ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಟ್ ಮಿಂಚು: ಇಂಗ್ಲೆಂಡ್‌ ತಂಡಕ್ಕೆ ಜಯ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  ಜೋ ರೂಟ್‌ (48; 34ಎ, 3ಬೌಂ, 2ಸಿ) ಅವರ ಉತ್ತಮ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಮುಂಬೈ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 14ರನ್‌ನಿಂದ ಗೆದ್ದಿದೆ.

ಬ್ರೆಬೊರ್ನ್‌ ಮೈದಾನದಲ್ಲಿ ಸೋಮ ವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ಮೊದಲು ಬ್ಯಾಟ್‌ ಮಾಡಿ  20 ಓವರ್‌ಗಳಲ್ಲಿ 8 ವಿಕೆಟ್‌ಗೆ 177ರನ್‌ ಪೇರಿಸಿತು.ಗುರಿ ಬೆನ್ನಟ್ಟಿದ ಮುಂಬೈ ಇಲೆವೆನ್‌  6 ವಿಕೆಟ್‌ಗೆ 163ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಮುಂಬೈ ತಂಡದ ಡೇವಿಡ್‌ ವಿಲ್ಲಿ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಅವರು 20ನೇ ಓವರ್‌ನ 4, 5 ಮತ್ತು 6ನೇ ಎಸೆತಗಳಲ್ಲಿ ಕ್ರಮ ವಾಗಿ ಜೋ ರೂಟ್‌, ಮೋಯಿನ್‌ ಅಲಿ ಮತ್ತು ಕ್ರಿಸ್‌ ಜೋರ್ಡಾನ್‌ ಅವರ ವಿಕೆಟ್‌ ಉರುಳಿಸಿ ಗಮನಸೆಳೆದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌:  20 ಓವರ್‌ಗಳಲ್ಲಿ 8 ವಿಕೆಟ್‌ಗೆ 177 (ಜಾಸನ್‌ ರಾಯ್‌ 32, ಅಲೆಕ್ಸ್‌ ಹೇಲ್ಸ್‌ 37, ಜೋ ರೂಟ್‌ 48, ಬೆನ್‌ ಸ್ಟೋಕ್ಸ್‌ 30; ಡೇವಿಡ್‌ ವಿಲ್ಲಿ 35ಕ್ಕೆ3, ಶಾರ್ದೂಲ್‌ ಠಾಕೂರ್‌ 34ಕ್ಕೆ2, ಆದಿಲ್‌ ರಶೀದ್‌ 33ಕ್ಕೆ2).

ಮುಂಬೈ ಇಲೆವೆನ್‌:  20 ಓವರ್‌ಗಳಲ್ಲಿ 6 ವಿಕೆಟ್‌ಗೆ 163 (ಜೈ ಬಿಸ್ತಾ 51, ಶ್ರೇಯಸ್‌ ಅಯ್ಯರ್‌ 16, ಜೇಮ್ಸ್‌ ವಿನ್ಸ್‌ 45, ಜಾಸ್‌ ಬಟ್ಲರ್‌ 25; ರೀಸೆ ಟೊಪ್ಲೆ 26ಕ್ಕೆ2, ಕ್ರಿಸ್‌ ಜೋರ್ಡಾನ್‌ 34ಕ್ಕೆ2).ಫಲಿತಾಂಶ:  ಇಂಗ್ಲೆಂಡ್‌ಗೆ  14ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT