ಕುವೈತ್ (ಐಎಎನ್ಎಸ್):  ಶುಕ್ರವಾರ ಇಲ್ಲಿನ ಷಿಯಾ ಮಸೀದಿ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಪೋಲಿಸರು ಶನಿವಾರ 18 ಮಂದಿ ಸಂಶಯಾಸ್ಪದ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಅಲ್–ಸವಾಬರ್ ಜಿಲ್ಲೆಯ ಮಸೀದಿಯಲ್ಲಿ ನೂರಾರು ಮಂದಿ ಷಿಯಾ ಮುಸ್ಲಿಮರು ಪ್ರಾರ್ಥನೆಯಲ್ಲಿ ತೊಡಗಿದ್ದ ವೇಳೆ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ 25 ಮಂದಿ ಮೃತಪಟ್ಟು 222ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಕುವೈತ್ ನಗರದ ಅಲ್–ಇಮಾಮ್–ಸಾದಿಕ್ ಮಸೀದಿಯಲ್ಲಿ ನಡೆದ ಈ ದಾಳಿಗೆ ತಾವೇ ಹೊಣೆ ಎಂದು ಐ.ಎಸ್ ಉಗ್ರರು ಹೇಳಿಕೊಂಡಿದ್ದರು. ಇದಕ್ಕೆ ಸಬಂಧಿಸಿದಂತೆ 18 ಮಂದಿಯನ್ನು ಬಂಧಿಸಲಾಗಿದೆ. ಶನಿವಾರ ಶೋಕ ದಿನವಾಗಿ ಘೋಷಿಸಲಾಗಿದೆ ಎಂದು ಕುವೈತ್ ಟೈಮ್ಸ್ ವರದಿ ಮಾಡಿದೆ.

‘ಉಗ್ರರ ದಾಳಿಯಿಂದ ಯಾವುದೇ ದೇಶ ವಿನಾಯ್ತಿ ಪಡೆದಿಲ್ಲ ಎನ್ನುವುದಕ್ಕೆ ಈ ದಾಳಿ ಉದಾಹರಣೆ’ ಎಂದು ಕುವೈತ್ನ ಮಾಜಿ ಮಾಹಿತಿ ತಂತ್ರಜ್ಞಾನ ಸಚಿವ ಸಾದ್ ಅಲ್ ಅಜ್ಮಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.