ಬುಧವಾರ, ಸೆಪ್ಟೆಂಬರ್ 30, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನನ್ನಿಂದ ಇದು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ನಾನಿದನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವೇ ನಿಮ್ಮನ್ನು ಮುನ್ನಡೆಸಬಲ್ಲದು. .
--ಸ್ವಾಮಿ ವಿವೇಕಾನಂದ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಜ್ಯ
ಪ್ರಾಚೀನ ಹಸ್ತಪ್ರತಿ ಮೆರವಣಿಗೆ
ಪ್ರಜಾವಾಣಿ ವಾರ್ತೆ
ಮುರುಘಾಮಠದಲ್ಲಿ ಮಂಗಳವಾರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಧರ್ಮಗುರು ಬಸವೇಶ್ವರರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ನಡೆಯಿತು.


ಚಿತ್ರದುರ್ಗ: ಮುರುಘಾಮಠದಲ್ಲಿ ಮಂಗಳವಾರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಧರ್ಮಗುರು ಬಸವೇಶ್ವರರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ನಡೆಯಿತು.

ಶಿವಮೂರ್ತಿ ಮುರುಘಾ ಶರಣರು ಶೂನ್ಯ ಪೀಠಾರೋಹಣ ನೆರವೇರಿಸಿದ ನಂತರ ಈ ಮೆರವಣಿಗೆ ನಡೆಯಿತು. ಪರಂಪರೆಯಂತೆ ನಡೆದುಕೊಂಡು ಬಂದಿದ್ದ ಅಡ್ಡಪಲ್ಲಕ್ಕಿ ಮೆರವಣಿಗೆಯ ಬದಲಿಗೆ ಶಿವಮೂರ್ತಿ ಮುರುಘಾ ಶರಣರು ಪೀಠಕ್ಕೆ ಬಂದ ಮೇಲೆ ಅದೆಲ್ಲವನ್ನು ತ್ಯಜಿಸಿ ಪುಷ್ಪಾಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಬಸವೇಶ್ವರರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳಿನ್ನಿಟ್ಟು ಮಠದ ಆವರಣದೊಳಗೆ ಒಂದು ಸುತ್ತು ಪಲ್ಲಕ್ಕಿ ಮೆರವಣಿಗೆಯನ್ನು ಆರಂಭಿಸಲಾಗಿದೆ.

ಮೆರವಣಿಗೆಗೆ ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು. ನಗಾರಿ, ವೀರಗಾಸೆ, ಪೂಜಾಕುಣಿತ, ವಿವಿಧ ವೇಷಧಾರಿ ತಂಡಗಳು, ಜಗ್ಗಲಿಮೇಳ, ಡೊಳ್ಳುಕುಣಿತ, ಜೋಗಿ ಕುಣಿತ, ಲಂಬಾಣಿ ನೃತ್ಯ ಇತ್ಯಾದಿ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ತಂದಿತು.

ಹಸ್ತಪ್ರತಿಗಳ ಮೆರವಣಿಗೆ ಮುನ್ನ ನಡೆದ ಮುರುಘಾಮಠದ ಆವರಣದ ಒಳಗೆ ನಡೆದ ಜಾನಪದ ಕಲಾತಂಡಗಳ ಪ್ರದರ್ಶನ ಮೈನವಿರೇಳಿಸಿತು.

ಸರಳ ರೀತಿಯಲ್ಲಿ ನಡೆದ ಶಿವಮೂರ್ತಿ ಮುರುಘಾ ಶರಣರ ಶೂನ್ಯ ಪೀಠಾರೋಹಣ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಕಲಾತಂಡಗಳು ಸಾಹಸಮಯ ಪ್ರದರ್ಶನ ನೀಡಿದವು. ಆಕರ್ಷಕ ಜಾನಪದ ಕಲಾಪ್ರಕಾರಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಗೆ ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು.

ಮಾಚಿದೇವ ಗುರುಪೀಠದ ಬಸವ ಮಡಿವಾಳ ಮಾಚಿದೇವ ಶ್ರೀಗಳು ಹಾಗೂ ಹೆಳವ ಗುರುಪೀಠದ ಬಸವ ಭೃಂಗೇಶ್ವರ ಶ್ರೀಗಳು ಉಪಸ್ಥಿತರಿದ್ದರು.  ಮಠದ ಪ್ರಾಂಗಣದಲ್ಲಿ ನಿರ್ಮಿಸಲಾಗಿದ್ದ ಜಯದೇವ ಜಂಗೀ ಕುಸ್ತಿ ಅಖಾಡದಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಕುಸ್ತಿಪಟುಗಳು ಪಾಲ್ಗೊಂಡಿದ್ದರು.

ಇತರ ಸುದ್ದಿಗಳು
464 ವಿದ್ಯಾರ್ಥಿಗಳ ಪದವಿ ರದ್ದು
ಎಚ್1ಎನ್1ಗೆ ಮತ್ತೆ ಐವರು ಬಲಿ
ಬೆಳಿಗ್ಗೆಯಿಂದ ರಾತ್ರಿತನಕ ಗೋಷ್ಠಿ ಸುರಿಮಳೆ..
ಬಾಗಿಲನು ತೆರೆದು ಒಳಗೆ ಬಾ ಒಡೆಯ
ಅ.4ಕ್ಕೆ ವೈದ್ಯರ ಜತೆ ಚರ್ಚೆ: ಮುಖ್ಯಮಂತ್ರಿ
ಬಿಜಾಪುರ: ಮಳೆಗೆ ಒಂಬತ್ತು ಬಲಿ
ವಿದ್ಯತ್ ದರ ಏರಿಕೆ: ನ.20ರೊಳಗೆ ಆದೇಶ:ಪಾಂಡೆ
ಬೇಡಿಕೆ ಈಡೇರಲಿ: ದೇಶಪಾಂಡೆ
ಸರ್ಕಾರಿ ಕೋಟಾದಲ್ಲಿ ಮೀಸಲು: ಹೈಕೋರ್ಟ್
‘ಸಚಿವರಿಗೆ ಗುಜರಾತ್ ಪಾಠ ಕನ್ನಡಿಗರಿಗೆ ಅಪಮಾನ’
ಕಾಂಗ್ರೆಸ್, ಜೆಡಿಎಸ್ ಟೀಕೆಗೆ ಈಶ್ವರಪ್ಪ ಆಕ್ಷೇಪ
ವಿಧಾನಮಂಡಲದ ಎಂಟು ಜಂಟಿ ಸಮಿತಿಗಳ ರಚನೆ
ಎಸ್.ವಿ. ರಂಗನಾಥ್ ಇಂದು ಅಧಿಕಾರ ಸ್ವೀಕಾರ
ಸರ್ಕಾರಿ ವೈದ್ಯರ ಸಾಮೂಹಿಕ ರಾಜೀನಾಮೆ
ಸಚಿವರಿಗೆ ‘ಮೋದಿ ಪಾಠ’ ಆರಂಭ
ವಿವೇಕ ರೈ ರಾಜೀನಾಮೆ
ಪ್ರಾಚೀನ ಹಸ್ತಪ್ರತಿ ಮೆರವಣಿಗೆ
ಪಿಎಸ್‌ಎಸ್‌ಕೆ ಕಾರ್ಖಾನೆ ಖಾಸಗೀಕರಣ ಇಲ್ಲ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618