ಮಂಗಳವಾರ , ಸೆಪ್ಟೆಂಬರ್ 15, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಮಾನವಜನ್ಮ ದೊಡ್ಡದು, ಇದಕ್ಕೆ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ
--ಪುರಂದರ ದಾಸರು
ಪುರವಣಿ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಸೋಮವಾರ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಗುಜರಾತ್: ಐದು ಕಡೆ ಬಿಜೆಪಿ ಗೆಲುವು
ಲೋಕಸಭೆ ಚುನಾವಣೆಯ ಸೋಲಿನ ಕಹಿಯಲಲಿದ್ದ ಬಿಜೆಪಿಗೆ ಮತ್ತೆ ಗೆಲುವಿನ ಸಿಹಿ ಸಿಂಚನವಾದಂತಾಗಿದೆ. ಗುಜರಾತ್‌ನ ಐದು ಕ್ಷೇತ್ರದಲ್ಲಿ ಬಿಜೆಪಿ ಆಭ್ಯರ್ಥಿಗಳು ಜಯ ಕಂಡರೆ, ಎರಡು ಕಡೆ ಕಾಂಗ್ರೆಸ್ ಜಯ ಸಾಧಿಸಿದೆ.

ಗುಜರಾತ್ ವಿಧಾನಸಭೆ ಉಪಚುನಾವಣೆ ವೇಳೆ ಐದು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
- ಪಿಟಿಐ ಚಿತ್ರ

ಅಹಮದಾಬಾದ್ (ಪಿಟಿಐ): ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಏಳು ವಿಧಾನಸಭೆ ಸ್ಥಾನಗಳಿಗಾಗಿ ನಡೆದ  ಉಪಚುನಾವಣೆಯಲ್ಲಿ, ಐದು ಕಡೆ ಬಿಜೆಪಿ ಗೆಲುವು ಕಂಡಿದೆ. ಮಧ್ಯಪ್ರದೇಶ ಮತ್ತು ಉತ್ತರಖಂಡದಲ್ಲಿ ತಲಾ ಒಂದೊಂದು ವಿಧಾನಸಭೆ ಸ್ಥಾನ ಬಿಜೆಪಿ ಪಾಲಾಗಿದೆ.

ಲೋಕಸಭೆ ಚುನಾವಣೆಯ ಸೋಲಿನ ಕಹಿಯಲಲಿದ್ದ ಬಿಜೆಪಿಗೆ ಮತ್ತೆ ಗೆಲುವಿನ ಸಿಹಿ ಸಿಂಚನವಾದಂತಾಗಿದೆ. ಗುಜರಾತ್‌ನ ಐದು ಕ್ಷೇತ್ರದಲ್ಲಿ ಬಿಜೆಪಿ ಆಭ್ಯರ್ಥಿಗಳು ಜಯ ಕಂಡರೆ, ಎರಡು ಕಡೆ ಕಾಂಗ್ರೆಸ್ ಜಯ ಸಾಧಿಸಿದೆ.

ಕ್ಷೇತ್ರಗಳ ಶಾಸಕರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಸ್ಥಾನಗಳು ತೆರವಾಗಿದ್ದವು. ಏಳು ವಿಧಾನಸಭೆ ಸ್ಥಾನಗಳಲ್ಲಿ ಆರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದವು. ಸೆಪ್ಟೆಂಬರ್ 10ರಂದು ಉಪಚುನಾವಣೆಗೆ ಮತದಾನ ನಡೆದಿತ್ತು.

ಭಾರಿ ಗೆಲುವು ಸಂಪಾದಿಸುವ ಮೂಲಕ ಬಿಜೆಪಿ ಶಾಸಕರ ಸಂಖ್ಯೆ 182ಕ್ಕೆ ಏರಿಕೆಯಾಗಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಬಲ 54ಕ್ಕೆ ಇಳಿಕೆಯಾಗಿದೆ.ಇತ್ತೀಚೆಗೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 26 ಲೋಕಸಭೆ ಸ್ಥಾನಗಳಲ್ಲಿ 15 ಕಡೆಯಲ್ಲಿ ಬಿಜೆಪಿ ಜಯ ಸಾಧಿಸಿತ್ತು.

