ಬುಧವಾರ, ಸೆಪ್ಟೆಂಬರ್ 30, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನನ್ನಿಂದ ಇದು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ನಾನಿದನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವೇ ನಿಮ್ಮನ್ನು ಮುನ್ನಡೆಸಬಲ್ಲದು. .
--ಸ್ವಾಮಿ ವಿವೇಕಾನಂದ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ದೇಶ ಸುತ್ತಿ: ತಾಣ ನೋಡಿ

ಯುಕ್ಸಾಮ್
ರಾಜ್ಯ: ಸಿಕ್ಕಿಂ

ಸಿಕ್ಕಿಂನಲ್ಲಿ ಬೌದ್ಧರ ಪವಿತ್ರ ತಾಣಗಳಲ್ಲಿ ಒಂದು ಯುಕ್ಸಾಮ್. ಇದು ರಾಜ್ಯದ ಮೊದಲ ರಾಜಧಾನಿಯೂ ಹೌದು. ಸಮುದ್ರ ಮಟ್ಟದಿಂದ 1780 ಮೀಟರ್ ಎತ್ತರದಲ್ಲಿರುವ ಈ ಪ್ರದೇಶಕ್ಕೆ ಈ ಹೆಸರು ಬರಲು ಐತಿಹಾಸಿಕ ಕಾರಣ ಇದೆ. ‘ಯುಕ್ಸಾಮ್’ ಎಂದರೆ ಮೂವರು ಲಾಮಾಗಳ ಭೇಟಿಯ ಸ್ಥಳ ಎಂದರ್ಥ. ಕ್ರಿ.ಶ. 1641ರಲ್ಲಿ ಸಿಕ್ಕಿಂನ ಚಗ್ಯಾಲ್ ದೊರೆ ಸಿಂಹಾಸನಾರೂಢನಾದ ಸ್ಥಳ ಇದು. ಮೂವರು ಪ್ರಮುಖ ಲಾಮಾಗಳು ಇಲ್ಲಿ ಸೇರಿ ರಾಜನಿಗೆ ಪಟ್ಟಾಭಿಷೇಕ ಮಾಡಿದ್ದರು. ಅದಕ್ಕೆ ಕುರುಹು ಎಂಬಂತೆ ಇಲ್ಲಿ ಈಗಲೂ ಕಲ್ಲಿನ ಆಸನಗಳು ಮತ್ತು ಮುಖ್ಯ ಲಾಮಾ ಅವರ ಹೆಜ್ಜೆ ಗುರುತನ್ನು ನೋಡಬಹುದು. ಈ ಎಲ್ಲ ಕಾರಣಕ್ಕೆ ಸಿಕ್ಕಿಂನ ಬೌದ್ಧರ ನಾಗರಿಕತೆಯ ತೊಟ್ಟಿಲು ಎಂಬ ಖ್ಯಾತಿಯೂ ಈ ಸ್ಥಳಕ್ಕೆ ಇದೆ.

ಈ ರಾಜಮನೆತನವನ್ನು ಸ್ಥಾಪಿಸಿದಾತ ಫುಂಟ್‌ಸಾಕ್ ನಂಗ್ಯಾಲ್. ಆತನ ರಾಜ್ಯ ಈಗಿನ ಸಿಕ್ಕಿಂನಷ್ಟೇ ದೊಡ್ಡದಿತ್ತು. 1670ರಲ್ಲಿ ಆತನ ಪುತ್ರ ತೆನ್‌ಸಂಗ್ ನಂಗ್ಯಾಲ್ ರಾಜಧಾನಿಯನ್ನು ಯುಕ್ಸಾಮ್‌ನಿಂದ ರಬ್‌ಡೆಟ್ಸೆಗೆ ಸ್ಥಳಾಂತರಿಸಿದ.
ಯುಕ್ಸಾಮ್‌ನಿಂದ ಒಂದು ಗಂಟೆ ಚಾರಣ ನಡೆಸಿದರೆ ದುಬ್ಡಿ ಬೌದ್ಧವಿಹಾರ ಸಿಗುತ್ತದೆ. ಇದಕ್ಕೆ 300 ವರ್ಷಗಳ ಇತಿಹಾಸ ಇದೆ. ಇಲ್ಲಿಂದ 9 ಕಿ.ಮೀ. ದೂರದಲ್ಲಿ ಫಮ್‌ರಾಂಗ್ ಜಲಪಾತ ಇದ್ದು, ಹತ್ತಿರದ ಸೇತುವೆಯಿಂದ ಈ ಜಲಪಾತದ ನಯನ ಮನೋಹರ ದೃಶ್ಯವನ್ನು ಸವಿಯಬಹುದು. ಇಲ್ಲಿಗೆ ಸಮೀಪದ ಕಾರ್ಟೊಕ್ ಸರೋವರವೂ ಮನಮೋಹಕ.  ಹಿಮಾಲಯದಲ್ಲಿ ಚಾರಣ ಕೈಗೊಳ್ಳುವ ಆಸಕ್ತರಿಗೆ ಯುಕ್ಸಾಮ್ ಒಂದು ಮೂಲ ಶಿಬಿರವೂ ಹೌದು.

ಪ್ರಕೃತಿ ಪ್ರಿಯರು, ನಗರದ ಜಂಜಡಗಳಿಂದ ಒಂದಿಷ್ಟು ದಿನ ದೂರ ಇದ್ದು ಮನಸ್ಸಿಗೆ ನೆಮ್ಮದಿ ತಂದುಕೊಳ್ಳಲು ಬಯಸುವವರಿಗೆ ಇದೊಂದು ಸೂಕ್ತ ಸ್ಥಳ. ತಾಶಿಡಿಂಗ್ ಅಥವಾ ಪೆಲ್ಲಿಂಗ್‌ನಿಂದ ಯುಕ್ಸಾಮ್‌ಗೆ ತೆರಳಬಹುದು. ತಾಶಿಡಾಂಗ್‌ನಿಂದ ದಟ್ಟ ಅರಣ್ಯದ ಮೂಲಕ ಇಲ್ಲಿಗೆ ತೆರಳಬೇಕಿದ್ದು, ಇದೊಂದು ವಿಶಿಷ್ಟ ಅನುಭವ ನೀಡುವ ಪ್ರಯಾಣ. ಗೇಜಿಂಗ್‌ನಿಂದ ಇಲ್ಲಿಗೆ 43 ಕಿ.ಮೀ.

 

ಇತರ ಸುದ್ದಿಗಳು
ಗಗನಕ್ಕೇರಲಿರುವ ಚಿನ್ನದ ಬೆಲೆ
ಮನ್ನಾ ಡೇಗೆ ಫಾಲ್ಕೆ ಪ್ರಶಸ್ತಿ
‘ಪರಮಾಣು ಭಯೋತ್ಪಾದನೆ ಭಯಾನಕ ಸವಾಲು’
ಮಾಲೆಗಾಂವ್ ಸ್ಫೋಟಕ್ಕೆ 1 ವರ್ಷ
ಹೊಸ ತಿರುವು ನೀಡಿದ ಮರು ಶವಪರೀಕ್ಷೆ: ‘ಅತ್ಯಾಚಾರ ನಡೆದಿಲ್ಲ’
ಕೇರಳ: ‘ಸಿಂಧೂ ಕಣಿವೆ’ನಾಗರಿಕತೆ ಕುರುಹು ಪತ್ತೆ
ದೋಣಿ ದುರಂತ: 30 ಸಾವು
ರೈಲಿಗೆ ಬೆಂಕಿ ಇಟ್ಟ ಉದ್ರಿಕ್ತ ಗುಂಪು
ಏರ್ಇಂಡಿಯಾ ಪೈಲಟ್ ಗಳ ಮುಷ್ಕರ ಅಂತ್ಯ
ಕೇಂದ್ರದಿಂದ ಹೊಸ ಪ್ರಮಾಣ ಪತ್ರ
ಜಗನ್ ಪರ ಲಾಬಿ: ರಾಜೀನಾಮೆ ಬೆದರಿಕೆ
ಸಂಕ್ಷಿಪ್ತ ಸುದ್ದಿ
ದೇಶ ಸುತ್ತಿ: ತಾಣ ನೋಡಿ
ರಾಷ್ಟ್ರಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆ
ಕಸಾಬ್‌ನ ಪ್ರತಿಕೃತಿ ದಹನ
ಅ.21ಕ್ಕೆ ಪರಿಸರ ಸಮಿತಿ ಭೇಟಿ
ಕಪ್ಪು ಹಣ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
‘ಚಂದ್ರನ ನೆಲವನ್ನು ಅಗೆದು ನೋಡಿ’
ಅಲ್ಪಸಂಖ್ಯಾತರ ಅಭಿವೃದ್ಧಿಗೆ 2500 ಕೋಟಿ ನೆರವು
2 ದಿನಗಳಲ್ಲಿ ಪ್ರಮಾಣ ಪತ್ರ
ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ
ಪೈಲಟ್‌ಗಳ ಸಂಯುಕ್ತ ಒಕ್ಕೂಟ
ಏರ್‌ಇಂಡಿಯಾ ಮುಷ್ಕರ ತೀವ್ರ
‘ಪ್ರಾರ್ಥನಾ ಮಂದಿರ’ ನಿರ್ಮಾಣ ಬೇಡ
ಕ್ವಟ್ರೋಚಿ ಪ್ರಕರಣ ವಾಪಸ್
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618