|
|
|
|
| » |
|
|
|
|
|
| SEPTEMBER 13 TO SEPTEMBER 19 |
|
|
ಮೇಷ
|
|
|
ಅಶ್ವಿನಿ, ಭರಣಿ, ಕೃತ್ತಿಕ 1
ಮನೋವೇದನೆ. ಸಮೀಪವರ್ತಿಗಳ ಉದ್ದೇಶಗಳ ಬಗ್ಗೆ ಶಂಕೆ, ತುರ್ತು ಸಮಸ್ಯೆಗಳ ಪರಿಶೀಲನೆ, ಶುಭ ಕಾರ್‍ಯಗಳ ನಿರ್ವಹಣೆ ಮುಂದೂಡಿಕೆ ಅನಿವಾರ್‍ಯ, ವೈವಾಹಿಕ ಮಾತುಕತೆಗಳಲ್ಲಿ ಬಿಗಿ ನಿಲುವು, ಸಾಮಾಜಿಕ ಬದುಕಿನಲ್ಲಿ ನಿಷ್ಠುರ.
|
| ಶುಭ ಸಂಖ್ಯೆ: 5 |
|
|
|
ವೃಷಭ
|
|
|
ಕೃತ್ತಿಕ 2-3-4, ರೋಹಿಣಿ, ಮೃಗಶಿರ 1-2
ಹಣದ ಕೊರತೆಯಿಂದ ಗೃಹದಲ್ಲಿ ಭಿನ್ನಾಭಿಪ್ರಾಯ, ಹಿರಿಯ ಮಿತ್ರರ ಮುಖಾಂತರ ದ್ರವ್ಯಾನುಕೂಲ. ಅವೇಳೆ ಭೋಜನದಿಂದ ಆರೋಗ್ಯ ಹಾನಿ, ಸಾಲ ಮರುಪಾವತಿ ಬಗ್ಗೆ ಅತೀವ ಕಳವಳ, ಮಾನಸಿಕ ನೆಮ್ಮದಿ, ವೃತ್ತಿಯಲ್ಲಿ ಹೆಚ್ಚುವರಿ ವರಮಾನ.
|
| ಶುಭ ಸಂಖ್ಯೆ: 2 |
|
|
|
ಮಿಥುನ
|
|
|
ಮೃಗಶಿರ 3-4, ಆರಿದ್ರಾ, ಪುನರ್ವಸು 1-2-3
ಕೈಗೊಂಡ ಕಾರ್‍ಯಗಳು ಕಲಸು ಮೇಲೋಗರ, ಅಪರಿಚಿತರ ಮೂಲಕ ಸಾಲ ಪಡೆಯುವ ಪ್ರಮೇಯ, ಬೌದ್ಧಿಕ ಚಟುವಟಿಕೆಗಳಲ್ಲಿ ಪಿತೃ ವರ್ಗ ಸಹಕಾರ, ನೆಂಟರ ಆಶ್ವಾಸನೆಗಳಿಂದ ಹುಮ್ಮಸ್ಸು, ವೈವಾಹಿಕ ವ್ಯವಹಾರಗಳಲ್ಲಿ ಅನಿಶ್ಚಿತತೆ ಮುಂದುವರಿಕೆ.
|
| ಶುಭ ಸಂಖ್ಯೆ: 4 |
|
|
|
ಕಟಕ
|
|
|
ಪುನರ್ವಸು 4, ಪುಷ್ಯಮಿ, ಆಶ್ಲೇಷ
ತುರ್ತು ಕಾರ್‍ಯಕ್ರಮಗಳನ್ನು ಮುಂದೂಡುವಿರಿ. ಎಡಬಿಡದ ತಿರುಗಾಟದಿಂದ ಬಳಲಿಕೆ, ಗೃಹದಲ್ಲಿ ಗೊಂದಲಮಯ ವಾತಾವರಣ, ಕೊಂಚ ಧನ ಲಾಭ, ಗೃಹ ನಿರ್ಮಾಣ ಕಾರ್‍ಯ ಜಡತೆಯಿಂದ ಮುಂದೂಡಿಕೆ, ಔದ್ಯೋಗಿಕ ವ್ಯವಹಾರಗಳಲ್ಲಿ ಕಸಿವಿಸಿ, ವರಿಷ್ಠರ ಆಗಮನ.
|
| ಶುಭ ಸಂಖ್ಯೆ: 7 |
|
|
|
ಸಿಂಹ
|
|
|
ಮಖ, ಪುಬ್ಬ, ಉತ್ತರಾ 1
ಅಧ್ಯಯನಕ್ಕೆ ಸೂಕ್ತ ಅವಕಾಶಗಳು, ನೆಂಟರ ವಚನ ಪಾಲನೆಯಿಂದ ಮಾನಸಿಕ ಸಂತುಷ್ಟಿ, ವಾಹನ ವಹಿವಾಟುಗಳಲ್ಲಿ ಪಿತೃ ವರ್ಗ ಸಹಕಾರ, ಪಿತೃವರ್ಗದವರ ಸತ್ಕಾರ್‍ಯಗಳಲ್ಲಿ ಸಕ್ರಿಯ ಪಾತ್ರ, ಬರವಣಿಗೆಯಿಂದ ಅತ್ಯಲ್ಪ ವರಮಾನ, ದೈವಕಾರ್‍ಯಗಳ ನಿರ್ವಹಣೆ, ಸಹೋದರರ ಭೇಟಿ, ಧನಾಗಮ.
|
| ಶುಭ ಸಂಖ್ಯೆ: 9 |
|
|
|
ಕನ್ಯಾ
|
|
|
ಉತ್ತರಾ 2-3-4, ಹಸ್ತ, ಚಿತ್ತಾ 1-2
ಕ್ಲಿಷ್ಟ ಸಮಸ್ಯೆಗಳ ಪರಿಹಾರ, ಪಿತೃವರ್ಗ ಸಂಕಷ್ಟದಿಂದ ಖಿನ್ನತೆ, ಪುಣ್ಯಕ್ಷೇತ್ರಗಳ ದರ್ಶನ ಮುಂದೂಡಿಕೆ, ಧನಾಗಮದಲ್ಲಿ ಏರುಪೇರುಗಳಿಂದ ತುರ್ತು ಗೃಹ ಸಮಸ್ಯೆಗಳ ಮುಂದೂಡಿಕೆ, ದುಂದು ವೆಚ್ಚದಿಂದ ಹಿರಿಯರೊಡನೆ ಮನಸ್ತಾಪ, ಪ್ರಯಾಣಕ್ಕೆ ಅಡಚಣೆಗಳು.
|
| ಶುಭ ಸಂಖ್ಯೆ: 1 |
|
|
|
ತುಲಾ
|
|
|
ಚಿತ್ತಾ 3-4, ಸ್ವಾತಿ, ವಿಶಾಖ 1-2-3
ಗೃಹ ಸಮಸ್ಯೆಗಳು ನಿರಾತಂಕವಾಗಿ ಬಗೆಹರಿಯುತ್ತವೆ. ದ್ರವ್ಯಾಗಮನ, ಸತ್ಕಾರ ಕೂಟಗಳಿಗೆ ಆಮಂತ್ರಣ, ಮತ್ಸರಗ್ರಸ್ತ ನೆಂಟರ ಕಿತಾಪತಿಯಿಂದ ಸ್ವತ್ತು ವ್ಯವಹಾರಗಳು ಬಿಡಿಸಲಾಗದ ಕಗ್ಗಂಟು, ಸಮಾಜ ಸೇವೆಯಲ್ಲಿ ಪ್ರಭಾವೀ ವ್ಯಕ್ತಿಗಳ ಉತ್ತೇಜನ, ಜ್ವರದಿಂದ ಸಂಚಾರ ರದ್ದು, ಪುಷ್ಕಳ ಭೋಜನ.
|
| ಶುಭ ಸಂಖ್ಯೆ: 2 |
|
|
|
ವೃಶ್ಚಿಕ
|
|
|
ವಿಶಾಖ 4, ಅನೂರಾಧ, ಜ್ಯೇಷ್ಠ
ವೈವಾಹಿಕ ವ್ಯವಹಾರಗಳಲ್ಲಿ ಶುಭ ಸೂಚನೆ ಗಳು ಕಂಡು ಬರುತ್ತವೆ. ಅಧಿಕ ಸುತ್ತಾಟ, ತುರ್ತು ಕಾರ್‍ಯಕ್ರಮಗಳಲ್ಲಿ ಚುರುಕುತನ, ಹೆಚ್ಚುವರಿ ಆದಾಯ, ಖಟ್ಲೆಗಳ ಮುಂದೂಡಿಕೆ, ಒಡಹುಟ್ಟಿದವರೊಡನೆ ಮಾತಿನ ಚಕಮಕಿ, ವಾಹನ ಸೌಖ್ಯ.