ವಿಧಾನಸಭೆ ಉಪಚುನಾವಣೆಗಳು ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಪರೀಕ್ಷೆಯಂತಾಗಿತ್ತು. ಬಹುಸ್ಥಾನಗಳಲ್ಲಿ ಬಿಜೆಪಿ ಗೆಲುವಿನೊಂದಿಗೆ ಮೋದಿ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ. ಮಧ್ಯಪ್ರದೇಶ ಮತ್ತು ಉತ್ತರಖಂಡ್ ಎರಡು ಕಡೆ ತಲಾ ಒಂದೇ ವಿಧಾನಸಭೆ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಆಂಧ್ರಪ್ರದೇಶ ಮತ್ತು ಸಿಕ್ಕಿಂನಲ್ಲಿ ತಲಾ ಒಂದೊಂದು ವಿಧಾನಸಭೆ ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳು ಗೆಲುವು ಸಾಧಿಸಿವೆ.

ರಾಜನಾಥ್‌ಸಿಂಗ್ ಪ್ರತಿಕ್ರಿಯೆ: ಪಕ್ಷದ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ‘ಕಾಂಗ್ರೆಸ್ ಪಕ್ಷವು ಗುಜರಾತ್‌ನಲ್ಲಿ ಮಾತ್ರ ಭೂಮಿಕೆ ಕಳೆದುಕೊಳ್ಳುತ್ತಿಲ್ಲ; ಮಧ್ಯಪ್ರದೇಶ ಹಾಗೂ ಉತ್ತರಖಂಡ್‌ನಲ್ಲೂ ಇದೇ ಸ್ಥಿತಿಯಲ್ಲಿದೆ’ ಎಂದಿದ್ದಾರೆ.

comment on this article
ಇತರ ಸುದ್ದಿಗಳು
ಟ್ರಕ್ ಡಿಕ್ಕಿ: 6 ಯಾತ್ರಾರ್ಥಿಗಳ ಸಾವು
ತಾಂತ್ರಿಕ ತೊಂದರೆ: ವಿಮಾನ ಪ್ರಯಾಣಿಕರು ಸುರಕ್ಷಿತ
ಗುಜರಾತ್: ಐದು ಕಡೆ ಬಿಜೆಪಿ ಗೆಲುವು
ಮಿತವ್ಯಯ: ಈಗ ಸೋನಿಯಾ ಸರದಿ
ವಿಜ್ಞಾನ ವಿದ್ಯಾರ್ಥಿಗಳಿಗೆ ಅಖಿಲ ಭಾರತ ಮಟ್ಟದ ಸಿಇಟಿ: ಕೇಂದ್ರ
ಬಗೆಹರಿಯದ ಸ್ಥಾನ ಹೊಂದಾಣಿಕೆ
ಉಗ್ರರಿಗೆ ಅತೃಪ್ತ ಶಕ್ತಿಗಳ ಕುಮ್ಮಕ್ಕು
18 ತಿಂಗಳ ನಂತರ ಆರುಷಿ ಮೊಬೈಲ್ ಪತ್ತೆ
ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣ ವಿಶ್ವ ದರ್ಜೆಗೆ- ಕೇಂದ್ರದ ಸಮ್ಮತಿ
ಚಿರಾಪುಂಜಿ
ಯಡಿಯೂರಪ್ಪ ಬಳಿಗೆ ಕೇರಳ ಸರ್ವಪಕ್ಷ ನಿಯೋಗ
ತಪ್ಪಿದ ರೈಲು ಅಪಘಾತ
ಪಟ್ನಾ:ಬಾಲಕನ ಅಪಹರಣ
ರಾಜ್ಯಗಳಿಗೆ ಪೊಲೀಸರು ‘ಫುಟ್ಬಾಲ್’
ಬಂಡುಕೋರರ ಶರಣಾಗತಿ
ವೈದ್ಯ ಕಾಲೇಜು ಸ್ಥಾಪನೆ: ನಿಯಮ ಸಡಿಲಿಕೆಗೆ ಚಿಂತನೆ
ಅ.28ರಂದುಕಾರ್ಮಿಕ ಸಂಘಟನೆ ಪ್ರತಿಭಟನೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618