ಶನಿವಾರ, ಸೆಪ್ಟೆಂಬರ್ 19, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ವಿದ್ಯೆಯ ಮುಖ್ಯ ಗುರಿ ಎಂದರೆ ಸಮಾಜದಲ್ಲಿ ಇತರರೊಡನೆ ಕೂಡಿ ಬಾಳುವುದನ್ನು ಕಲಿಸುವುದು.
--ಡಾ. ರಾಧಾಕೃಷ್ಣನ್
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಕೃಷಿ
ಆರೋಗ್ಯ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ರಸ್ತೆ ಕಾಮಗಾರಿಗೆ ಚಾಲನೆ
ಪ್ರಜಾವಾಣಿ ವಾರ್ತೆ

ಯಲಹಂಕ: ‘ರಸ್ತೆಗಳು ಸುಧಾರಣೆಯಾದರೆ ಬಳಿಕ ಇತರೆ ಅಭಿವೃದ್ಧಿ ಕಾಮಗಾರಿಗಳ ಕಡೆಗೆ ಗಮನ ಹರಿಸಬಹುದು. ಆ ನಿಟ್ಟಿನಲ್ಲಿ ಜಾಲಾ ಹೋಬಳಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ’ ಎಂದು ಶಾಸಕ ಕೃಷ್ಣ ಬೈರೇಗೌಡ ಹೇಳಿದರು.

ಬೆಂಗಳೂರು ಉತ್ತರ ತಾಲ್ಲೂಕು ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುರೆಗೆರೆ ಗ್ರಾಮದಿಂದ ಗಡೇನಹಳ್ಳಿ, ಚನ್ನಹಳ್ಳಿ, ಬೈನಹಳ್ಳಿ ಮಾರ್ಗವಾಗಿ ಬೆಟ್ಟಹಲಸೂರು ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ 2.5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಕುದುರೆಗೆರೆ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದರು.

‘ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಒಂದು ಕೋಟಿ ರೂಪಾಯಿ ಅನುದಾನದ ಜೊತೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 7.5 ಕೋಟಿ ರೂಪಾಯಿ ಅನುದಾನ ಪಡೆಯಲಾಗಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ಕಳೆದ ಒಂದು ವರ್ಷದಿಂದ ಸುಮಾರು 1.5 ಕೋಟಿ ರೂಪಾಯಿ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತಿದೆ’ ಎಂದರು.

click here
ಗ್ರಾ.ಪಂ.ಅಧ್ಯಕ್ಷ ಬಿ.ಕೆ. ಮಂಜುನಾಥಗೌಡ ಮಾತನಾಡಿ, ‘ಕುದುರೆಗೆರೆ ಹಾಗೂ ಗಡೇನಹಳ್ಳಿ ಗ್ರಾಮದ ಜನತೆ ಅಸ್ವಸ್ಥಗೊಂಡರೆ ದೂರದ ಪ್ರದೇಶಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತಾಗಿದೆ. ಹಾಗಾಗಿ ಇದೇ  ಪ್ರದೇಶದಲ್ಲಿ ಆರೋಗ್ಯ ಘಟಕ ಹಾಗೂ ಪಶು ಆರೋಗ್ಯ ಘಟಕ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಶಾಲಾ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಯಿತು. ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾಗಿದ್ದ ಮನೆಗಳ ಕುಟುಂಬ ಸದಸ್ಯರಿಗೆ ಸರ್ಕಾರದಿಂದ ಮಂಜೂರಾಗಿದ್ದ ಪರಿಹಾರ ಹಣದ ಚೆಕ್ ವಿತರಿಸಲಾಯಿತು.

ತಾ.ಪಂ.ಅಧ್ಯಕ್ಷ ಮುನಿದಾಸಪ್ಪ, ಸದಸ್ಯ ಮುನಿಕೃಷ್ಣಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ದೊಡ್ಡಬಸವರಾಜು, ಎಪಿಎಂಸಿ ನಿರ್ದೇಶಕ ಶಿವಣ್ಣ, ಗ್ರಾ.ಪಂ. ಅಧ್ಯಕ್ಷ ವೇಲುಸ್ವಾಮಿ, ಮಾಜಿ ಅಧ್ಯಕ್ಷರಾದ ಕೆ.ಶ್ರೀನಿವಾಸಯ್ಯ, ಎಸ್.ಕೆ.ಆಂಜಿನಪ್ಪ, ಕರ್ನಾಟಕ ಕೃಷಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಕಾಂಗ್ರೆಸ್ ಮುಖಂಡರಾದ ಉತ್ತನಹಳ್ಳಿ ರಘು, ಸಿ. ಕೃಷ್ಣಮೂರ್ತಿ, ಉದಯ್, ಅಮರನಾರಾಯಣ ಉಪಸ್ಥಿತರಿದ್ದರು.

ಇತರ ಸುದ್ದಿಗಳು
ಮೂರು ದಿನವಾದರೂ ಪತ್ತೆಯಾಗದ ಬಾಲಕ
ಅಭಿವೃದ್ಧಿಯ ಅಸಮತೋಲನ; ಸಮಸ್ಯೆಗಳು ವಿಭಿನ್ನ
ಅಕ್ರಮ ಬಡಾವಣೆ ನಿರ್ಮಾಣ: ಲೋಕಾಯುಕ್ತರ ಅಸಮಾಧಾನ
ತುಂಡಾದ ವಿದ್ಯುತ್ ತಂತಿಗೆ 2 ಬಲಿ
ಮಾರತ್‌ಹಳ್ಳಿ ಸ್ಮಶಾನದ ದುಸ್ಥಿತಿ
ರಸ್ತೆ ಕಾಮಗಾರಿಗೆ ಚಾಲನೆ
ದೀಪ್ತಿಗೆ ‘ಯೋಗ ಕಿಶೋರಿ’ ರಾಜ್ಯಮಟ್ಟದ ಪ್ರಶಸ್ತಿ
ಯಲಹಂಕ: ನಾಳೆ ಉಚಿತ ಆರೋಗ್ಯ ತಪಾಸಣೆ
ವಿವಾಹ ಪ್ರೋತ್ಸಾಹಧನ ಏರಿಕೆ
ಚಿದಂಬರಂ ಪಿಳ್ಳೈ 137ನೇ ಜಯಂತಿ
ಕೋಟಿ ವಂಚನೆ: ನಾಲ್ವರ ಸೆರೆ
‘ರಾಷ್ಟ್ರೀಯ ನ್ಯಾಯಾಂಗ ಆಯೋಗ ಅಗತ್ಯ’
ಅಪೂರ್ಣ ಕಾಮಗಾರಿ: ಮಾಹಿತಿಗೆ ಆದೇಶ
ಕಲ್ಯಾಣ ಜ್ಯೋತಿ ಪಾದಯಾತ್ರೆ
ದಂಪತಿ ಆತ್ಮಹತ್ಯೆ
ಕಾರು ಡಿಕ್ಕಿ: ವಿದ್ಯಾರ್ಥಿ ಸಾವು
ಸಗಟು ಖರೀದಿ ಪುಸ್ತಕ: 24ರಿಂದ ಪ್ರದರ್ಶನ
ಇಂದಿನಿಂದ ಕೌನ್ಸೆಲಿಂಗ್
ಧಾರಾಕಾರ ಮಳೆ ಸಂಚಾರ ಅಸ್ತವ್ಯಸ್ತ
ಹೋಟೆಲ್ ಅಶೋಕದಲ್ಲಿ ‘ಏಷ್ಯಾ ವೆಡ್ಡಿಂಗ್ ಫೇರ್’
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618