ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಷೇರುಪೇಟೆಗೆ ಹೆಲ್ತ್‌ ಕೇರ್‌ ಗ್ಲೋಬಲ್‌

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಬೆಂಗಳೂರು: ಹೆಲ್ತ್‌ ಕೇರ್‌ ಗ್ಲೋಬಲ್‌ (ಎಚ್‌ಸಿಜಿ) ಸಂಸ್ಥೆಯು ಬುಧವಾರ ಷೇರುಪೇಟೆ ಪ್ರವೇಶಿಸಲಿದೆ.ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹650 ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಇದರಲ್ಲಿ ₹400 ಕೋಟಿಯನ್ನು  ಕಂಪೆನಿಯಿಂದ ಹೊರಹೋಗುತ್ತಿರುವ ಪ್ರೇಮ್‌ಜಿ ಗ್ರೂಪ್‌, ಟೀಮ್‌ಸೆಕ್‌ ಸೇರಿದಂತೆ ಇನ್ನೂ ಕೆಲವು ಹೂಡಿಕೆದಾರಿಗೆ ನೀಡಲು, ಇನ್ನುಳಿದ₹250 ಕೋಟಿಯನ್ನು ಸಾಲ ಹಿಂದಿರುಗಿಸಲು ಬಳಸಿಕೊಳ್ಳುವು
ದಾಗಿ ಸಂಸ್ಥೆಯ ಅಧ್ಯಕ್ಷ ಅಜಯ್‌ ಕುಮಾರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬುಧವಾರದಿಂದ ಶುಕ್ರವಾರದವರೆಗೆ ಐಪಿಒ ಸಲ್ಲಿಸಲು ಅವಕಾಶವಿರುತ್ತದೆ. ₹10ರ ಮುಖಬೆಲೆಯ ಹೊಸ ಷೇರುಗಳನ್ನು ಬಿಡುಗಡೆ ಮಾಡಲಿದ್ದು, ಪ್ರತಿ ಷೇರಿನ ಬೆಲೆ ₹205 ರಿಂದ ₹218 ರವರೆಗೆ ನಿಗಿದ ಮಾಡಿದೆ.

ಐಪಿಒದಲ್ಲಿ 1.16 ಕೋಟಿಗಳಷ್ಟು ಹೊಸ ಷೇರುಗಳು ಮತ್ತು ಹಾಲಿ ಹೂಡಿಕೆದಾರರ 1.82 ಕೋಟಿ ಷೇರುಗಳ ಮಾರಾಟ ಕೊಡುಗೆ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT