ನವದೆಹಲಿ (ಪಿಟಿಐ): ಲಲಿತ್ ಮೋದಿ ವೀಸಾ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದುವರಿಸಿರುವ ಮೌನದ ಬಗೆಗಿನ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್, ಪ್ರಧಾನಿ ಅವರು ಎಲ್ಲದಕ್ಕೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಸರಿಯಾದ ಸಮಯದಲ್ಲಿ ಅವರು ಮಾತನಾಡುತ್ತಾರೆ ಎಂದಿದ್ದಾರೆ.

‘ಅವರು ಮಾತನಾಡಬೇಕು–ಮಾತನಾಡಬೇಕು ಎಂದು ನೀವೆಲ್ಲ ಏಕೆ ಬಲವಂತ ಮಾಡುತ್ತೀರಿ? ಎಲ್ಲದಕ್ಕೂ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಕಾಲ ಬಂದಾಗ ಪ್ರಧಾನಿ ಅವರು ಮಾತನಾಡುತ್ತಾರೆ’ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಲಲಿತ್ ಮೋದಿ ವಿಷಯವಾಗಿ ವಿದೇಶಾಂಗ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯಡಿಯ ಅರ್ಜಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಪ್ರಶ್ನೆಗೆ, ಆರ್‌ಟಿಐಗೆ ಬದ್ಧವಾಗಿ ಸಚಿವಾಲಯ ಉತ್ತರ ನೀಡಿದೆ ಎಂದು ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.