ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

* ವೃದ್ಧಾಪ್ಯದಲ್ಲಿ
ಒಂಟಿತನ ಜೀವನವಿಡೀ ಸಿಗರೇಟ್‌ ಸೇದುವುದಕ್ಕಿಂತ ಹೆಚ್ಚು ಅಪಾಯಕಾರಿ. ಸಮುದಾಯದಲ್ಲಿ ಜೀವಿಸು ವಯೋವೃದ್ಧರಲ್ಲಿ 5:1 ಒತ್ತಡ ಕಾಡಿದರೆ, ಕೇರ್‌ ಹೋಮ್‌ನಲ್ಲಿರುವವರಿಗೆ 5:2 ರಷ್ಟು ಕಾಡುತ್ತದೆ.

* ಜೀವನ ಶೈಲಿ: ದೀರ್ಘಕಾಲದ ದುರಭ್ಯಾಸ, ಅತಿಯಾದ ಆಹಾರ ಸೇವನೆ, ವ್ಯಾಯಾಮದ ಕೊರತೆ, ಆಟ ಮತ್ತು ಕೆಲಸದ ನಡುವೆ ಸಮತೋಲನ ಇಲ್ಲದಿರುವುದು ಒತ್ತಡಕ್ಕೆ ಪ್ರಮುಖ ಕಾರಣ.

2020ರ ಹೊತ್ತಿಗೆ ವಿಶ್ವದಾದ್ಯಂತ ವೈದ್ಯಕೀಯ ಕ್ಷೇತ್ರಕ್ಕೆ ‘ಖಿನ್ನತೆ’ ಹೊರೆಯಾಗಿ ಉಳಿದಿರುತ್ತದೆ ಎನ್ನುತ್ತದೆ ಸಂಶೋಧನೆ.

4.5 ಕೋಟಿ ಜನರು ವಿಶ್ವದಲ್ಲಿ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ.  ಪ್ರತಿ 16 ರಲ್ಲಿ ಒಬ್ಬರಿಗೆ ಈ ಸಮಸ್ಯೆ ಎದುರಾಗುತ್ತಿದೆ.

* ಭಾರತದಲ್ಲಿ 40 ಸಾವಿರ ಮಾನಸಿಕ ರೋಗಿಗಳಿಗೆ ಒಂದು ಹಾಸಿಗೆ ಲಭ್ಯ.

10 ಲಕ್ಷ ರೋಗಿಗಳು = 3 ವೈದ್ಯರು

ಪುರುಷರಿಗಿಂತ  2.5 ಪಟ್ಟು ಹೆಚ್ಚು ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ.

* ಗರ್ಭಧಾರಣೆ ಸಮಯದಲ್ಲಿ ಶೇ 15–20 ಮಹಿಳೆಯರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ.

* ಯುದ್ಧ ಮತ್ತು ಇನ್ನಿತರ ನೈಸರ್ಗಿಕ ವಿಕೋಪಗಳಾದ ನಂತರ ಜನರಲ್ಲಿ ಮಾನಸಿಕ ಸಮಸ್ಯೆಯ ಮಟ್ಟವೂ ಹೆಚ್ಚುತ್ತದೆ.

* ಪಾಶ್ಚಾತ್ಯ ದೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇಕಡಾ 90ರಷ್ಟು ಮಂದಿಗೆ ಮಾನಸಿಕ ಸಮಸ್ಯೆ ಇದ್ದುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

5–10% -ಯಾವುದೇ ವಯಸ್ಸಿನಲ್ಲೂ ಖಿನ್ನತೆಗೆ ಒಳಗಾಗುತ್ತಾರೆ

* 14ನೇ ವಯಸ್ಸಿಗೆ ಮುನ್ನವೇ ಕೆಲವರಲ್ಲಿ
ಶೇ 50ರಷ್ಟು ಮಾನಸಿಕ ಸಮಸ್ಯೆ ಶುರುವಾಗಿರುತ್ತವೆ

* 25ನೇ ವಯಸ್ಸಿಗೆ ಮುನ್ನ ಹೆಚ್ಚಿನವರಲ್ಲಿ ಖಿನ್ನತೆ ಪ್ರಮಾಣ
ಶೇ 75.

ವರ್ಷಕ್ಕೆ ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಖರ್ಚು ಮಾಡುತ್ತಿರುವ ಮೊತ್ತ

ಕಡಿಮೆ ಆದಾಯದ ದೇಶಗಳಲ್ಲಿ ₹ 14

ಶ್ರೀಮಂತ ದೇಶಗಳಲ್ಲಿ ₹ 3015

*****

ಮಾನಸಿಕ ಸಮಸ್ಯೆಗೆ ಕಾರಣ
ಬಾಹ್ಯ ಕಾರಣಗಳು

* ನಮ್ಮ ಸುತ್ತಮುತ್ತ : ಕಟ್ಟಡ ನಿರ್ಮಾಣ ಕಾರ್ಯ, ಮಾಲಿನ್ಯ, ಬೆಳಗುವ ದೀಪಗಳು, ವಿಪರೀತ ಹವಾಮಾನ ಇತ್ಯಾದಿ

