ಶುಕ್ರವಾರ, ಸೆಪ್ಟೆಂಬರ್ 18, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ವಿದ್ಯೆಯ ಮುಖ್ಯ ಗುರಿ ಎಂದರೆ ಸಮಾಜದಲ್ಲಿ ಇತರರೊಡನೆ ಕೂಡಿ ಬಾಳುವುದನ್ನು ಕಲಿಸುವುದು.
--ಡಾ. ರಾಧಾಕೃಷ್ಣನ್
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಭೂಮಿಕಾ
ತಂತ್ರಜ್ಞಾನ
ಯುವಜನ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಚೀನಾ ಅತಿಕ್ರಮಣಕ್ಕೆ ‘ಜಯಾ’ ಪ್ರತಿಕ್ರಿಯೆ
ಸರ್ಕಾರ ಉಕ್ಕಿನ ನಿಲುವು ತಾಳಲಿ
ಚೀನಾ ಅತಿಕ್ರಮಣದಿಂದ ಒಳನುಗ್ಗುತ್ತಿದ್ದರೂ, ಪಾಕಿಸ್ತಾನವು ಕದನ ವಿರಾಮ ಒಪ್ಪಂದ ಮುರಿಯುತ್ತಿದ್ದರೂ ಕೇಂದ್ರದ ಯುಪಿಎ ಸರ್ಕಾರ ಮೈಮರೆತು ಕೂತಿದೆ. ರಾಷ್ಟ್ರೀಯ ಸುರಕ್ಷತೆ ವಿಷಯದಲ್ಲಿ ಸರ್ಕಾರ ಕಠಿಣ ನಿಲುವು ತಾಳಬೇಕು ಎಂದು ಎಐಎಡಿಎಂಕೆ ನಾಯಕಿ ಜಯಲಲಿತಾ ಗುರುವಾರ ಆಗ್ರಹಿಸಿದ್ದಾರೆ.


ಚೆನ್ನೈ (ಪಿಟಿಐ): ಚೀನಾ ಅತಿಕ್ರಮಣದಿಂದ ಒಳನುಗ್ಗುತ್ತಿದ್ದರೂ, ಪಾಕಿಸ್ತಾನವು ಕದನ ವಿರಾಮ ಒಪ್ಪಂದ ಮುರಿಯುತ್ತಿದ್ದರೂ ಕೇಂದ್ರದ ಯುಪಿಎ ಸರ್ಕಾರ ಮೈಮರೆತು ಕೂತಿದೆ. ರಾಷ್ಟ್ರೀಯ ಸುರಕ್ಷತೆ ವಿಷಯದಲ್ಲಿ ಸರ್ಕಾರ ಕಠಿಣ ನಿಲುವು ತಾಳಬೇಕು ಎಂದು ಎಐಎಡಿಎಂಕೆ ನಾಯಕಿ ಜಯಲಲಿತಾ ಗುರುವಾರ ಆಗ್ರಹಿಸಿದ್ದಾರೆ.

ಅಂತರರಾಷ್ಟ್ರೀಯ ಸಂಬಂಧವನ್ನು ಅವಲೋಕಿಸಿದರೆ ಭಾರತವು ಸರಳ ಹಾಗೂ ಸಜ್ಜನ ರಾಷ್ಟ್ರ ಎನ್ನುವ ಕಲ್ಪನೆ ನೆರೆಯ ದೇಶಗಳಲ್ಲಿದೆ. ಚೀನಾ ದೇಶವು ಕೆಲ ಭಾಗಗಳಲ್ಲಿ ಅತಿಕ್ರಮಣ ಮಾಡುತ್ತಿರುವುದರ ಬಗ್ಗೆ ಮತ್ತು ಪಾಕಿಸ್ತಾನದ ಸೈನಿಕರು ಗುಂಡಿನ ದಾಳಿ ಮಾಡುತ್ತಿರುವುದರ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದಿದ್ದಾರೆ.

ಭಾರತವೇ ಮುಂದಾಗಿ ಆ ದೇಶಗಳಿಗೆ ನಿರ್ದೋಷಿ ಹಣೆಪಟ್ಟಿ ನೀಡುವಂತಾಗಿದೆ. ಒಟ್ಟಾರೆ ಯುಪಿಎ ಆಡಳಿತ ಕಾರ್ಯವೈಖರಿ ಅಸಹ್ಯ ಹುಟ್ಟಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸರ್ಕಾರವು ಉಕ್ಕಿನ ನಿಲುವು ಪ್ರದರ್ಶಿಸಬೇಕು. ಇಲ್ಲವಾದರೆ ಎಲ್ಲರೂ ಹೊಡೆಯುವ ಚೆಂಡಿನಂತಾಗುತ್ತದೆ. ಅವಕಾಶ ದೊರೆತ ಪ್ರತಿ ರಾಷ್ಟ್ರವು ಹೊಡೆತ ನೀಡಲು ಮುಂದಾಗುತ್ತವೆ’ ಎಂದು ಖಾರವಾಗಿ ನುಡಿದಿದ್ದಾರೆ.

