿಳಿದ ನಂತರ ಆಸ್ಪತ್ರೆಗೆ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರು ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ‘ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ದೀಕ್ಷಿತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಮಕ್ಕಳ ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂ, ತೀವ್ರವಾಗಿ ಗಾಯಗೊಂಡ ಮಕ್ಕಳ ಪ್ರತಿ ಕುಟುಂಬಕ್ಕೆ 50 ಸಾವಿರ ರೂ ಪರಿಹಾರವಾಗಿ ಘೋಷಿಸಲಾಗಿದೆ.

ವಿಭಿನ್ನ ಕಾರಣಗಳು ?:  ಕಾಲ್ತುಳಿತಕ್ಕೆ ಶಾರ್ಟ್‌ಸರ್ಕ್ಯೂಟ್ ವದಂತಿ ಕಾರಣ ಎಂದು ಪೊಲೀಸರು ಹೇಳುತ್ತಿದ್ದರೆ, ವಿದ್ಯಾರ್ಥಿಗಳು, ಪೋಷಕರು ನೀಡುತ್ತಿರುವ ಕಾರಣವೇ ಬೇರೆ.

‘ನಮ್ಮ ತರಗತಿಯಲ್ಲಿ ಪರೀಕ್ಷೆ ಆರಂಭವಾಯಿತು. ಇದ್ದಕ್ಕಿದ್ದಂತೆ ಹುಡುಗರ ಗುಂಪೊಂದು ತರಗತಿಯೊಳಗೆ ನುಗ್ಗಿ ನಮ್ಮನ್ನು ಹೊರ ನೂಕಿತು. ನಾವು ಮಹಡಿ ಮೆಟ್ಟಿಲು ಇಳಿಯುತ್ತಾ ನೆಲಮಹಡಿ ತಲುಪುವ ಹೊತ್ತಿಗೆ ಕಾಲ್ತುಳಿತ ಸಂಭವಿಸಿತ್ತು’ ಎಂದು ಇದೇ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಸಂಜನಾ ಹೇಳಿದ್ದಾರೆ.

ಸಂಜಾನ ತಂದೆ ವೀರ್‌ಸಿಂಗ್ ಗೌತಮ್ ಪ್ರಕಾರ ‘ ಪರೀಕ್ಷಾ ಕೇಂದ್ರವನ್ನು ಬದಲಾಯಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಗದ್ದಲದಲ್ಲಿ ಈ ಘಟನೆ ನಡೆದಿದೆ’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

comment on this article
ಇತರ ಸುದ್ದಿಗಳು
ಪೈಲಟ್ ಗಳ ಮುಷ್ಕರ ಅಂತ್ಯಕ್ಕೆ ಪ್ರಯತ್ನ ಆರಂಭ
ಪ್ರೌಢಶಾಲೆಗಳ ಪ್ರವೇಶಾತಿ ಹೆಚ್ಚಿಸುವುದಕ್ಕೆ 1.45ಲಕ್ಷ ಕೋಟಿ
ಮಣಿಪುರ: ಮತ್ತೊಂದು ನಕಲಿ ಎನ್‍ಕೌಂಟರ್ ವಿವಾದ
ಅಪರಾಧಿಗಳು, ಉಗ್ರರ ಹಸ್ತಾಂತರ ನಿರ್ಧಾರ
ಸಚಿವರ ವೆಚ್ಚಕ್ಕೆ ಇನ್ನಷ್ಟು ಕಡಿವಾಣ
ಜಸ್ವಂತ್‌ಗೆ ಶೆಖಾವತ್ ಬೆಂಬಲ
ಬೂಟಾಸಿಂಗ್ ವಿಚಾರಣೆ
ನಾನು ಕರುಣಾನಿಧಿ ಅಭಿಮಾನಿ: ರಾಹುಲ್
ನಿಥಾರಿ ಸರಣಿ ಕೊಲೆ: ಪಂಧೇರ್ ಖುಲಾಸೆ
ಆಂಧ್ರ ಸಿಎಂ: ಕಾಂಗ್ರೆಸ್ ಸೂತ್ರ ಸಿದ್ಧ
ಹಿಮಾಲಯ ರಕ್ಷಣೆ: ಪ್ರಧಾನಿಗೆ ಮೊರೆ
ದೋಷ: ವಿಮಾನ ತುರ್ತು ಭೂ ಸ್ಪರ್ಶ
ಜೆಟ್ ಏರ್‌ವೇಸ್: ಬಗೆಹರಿಯದ ಬಿಕ್ಕಟ್ಟು
ಕಾನೂನು ಶಿಕ್ಷಣಕ್ಕೆ ಸುಧಾರಣೆ: ಸರ್ಕಾರ
ಮೃತ ವಿದ್ಯಾರ್ಥಿಯ ಪೋಷಕರಿಗೆ 44 ಲಕ್ಷ ಪರಿಹಾರಕ್ಕೆ ಆದೇಶ
ಮಣಿಪುರದಲ್ಲೂ ‘ನಕಲಿ ಎನ್‌ಕೌಂಟರ್’
ಗೃಹ, ಕೃಷಿ ಸಾಲಕ್ಕೆ ಬಡ್ಡಿ ಸಬ್ಸಿಡಿ
ಕಾಲ್ತುಳಿತ:5 ಬಾಲಕಿಯರ ಬಲಿ
ವಿಮಾನ ಅಪಘಾತ:ಪೈಲಟ್ ಸಾವು
ಕಾಲ್ತುಳಿತ: ಆಸ್ಪತ್ರೆಯ ಮುಂದೆ ಪೋಷಕರ ಕಂಬನಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618