* ಸಂಬಂಧಗಳು: ವಾದ– ಪ್ರತಿವಾದ, ದರ್ಪದ ವರ್ತನೆ, ಅವಹೇಳನ, ದಬ್ಬಾಳಿಕೆ

* ಕುಟುಂಬ ಸ್ನೇಹಿತರು, ಕಾರ್ಯಸ್ಥಳ: ನಿಯಮಾವಳಿ, ನಡವಳಿಕೆ ಬಗ್ಗೆ ಪೂರ್ವ ನಿರೀಕ್ಷೆ, ಒಡಹುಟ್ಟಿದವರ ನಡುವಿನ ಸಂಘರ್ಷ ಇತ್ಯಾದಿ

* ದಿನನಿತ್ಯದ ಸಮಸ್ಯೆ: ಪ್ರಯಾಣ, ಟ್ರಾಫಿಕ್, ಜನದಟ್ಟಣೆ, ಆಳುಗಳ ಗೈರು ಹಾಜರಿ

* ಜೀವನ ಘಟನೆಗಳು: ಹುಟ್ಟು ಸಾವು, ತಪ್ಪು ತಿಳಿವಳಿಕೆ,  ವರ್ಗಾವಣೆ ಆಂತರಿಕ ಕಾರಣ ನಮ್ಮ ಸ್ವಂತ ಧೋರಣೆಗಳೇ ನಮ್ಮ ಅಭಿವ್ಯಕ್ತಿ, ಸಾಮರ್ಥ್ಯಗಳಿಗೆ ಅಡಚಣೆ ಉಂಟುಮಾಡುತ್ತವೆ. ನಮ್ಮ ದೃಷ್ಟಿಕೋನ, ಆತ್ಮ ವಿಶ್ವಾಸದ ಕೊರತೆ ಅಥವಾ ಭಾವೋದ್ವೇಗ, ಹಟ ಮುಂತಾದವು.

* ನಕಾರಾತ್ಮಕ ಮನೋಭಾವ : ಕೀಳರಿಮೆ, ಅತಿ ಸೂಕ್ಷ್ಮತೆ, ವೈಯಕ್ತಿಕ ಮೌಲ್ಯಗಳ ಕೊರತೆ

* ವ್ಯಕ್ತಿತ್ವ : ನಿಷ್ಠುರ ಕಾರ್ಯವೈಖರಿ, ವಿಮರ್ಶೆ ಮತ್ತು ಸಲಹೆ ಸ್ವೀಕರಿಸದೇ ಇರುವುದು, ಅಂತರ್ಮುಖತೆ, ಅಹಂಕಾರ

* ಗ್ರಹಿಕೆ : ದೂಷಿಸುವುದು, ಇತರರನ್ನು ಪರಿವರ್ತಿಸುವ ಬಯಕೆ.

****
ಪರಿಹಾರಗಳು

*
ವಾಸ್ತವಿಕ ಪ್ರಜ್ಞೆ ಹೆಚ್ಚಿಸಿಕೊಳ್ಳುವುದು

* ಸಕಾರಾತ್ಮಕ ಧೋರಣೆ

* ಅಗತ್ಯ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳುವುದು

* ಆತ್ಮೀಯರಲ್ಲಿ ಕಷ್ಟ-ಸುಖ ಹಂಚಿಕೊಳ್ಳುವುದು

* ಸಮಸ್ಯೆ, ಜವಾಬ್ದಾರಿಗಳನ್ನು ಎದುರಿಸುವಾಗ  ಫಲಿತಾಂಶದ ಬಗ್ಗೆ ಚಿಂತೆ ಮಾಡದೇ ಇರುವುದು

* ಆರೋಗ್ಯಕರ ಮನರಂಜನಾ ಚಟುವಟಿಕೆಗಳಿಗಾಗಿ ಸ್ವಲ್ಪ ಹೊತ್ತನ್ನು ಮೀಸಲಾಗಿಡುವುದು

* ಹಿತಮಿತ ಆಹಾರ ಸೇವನೆ,  ವ್ಯಾಯಾಮ

* ವಿಶ್ವಾಸ ಪಾತ್ರರಾದ ಒಬ್ಬ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಮಾಡಿಸಿ, ಔಷಧಗಳ ದುರ್ಬಳಕೆ ತಪ್ಪಿಸುವುದು

*****
ಒತ್ತಡದಿಂದ ಆತ್ಮಹತ್ಯೆ
ಯುರೋಪಿಯನ್ ದೇಶಗಳಲ್ಲಿ ಆರ್ಥಿಕ ಕುಸಿತದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚು. 2011ರಲ್ಲಿ ಗ್ರೀಸ್‌ ಒಂದರಲ್ಲೇ ಶೇಕಡಾ 40 ರಷ್ಟು ಆತ್ಮಹತ್ಯೆ ಪ್ರಕರಣಗಳು ಕಂಡುಬಂದಿವೆ. ಆದರೆ ಏಷ್ಯಾ ಖಂಡದ ದೇಶಗಳಲ್ಲಿ ಪ್ರಮಾಣ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT