ಭಾನುವಾರ , ಸೆಪ್ಟೆಂಬರ್ 20, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ವಿದ್ಯೆಯ ಮುಖ್ಯ ಗುರಿ ಎಂದರೆ ಸಮಾಜದಲ್ಲಿ ಇತರರೊಡನೆ ಕೂಡಿ ಬಾಳುವುದನ್ನು ಕಲಿಸುವುದು.
--ಡಾ. ರಾಧಾಕೃಷ್ಣನ್
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಕೃಷಿ
ಆರೋಗ್ಯ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಅಸಂಘಟಿತರ ಸಮಸ್ಯೆ: 23ರಂದು ಸಭೆ- ಖರ್ಗೆ
‘ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಚರ್ಚೆ ನಡೆಸಲು ಇದೇ 23ರಂದು ಸಭೆ ಕರೆಯಲಾಗಿದೆ’

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೆಬ್ಬಾಳದ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಬಡವರಿಗೆ ಆಹಾರಧಾನ್ಯ ವಿತರಿಸಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಜಣ್ಣ ಇತರರು ಚಿತ್ರದಲ್ಲಿದ್ದಾರೆ.

ಯಲಹಂಕ: ‘ಅಸಂಘಟಿತ ಕಾರ್ಮಿಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಕಾನೂನನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಜಾರಿಗೆ ತರಬೇಕು’ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿಯು ಹೆಬ್ಬಾಳದ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಜಾನ್ ಹಾಗೂ ದಸರಾ ಹಬ್ಬದ ಅಂಗವಾಗಿ ಬಡವರಿಗೆ ಆಹಾರಧಾನ್ಯ ವಿತರಿಸಿ ಅವರು ಮಾತನಾಡಿದರು.

‘ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಚರ್ಚೆ ನಡೆಸಲು ಇದೇ 23ರಂದು ಸಭೆ ಕರೆಯಲಾಗಿದೆ’ ಎಂದರು.

ಆರೋಪ: ‘ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಬರ ಪರಿಹಾರ ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸಿದಾಗ ಕೇಂದ್ರ ಸರ್ಕಾರದಿಂದ ನೀಡುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳದ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ’ ಎಂದು ಅವರು ಆರೋಪಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಮಾತನಾಡಿ, ‘ಬಿಜೆಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸಿದರೂ ಈವರೆಗೆ ಎರಡು ರೂಪಾಯಿಗೆ ಕೆ.ಜಿ. ಅಕ್ಕಿ ನೀಡುವ ಭರವಸೆ ಈಡೇರಿಸಿಲ್ಲ. ಕೆಂಪೇಗೌಡರ ಹೆಸರಿನಲ್ಲಿ 60 ಸಾವಿರ ನಿವೇಶನಗಳನ್ನು ನೀಡುವುದಾಗಿ ಚುನಾವಣೆಗೂ ಮುನ್ನ ಹೇಳಿಕೆ ನೀಡಿದ್ದ ಬಿಜೆಪಿ  ಈವರೆಗೆ ಒಂದೂ ನಿವೇಶನ ನೀಡಿಲ್ಲ’ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಾಜಣ್ಣ, ಸಮಿತಿ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆಪಿಸಿಸಿ ವಕ್ತಾರ ಛಲವಾದಿ ನಾರಾಯಣ ಸ್ವಾಮಿ, ಹೆಬ್ಬಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರುಕ್ಮಿಣಿ, ಮುಖಂಡರಾದ ಗೋಪಾಲಪ್ಪ, ವೆಂಕಟಸ್ವಾಮಿ, ಜಯರಾಮಣ್ಣ, ರವಿಕುಮಾರ್ ಉಪಸ್ಥಿತರಿದ್ದರು.

ಇತರ ಸುದ್ದಿಗಳು
ಮುಂದುವರಿದ ವರುಣನ ಆರ್ಭಟ
ಟಮಿಫ್ಲೂ ಮಾತ್ರೆ ಮಾರಾಟ
‘ಕಲ್ಪನಾ ಬದುಕಿದ್ದರೆ..ಧ್ರುವತಾರೆಗಳಾಗುತ್ತಿದ್ದೆವು’
ಪ್ರವೇಶ ಕೌನ್ಸೆಲಿಂಗ್ ಆರಂಭ
ಶ್ವೇತಪತ್ರ ಹೊರಡಿಸಲು ಆಗ್ರಹ
ನಿವೃತ್ತ ಸೇನಾಧಿಕಾರಿಗಳ ಕಲ್ಯಾಣಕ್ಕೆ ಕ್ರಮ
ಶರಣರ ತತ್ವಗಳ ಅನುಷ್ಠಾನಕ್ಕೆ ಸಲಹೆ
ಉದ್ಯಾನ,ಗಿರಿಧಾಮಗಳ ಅಭಿವೃದ್ಧಿಗೆ ರೂ 8.5 ಕೋಟಿ
ವಿಶ್ವಕರ್ಮ ಸಮುದಾಯಕ್ಕೆ ಮೀಸಲಾತಿ:ಚಿಂತನೆ
ಎಚ್1ಎನ್1: ಸಾವು 80ಕ್ಕೆ
ಮಿತವ್ಯಯ: ರಾಜ್ಯದಲ್ಲಿ ಕೇಳುವವರೇ ಇಲ್ಲ
ಅಸಂಘಟಿತರ ಸಮಸ್ಯೆ: 23ರಂದು ಸಭೆ- ಖರ್ಗೆ
ಸಾಂಸ್ಥಿಕ ಚುನಾವಣೆಯಲ್ಲಿ ಗದ್ದಲ
‘ಬೀದಿಪಾಲು ಮಾಡಬೇಡಿ’
ಡಾ. ರಾಜ್‌ಕುಮಾರ್ ಪ್ರಶಸ್ತಿಗೆ ಆಹ್ವಾನ
ಸರ ಕಿತ್ತು ಬೈಕ್‌ನಲ್ಲಿ ಪರಾರಿ
ಸರ್ಕಾರದ ಪಾತ್ರ ಇಲ್ಲ
ಒಂಟಿ ಮಹಿಳೆ ಮನೆಗೆ ನುಗ್ಗಿ ದರೋಡೆ
ಕೆಲಸದ ಆಮಿಷ ಪ್ರಕರಣ:ಆರೋಪಿಗೆ 1ವರ್ಷ ಶಿಕ್ಷೆ
ಅಪಹರಣ ಯತ್ನ: ಮೂವರ ಬಂಧನ
ಬಿಲ್ಡರ್ ರವಿರೆಡ್ಡಿ ಬಂಧನಕ್ಕೆ ಶೋಧ
ಕಾರು ಬೈಕ್ ಡಿಕ್ಕಿ: ವಿದ್ಯಾರ್ಥಿ ಸಾವು
ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618