ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಮಿ

ಮತ್ತೆ ಬಂದ
Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಭಾರತವನ್ನು ಕ೦ಡುಹಿಡಿದವರು ವಾಸ್ಕೋಡಿ ಗಾಮ ಎಂಬುದು ನಮಗೆಲ್ಲರಿಗೂ ಶಾಲೆಯ ದಿನಗಳಿಂದಲೇ ಗೊತ್ತು. ಆದರೆ ಈತ ಭಾರತಕ್ಕೆ ಬಂದು ಇಲ್ಲಿ ರಕ್ತಸಿಕ್ತ ಅಧ್ಯಾಯವನ್ನು ಪ್ರಾರಂಭಿಸಿದ್ದ ಎಂಬುದು ಯಾವ ಪುಸ್ತಕದಲ್ಲಿಯೂ ಇಲ್ಲ. ವಾಸ್ಕೋಡಿ ಗಾಮನ ಕ್ರೂರತನವನ್ನು ಬಿಂಬಿಸುವ ಚಿತ್ರವೇ ಮಲೆಯಾಳದ ಉರುಮಿ. ‘ಉರುಮಿ’ ಎಂದರೆ ಕೇರಳದ ಕಳರಿಪಯಟ್ಟಿನಲ್ಲಿ ಬಳಕೆಯಲ್ಲಿದ್ದ ಒ೦ದು ವಿಶಿಷ್ಟವಾದ ಖಡ್ಗದ ಹೆಸರು.

2011ರಲ್ಲಿ ಬಾಕ್ಸ್‌ ಆಫೀಸನ್ನು ಕೊಳ್ಳೆ ಹೊಡೆದಿದ್ದ ಈ ಚಿತ್ರವೀಗ ಮತ್ತೊಮ್ಮೆ ಬಿಡುಗಡೆಗೆ ಸಿದ್ಧಗೊಂಡಿದೆ. ಈಗ ಎಲ್ಲಾ ಭಾಷೆಗಳಲ್ಲೂ ಇದನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಾಗಿದೆ. ಇಂಥದ್ದೊಂದು ಯೋಚನೆ ಬಂದಿರುವುದು ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿರುವ ವಿದ್ಯಾಬಾಲನ್‌ ಅವರಿಗೆ. ಇದಕ್ಕೆ ಪ್ರೇರಣೆಯಾದದ್ದು ಬಹುಭಾಷೆಗಳಲ್ಲಿ ಬಿಡುಗಡೆಗೊಂಡಿರುವ ಬಾಹುಬಲಿ ಚಿತ್ರದ ಮೂಲಕ. ಇದೇ ರೀತಿಯಲ್ಲಿ ‘ಉರುಮಿ’ಯನ್ನೂ ಬಿಡುಗಡೆಗೊಳಿಸುವ ಸಂಬಂಧ ಅವರು ನಿರ್ದೇಶಕರಿಗೆ ಹೇಳಿದಾಗ ಅವರೀಗ ಇದಕ್ಕೆ ಒಪ್ಪಿಕೊಂಡಿದ್ದಾರಂತೆ.

ವಾಸ್ಕೋಡಿ ಗಾಮ ಭಾರತಕ್ಕೆ ವ್ಯಾಪಾರಕ್ಕೆಂದು ಮೂರು ಬಾರಿ ಬಂದಿದ್ದ. ಇಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಅಪಾರ ಸ೦ಪತ್ತನ್ನು ಲೂಟಿ ಹೊಡೆದ. ಎರಡನೇ ಬಾರಿ ಕೇರಳದ ಕಲ್ಲೀಕೋಟೆಗೆ ಬ೦ದಾಗ ಅವನ ಮಾತಿಗೆ ಬೆಲೆ ಕೊಡದ 40 ಮೀನುಗಾರರ ಕೈ,ಕಾಲು ತಲೆಗಳನ್ನು ಕತ್ತರಿಸಿ ಸಮುದ್ರಕ್ಕೆಸೆದಿದ್ದ.

ಮುಸ್ಲಿಮರ ಮೇಲಿನ ಕೋಪದಿ೦ದಾಗಿ, ಮೆಕ್ಕಾದಿ೦ದ ಮರಳಿ ಬರುತ್ತಿದ್ದ ಹಡಗನ್ನು ಸಮುದ್ರದಲ್ಲಿ ಅಡ್ಡಗಟ್ಟಿ ಅದರಲ್ಲಿದ್ದವರನ್ನು ಬ೦ಧಿಸಿದ್ದ.  ಸ೦ಧಾನಕ್ಕೆ ಬಂದಿದ್ದ ವ್ಯಕ್ತಿಯೊಬ್ಬನ ಕಿವಿಗಳನ್ನು ಕತ್ತರಿಸಿ ನಾಯಿಯ ಕಿವಿಗಳನ್ನು ಹೊಲಿದು ಕಳುಹಿಸಿದ್ದ. ತನ್ನ ವಶದಲ್ಲಿದ್ದ ಹಡಗಿಗೆ ಬೆ೦ಕಿ ಹಚ್ಚಿ ಅದರಲ್ಲಿದ್ದ ಸುಮಾರು 400 ಮಂದಿ ಮುಸ್ಲಿಮರನ್ನು ಜೀವ೦ತವಾಗಿ ಸುಟ್ಟುಹಾಕಿದ್ದ.

ಥಾಮಸ್ ಪಂಥದ ಕ್ರೈಸ್ತರನ್ನು ಬಲವ೦ತದಿ೦ದ ಕ್ಯಾಥೋಲಿಕ್ ಪ೦ಥಕ್ಕೆ ಮತಾ೦ತರಿಸಿದ್ದ... ಹೀಗೆ ಈತನ ಕರಾಳ ಮುಖವನ್ನು ಬಿಂಬಿಸುವ ಹಾಗೂ ಆತನನ್ನು ಹೇಗೆ ಸಾಯಿಸಿದರು ಎಂಬ ಸಂಪೂರ್ಣ ಕಥನವುಳ್ಳ ಚಿತ್ರ ‘ಉರುಮಿ’.
ಸಂತೋಷ್‌ ಶಿವನ್‌ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾ ಬಾಲನ್‌ ಜೊತೆ ಪೃಥ್ವಿರಾಜ್‌ ಸುಕುಮಾರನ್‌, ಪ್ರಭುದೇವ,  ಜೆನಿಲಿಯಾ ಡಿಸೋಜಾ ಮುಂತಾದವರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT