ಬುಧವಾರ, ಸೆಪ್ಟೆಂಬರ್ 30, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನನ್ನಿಂದ ಇದು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ನಾನಿದನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವೇ ನಿಮ್ಮನ್ನು ಮುನ್ನಡೆಸಬಲ್ಲದು. .
--ಸ್ವಾಮಿ ವಿವೇಕಾನಂದ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಕ್ವಟ್ರೋಚಿ ಪ್ರಕರಣ ವಾಪಸ್
ಇಟಲಿಯ ವ್ಯಾಪಾರೋದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸುವುದರೊಂದಿಗೆ ಸುಮಾರು ಎರಡು ದಶಕಗಳಷ್ಟು ಹಳೆಯದಾದ ಬೋಪೋರ್ಸ್ ಲಂಚ ಹಗರಣ ಕೊನೆಗೂ ಅಂತ್ಯ ಕಂಡಂತಾಗಿದೆ.


ನವದೆಹಲಿ(ಪಿಟಿಐ): ಹೋವಿಟ್ಜರ್ ಯುದ್ಧ ಫಿರಂಗಿ ಮಾರಾಟ ಒಪ್ಪಂದದಲ್ಲಿ ಸುಮಾರು 64 ಕೋಟಿ ರೂಪಾಯಿಗಳ ಕಮಿಷನ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಕ್ವಟ್ರೋಚಿಯನ್ನು ತನ್ನ ವಶಕ್ಕೆ ಪಡೆಯುವ ಸರ್ಕಾರದ ಎಲ್ಲ ಪ್ರಯತ್ನಗಳು ವಿಫಲವಾಗಿರುವುದಾಗಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠಕ್ಕೆ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣ್ಯಂ ತಿಳಿಸಿದರು.

ಬೋಫೋರ್ಸ್ ಒಪ್ಪಂದದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪ ಸಾಬೀತಾಗಿಲ್ಲವೆಂದು ದೆಹಲಿ ಹೈಕೋರ್ಟ್ 2004ರಲ್ಲಿ ಅಭಿಪ್ರಾಯಪಟ್ಟಿರುವುದನ್ನು ಗಣನೆಗೆ ತೆಗೆದುಕೊಂಡು, ಈ ಪ್ರಕರಣವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಸಿಬಿಐ ಮಾಡಿರುವುದಾಗಿ ಅವರು ಹೇಳಿದರು. ಸರ್ಕಾರವು ಪ್ರಕರಣದ ಎಲ್ಲ ಅಂಶಗಳನ್ನು ಪರಿಗಣಿಸಿ, ಮೇಲಿನ ನಿರ್ಧಾರ ಕೈಗೊಂಡಿರುವುದಾಗಿಯೂ ಅವರು ನುಡಿದರು.

ಸುಪ್ರೀಂಕೋರ್ಟ್‌ನಲ್ಲಿ ಸಾಲಿಸಿಟರ್ ಜನರಲ್ ನೀಡಿದ ಹೇಳಿಕೆಗೆ ತಕ್ಷಣವೇ ಪ್ರತಿಪಕ್ಷ ಬಿಜೆಪಿ ಮತ್ತು ಅದರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಆಡಳಿತಾರೂಢ ಕಾಂಗ್ರೆಸ್ ಮಾತ್ರ ಪ್ರಕರಣ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿರುವುದರಿಂದ ಏನನ್ನೂ ಹೇಳುವುದಿಲ್ಲ ಎಂದಿದೆ.

ಸರ್ಕಾರ ಮತ್ತು ಸಿಬಿಐ ಪ್ರಕರಣವನ್ನು ಅಂತ್ಯಗೊಳಿಸಲು ನಿರ್ಧರಿಸಿರುವುದನ್ನು ಕ್ವಟ್ರೋಚಿಯ ಲಂಡನ್ ಬ್ಯಾಂಕ್ ಖಾತೆ ಮುಟ್ಟುಗೋಲಿನಿಂದ ಮುಕ್ತಗೊಂಡಿರುವುದರ ವಿರುದ್ಧ 2006ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ವಕೀಲ ಅಜಯ್ ಅಗರವಾಲ್ ವಿರೋಧಿಸಿದರು.

ಇತರ ಸುದ್ದಿಗಳು
ಗಗನಕ್ಕೇರಲಿರುವ ಚಿನ್ನದ ಬೆಲೆ
ಮನ್ನಾ ಡೇಗೆ ಫಾಲ್ಕೆ ಪ್ರಶಸ್ತಿ
‘ಪರಮಾಣು ಭಯೋತ್ಪಾದನೆ ಭಯಾನಕ ಸವಾಲು’
ಮಾಲೆಗಾಂವ್ ಸ್ಫೋಟಕ್ಕೆ 1 ವರ್ಷ
ಹೊಸ ತಿರುವು ನೀಡಿದ ಮರು ಶವಪರೀಕ್ಷೆ: ‘ಅತ್ಯಾಚಾರ ನಡೆದಿಲ್ಲ’
ಕೇರಳ: ‘ಸಿಂಧೂ ಕಣಿವೆ’ನಾಗರಿಕತೆ ಕುರುಹು ಪತ್ತೆ
ದೋಣಿ ದುರಂತ: 30 ಸಾವು
ರೈಲಿಗೆ ಬೆಂಕಿ ಇಟ್ಟ ಉದ್ರಿಕ್ತ ಗುಂಪು
ಏರ್ಇಂಡಿಯಾ ಪೈಲಟ್ ಗಳ ಮುಷ್ಕರ ಅಂತ್ಯ
ಕೇಂದ್ರದಿಂದ ಹೊಸ ಪ್ರಮಾಣ ಪತ್ರ
ಜಗನ್ ಪರ ಲಾಬಿ: ರಾಜೀನಾಮೆ ಬೆದರಿಕೆ
ಸಂಕ್ಷಿಪ್ತ ಸುದ್ದಿ
ದೇಶ ಸುತ್ತಿ: ತಾಣ ನೋಡಿ
ರಾಷ್ಟ್ರಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆ
ಕಸಾಬ್‌ನ ಪ್ರತಿಕೃತಿ ದಹನ
ಅ.21ಕ್ಕೆ ಪರಿಸರ ಸಮಿತಿ ಭೇಟಿ
ಕಪ್ಪು ಹಣ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
‘ಚಂದ್ರನ ನೆಲವನ್ನು ಅಗೆದು ನೋಡಿ’
ಅಲ್ಪಸಂಖ್ಯಾತರ ಅಭಿವೃದ್ಧಿಗೆ 2500 ಕೋಟಿ ನೆರವು
2 ದಿನಗಳಲ್ಲಿ ಪ್ರಮಾಣ ಪತ್ರ
ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ
ಪೈಲಟ್‌ಗಳ ಸಂಯುಕ್ತ ಒಕ್ಕೂಟ
ಏರ್‌ಇಂಡಿಯಾ ಮುಷ್ಕರ ತೀವ್ರ
‘ಪ್ರಾರ್ಥನಾ ಮಂದಿರ’ ನಿರ್ಮಾಣ ಬೇಡ
ಕ್ವಟ್ರೋಚಿ ಪ್ರಕರಣ ವಾಪಸ್
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618