ವಿಶೇಷ ಅಧಿವೇಶನಕ್ಕೆ ಸಮಾಜವಾದಿ ಪಕ್ಷ ಆಗ್ರಹ: ಚೀನಾ ಸೈನಿಕರು ಭಾರತೀಯ ಭೂ ಪ್ರದೇಶವನ್ನು ಅತಿಕ್ರಮಣ ಮಾಡಿರುವುದನ್ನು ಚರ್ಚಿಸಲು ಸರ್ಕಾರ ವಿಶೇಷ ಅಧಿವೇಶನ ನಡೆಸಬೇಕೆಂದು ಸಮಾಜವಾದಿ ಪಕ್ಷ ಗುರುವಾರ ಆಗ್ರಹಿಸಿದೆ.

‘ಚೀನಾ ಅತಿಕ್ರಮಣವನ್ನು ಬಗ್ಗುಬಡಿಯಲು ಸರ್ಕಾರ ಏನು ಯೋಜನೆ ರೂಪಿಸಿದೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ’ ಎಂದು ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಸುದ್ದಿಗಾರರಿಗೆ ವಿವರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವ ಪ್ರತಿ ಬಾರಿಯು ಭಾರತ-ಚೀನಾ ಗಡಿ ಕುಗ್ಗುತ್ತಲೇ ಬರುತ್ತಿದೆ. ದೇಶದ ಗಡಿ ರಕ್ಷಣೆಗೆ ಯುಪಿಎ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.

1962ರಲ್ಲಿ ಚೀನಾ ದೇಶವು ಭಾರತಕ್ಕೆ ಸೇರಿದ ಒಂದು ಲಕ್ಷ ಚದರ ಕಿಲೋ ಮೀಟರ್ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಈ ಬಗ್ಗೆ ಭಾರತ ಯಾವುದೇ ತಕರಾರು ಎತ್ತಿಲ್ಲ ಎಂದು ಈ ಹಿಂದಿನ ರಕ್ಷಣಾ ಸಚಿವರು ಉಲ್ಲೇಖಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಚೀನಾ ಸರಕು ಬಹಿಷ್ಕರಿಸಿ: ಚೀನಾ ದೇಶವು ‘ಗಡಿ ನಿಯಂತ್ರಣ ರೇಖೆ’ (ಎಲ್‌ಎಸಿ) ಭೇದಿಸಿ ಅತಿಕ್ರಮಣ ಮಾಡುವ ಪ್ರತಿಕ್ರಿಯೆ ನಿರಂತರ ನಡೆಸಿದೆ. ಈ ಹಿನ್ನೆಲೆಯಲ್ಲಿ ವೈಷಮ್ಯ ಹುಟ್ಟಿಸುವ ಆ ದೇಶದ ದೃಷ್ಟಿಕೋನ ವಿರೋಧಿಸಲು ಚೀನಾ ಸರಕುಗಳ ಖರೀದಿಯನ್ನು ಭಾರತದ ಜನರು ಬಹಿಷ್ಕರಿಸಬೇಕೆಂದು ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ಕರೆ ನೀಡಿದೆ.

ದ್ವಿ ಪಕ್ಷೀಯ ಮಾತುಕತೆ ನಿಲ್ಲಿಸಿ: ಚೀನಾ ಅತಿಕ್ರಮಣ ನೀತಿ ಒಳ್ಳೆಯದಲ್ಲ. ಎರಡು ದೇಶಗಳ ನಡುವೆ ಸಂಬಂಧ ವೃದ್ಧಿಸಲು ಭಾರತ ಇಚ್ಛಿಸಿದೆ. ಆದರೆ, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಆ ದೇಶದೊಂದಿಗಿನ ಮಾತುಕತೆ ನಿಲ್ಲಿಸಬೇಕು ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಕಠಿಣ ಕ್ರಮ ಕೈಗೊಳ್ಳಿ: ಚೀನಾ ಅತಿಕ್ರಮಣಕ್ಕೆ ಅರುಣಾಚಲಪ್ರದೇಶದ ಮುಖ್ಯಮಂತ್ರಿಯೊಬ್ಬರು ಇದೇ ಮೊದಲ ಬಾರಿ ಅಪವಾದದ ಹೇಳಿಕೆ ನೀಡಿದ್ದು, ‘ಅರುಣಾಚಲ ಪ್ರದೇಶವು ದೇಶದ ಅವಿಭಾಜ್ಯ ಅಂಗವಾಗಿದ್ದು, ಅತಿಕ್ರಮಣದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ದೊರ್ಜಿ ಖಾಂಡು ಹೇಳಿದ್ದಾರೆ.