|
| ಶುಭ ಸಂಖ್ಯೆ: 3 |
|
|
|
ಧನು
|
|
|
ಮೂಲ, ಪೂರ್ವಾಷಾಢ, ಉತ್ತರಾಷಾಢ 1
ದುಂದು ವೆಚ್ಚಕ್ಕೆ ಕಡಿವಾಣ, ಪುತ್ರ ವರ್ಗದವರ ಸತ್ಕಾರ್‍ಯಗಳಲ್ಲಿ ಮುಂಚೂಣಿ ಪಾತ್ರ, ಹಲವು ತೊಡಕುಗಳಿಂದ ತೀರ್ಥಯಾತ್ರೆ ಮುಂದೂಡಿಕೆ, ಸ್ವತ್ತು ವಿವಾದಗಳಲ್ಲಿ ಸಜ್ಜನರ ಸಲಹೆಗಳು, ಗಣ್ಯರ ಭೇಟಿ ಲಾಭದಾಯಕ, ಹಿರಿಯ ಸಹೋದರರ ಅಸಹಾಯಕತೆ.
|
| ಶುಭ ಸಂಖ್ಯೆ: 5 |
|
|
|
ಮಕರ
|
|
|
ಉತ್ತರಾಷಾಢ 2-3-4, ಶ್ರವಣ, ಧನಿಷ್ಠ 1-2
ಅನಗತ್ಯ ವಿವಾದಗಳು ತಲೆದೋರುತ್ತವೆ. ಸಂಕಲ್ಪಿತ ಕಾರ್‍ಯಗಳ ಮುಂದೂಡಿಕೆ, ಒಡಹುಟ್ಟಿದವರ ಸೌಲಭ್ಯಗಳಿಗೆ ಅಪರಿಮಿತ ವೆಚ್ಚ, ಸಂಶೋಧನೆಯಲ್ಲಿ ಕುಂಠಿತ ಪ್ರಗತಿ, ಪಿತೃ ಸಹಕಾರದಿಂದ ಪ್ರಮುಖ ಸಮಸ್ಯೆಗಳು ಪರಿಹಾರ, ದೈವಕಾರ್‍ಯಗಳಲ್ಲಿ ಅಪಾರ ಉತ್ಸಾಹ.
|
| ಶುಭ ಸಂಖ್ಯೆ: 9 |
|
|
|
ಕುಂಭ
|
|
|
ಧನಿಷ್ಠ 3-4, ಶತಭಿಷ, ಪೂರ್ವಾಭಾದ್ರ 1-2-3
ಮನೋಲ್ಲಾಸ, ಕುಟುಂಬ ವ್ಯವಹಾರಗಳಲ್ಲಿ ಕೊಂಚ ಕಸಿವಿಸಿ, ನಷ್ಟ ಹೊಂದುವ ಸಂಭವ, ವೈವಾಹಿಕ ಮಾತುಕತೆಗಳಲ್ಲಿ ನೇರ ನುಡಿಗೆ ಅವಕಾಶಗಳು ವಿರಳ, ವಾತಾಧಿಕ್ಯದಿಂದ ವೈಯಕ್ತಿಕ ಕಾರ್‍ಯಕ್ರಮಗಳು ಸ್ಥಗಿತ, ಪುತ್ರರಿಗೆ ಹಿತೈಷಿ ಮೂಲಕ ಉತ್ತಮ ಉದ್ಯೋಗ ಅವಕಾಶಗಳು.
|
| ಶುಭ ಸಂಖ್ಯೆ: 7 |
|
|
|
ಮೀನ
|
|
|
ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ
ಆರೋಗ್ಯದಲ್ಲಿ ಗಣನೀಯ ಸುಧಾರಣೆ, ಹೆಚ್ಚುವರಿ ಆದಾಯ ಸತ್ಕಾರ್‍ಯಗಳಿಗೆ ವಿನಿಯೋಗ, ನೆಂಟರ ಸಂಪರ್ಕದಿಂದ ನೆನೆಗುದಿಗೆ ಬಿದ್ದಿದ್ದ ಕಾರ್‍ಯಗಳಿಗೆ ಮರು ಚಾಲನೆ, ಮಿತ್ರ ನೆರವಿನಿಂದ ಸಾಲ ಮರುಪಾವತಿ, ಸಂತರೊಡನೆ ಆಧ್ಯಾತ್ಮಿಕ ವಿಷಯಗಳ ಚರ್ಚೆ, ಸುಖ ಭೋಜನ, ಪ್ರಯಾಣದಲ್ಲಿ ಎಚ್ಚರ.
|
| ಶುಭ ಸಂಖ್ಯೆ: 2 |
|
|
|
|