ಪ್ರಜಾವಾಣಿ ವಾರ್ತೆ
ಲಖನೌ: ‘ಮರ್ಯಾದಾ ಹತ್ಯೆ’ಗೆ ಕುಖ್ಯಾತವಾಗಿರುವ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಜಾತಿ ಆಧಾರಿತ ಪಂಚಾಯ್ತಿಯೊಂದು ದಲಿತ ಮಹಿಳೆ ಹಾಗೂ ಆಕೆಯ ಪ್ರೇಮಿ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದೆ. ಜಿಲ್ಲೆಯ ಅಲ್ಡಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದ ಪಂಚಾಯ್ತಿ ಸದಸ್ಯರ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಗಂಡನನ್ನು ಕಳೆದುಕೊಂಡ ದಲಿತ ಮಹಿಳೆ ತನ್ನದೇ ಸಮುದಾಯಕ್ಕೆ ಸೇರಿದ ವಿವಾಹಿತ ಯುವಕನನ್ನು ಪ್ರೀತಿಸುತ್ತಿದ್ದು, ಇದು ಪಂಚಾಯ್ತಿಯ ಕೆಂಗಣ್ಣಿಗೆ ಕಾರಣವಾಗಿದೆ.
ಇವರಿಬ್ಬರೂ ತಮ್ಮ ಗ್ರಾಮದ ಸುತ್ತಮುತ್ತ ಕಂಡುಬಂದಲ್ಲಿ ಇವರ ವಿರುದ್ಧ ಕಂಡಲ್ಲಿ ಗುಂಡಿಕ್ಕುವಂತೆ ಪಂಚಾಯ್ತಿಯು ತನ್ನ ಸದಸ್ಯರಿಗೆ ಸೂಚಿಸಿದೆ.