ಇತರ ಸುದ್ದಿಗಳು
ಸಿವಿಸಿಯಿಂದ 123 ಭ್ರಷ್ಟ ಅಧಿಕಾರಿಗಳ ಪಟ್ಟಿ
ಕಾಶ್ಮೀರ ಪ್ರವೇಶಿಸಲು ಉಗ್ರರ ಹೊಂಚು
ಅಕ್ರಮ ಅಂಗಾಂಗ ಕಸಿ: 10 ವರ್ಷ ಜೈಲು
ಸರ್ಕಾರ ಉಕ್ಕಿನ ನಿಲುವು ತಾಳಲಿ
ಇಶ್ರತ್ ಪ್ರಕರಣ: ಸುಪ್ರೀಂಕೋರ್ಟ್‌ಗೆ ಮೊರೆ
ಐಜ್ವಾಲ್
ಎನ್‌ಐಟಿ ಸ್ಥಾಪನೆಗೆ ಕೇಂದ್ರ ಒಪ್ಪಿಗೆ
‘ಸುರಕ್ಷತಾ ಮಾನದಂಡ ಸುಧಾರಿಸಬೇಕು’
ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ್ದ ತರೂರ್
ಶೋಪಿಯಾನ್ ಪ್ರಕರಣ: ಸಿಬಿಐ ತನಿಖೆ ಆರಂಭ
ಮೇನಕಾ ವಿರುದ್ಧ ಮೊಕದ್ದಮೆ
ಯುಪಿಎ ವೆಚ್ಚ ಕಡಿತ: ಮಾಯಾವತಿ ಗೇಲಿ
ಎನ್‌ಡಿಎಗೆ ಸೋಲಿನ ಕಹಿ
ಲಾಲು ಅವಧಿ ನೇಮಕ: ಸಿಬಿಐ ತನಿಖೆಗೆ ಒತ್ತಾಯ
ದೆಹಲಿ: ಕಾಂಗ್ರೆಸ್‌ಗೆ ಮುಖಭಂಗ
ಫೆ.2010ಕ್ಕೆ 9ನೇ ವಿಶ್ವ ತಮಿಳು ಸಮ್ಮೇಳನ
ಅಪಘಾತ: ಆರು ಯಾತ್ರಿಗಳ ಸಾವು
ಪ್ರಧಾನಿ ಹೇಳಿಕೆ ಅಲ್ಲಗಳೆದ ಪ್ರತ್ಯೇಕತಾವಾದಿಗಳು
ಜಪಾನ್‌ನೊಂದಿಗೆ ಸರಕು ಸಾಗಣೆ ಸಂಪರ್ಕ ಜಾಲ
ಕಟ್ಟಡ ಕುಸಿದು ಏಳು ಮಂದಿ ಸಾವು
ರಾಷ್ಟ್ರಪತಿ ಮಧ್ಯಸ್ಥಿಕೆಗೆ ಆಗ್ರಹ
ರಾಷ್ಟ್ರಪತಿಯೊಂದಿಗೆ ನಲಿದ ಹಳ್ಳಿ ಮಕ್ಕಳು!
ಅನುಪಮ್ ಖೇರ್‌ಗೆ ಕೇಂಬ್ರಿಜ್ ವಿವಿ ಆಹ್ವಾನ
ರಾಹುಲ್ ಇದ್ದ ರೈಲಿಗೆ ಕಲ್ಲು-ಮೂವರ ಬಂಧನ
ವಂಚನೆ: ಮಾಜಿ ಶಾಸಕನಿಗೆ ಜೈಲುಶಿಕ್ಷೆ
ಚೀನಾ ಅತಿಕ್ರಮಣ: ಪ್ರಮುಖ ಸಭೆ ಮುಂದಕ್ಕೆ
ಚುನಾವಣೆ: ಇಂದು ಅಧಿಸೂಚನೆ
ರೈಲ್ವೆ ನೌಕರರಿಗೆ ಬೋನಸ್
ಸಲಿಂಗಕಾಮ: ನಿಲುವು ವ್ಯಕ್ತಪಡಿಸಲು ಕೇಂದ್ರ ನಕಾರ
ಗುಂಡ್ಯ ಯೋಜನೆ ಕೈಬಿಡಲು ರಾಜ್ಯಕ್ಕೆ ಕೇಂದ್ರದ ಸಲಹೆ
ಒಳಗಿನ ಹೋರಾಟಕ್ಕೆ ತೆರೆ; ಬಹಿರಂಗಕ್ಕೆ ಅಣಿ..
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618