ನವದೆಹಲಿ: ನೇಪಾಳ ಭೂಕಂಪ ಸಂತ್ರಸ್ತರಿಗೆ ನೀಡಲು ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ಸಹೋದರ ಪತ್ರಿಕೆಗಳು ತಮ್ಮ ಓದುಗರು ಮತ್ತು ದಾನಿಗಳಿಂದ ಸಂಗ್ರಹಿಸಿದ ಎರಡು ಕೋಟಿ ರೂಪಾಯಿ ಪರಿಹಾರ ದೇಣಿಗೆ ಚೆಕ್‌ನ್ನು ಪ್ರಧಾನಿ ಕಚೇರಿಗೆ ಹಸ್ತಾಂತರಿಸಲಾಗಿದೆ.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ದೆಹಲಿ ಬ್ಯೂರೋ ಮುಖ್ಯಸ್ಥ ಶೇಖರ್ ಅಯ್ಯರ್ ಅವರು ಎರಡು ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಪ್ರಧಾನಿ ಕಚೇರಿ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಹಸ್ತಾಂತರಿಸಿದರು.

ನೇಪಾಳ ಭೂಕಂಪ ಸಂತ್ರಸ್ತರಿಗೆ ನೆರವು ನೀಡುವಂತೆ ಎರಡೂ ಪತ್ರಿಕೆಗಳು ಮಾಡಿದ ಮನವಿಗೆ ಸ್ಪಂದಿಸಿದ ಓದುಗರಿಂದ ನೆರವಿನ ಮಹಾಪೂರವೇ ಹರಿದು ಬಂದಿತ್ತು. ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್ ’ ಪತ್ರಿಕೆಗಳ ಆಡಳಿತ ಮಂಡಳಿ ತನ್ನ ದೇಣಿಗೆ ಸಹಿತ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಗೆ ಚೆಕ್ ಸಲ್ಲಿಸಿತು.

ಚೆಕ್ ಸ್ವೀಕರಿಸಿ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್, ‘ಪ್ರಜಾವಾಣಿ’ – ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಸಂತ್ರಸ್ತರ ನೆರವಿಗೆ ಧಾವಿಸುವ ಮೂಲಕ ಸಹೋದರ ಪತ್ರಿಕೆಗಳು ಮಾನವೀಯತೆ ಮೆರೆದಿವೆ. ಸರ್ಕಾರವೇ ಎಲ್ಲವನ್ನೂ ನಿಭಾಯಿಸಲು ಅಸಾಧ್ಯ. ಇಂಥ ಸಂಕಷ್ಟದ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಯೊಂದು ಸಕಾಲಿಕ ನೆರವು ನೀಡುವ ಮೂಲಕ ಹೊಸದೊಂದು ಪರಂಪರೆ ಹುಟ್ಟು ಹಾಕಿದೆ ಎಂದರು.

‘ಪ್ರಜಾವಾಣಿ’ –‘ಡೆಕ್ಕನ್ ಹೆರಾಲ್ಡ್ ’ ಮತ್ತು ಈ ಪತ್ರಿಕೆಗಳ ಓದುಗರ ನೆರವು ನಿಜಕ್ಕೂ ಶ್ಲಾಘನೀಯ ಎಂದು ಸಚಿವ ಸಿಂಗ್ ಹೊಗಳಿದರು. ಮಾಧ್ಯಮ ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ಆ ಜವಾಬ್ದಾರಿಯನ್ನು ಸಹೋದರ ಪತ್ರಿಕೆಗಳು ನಿರ್ವಹಿಸಿವೆ. ಈ ಹೆಜ್ಜೆ ಇತರ ಮಾಧ್ಯಮ ಸಂಸ್ಥೆಗಳಿಗೂ ಮಾದರಿಯಾಗಲಿ ಎಂದರು.

‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಆರಂಭಿಸಿದ ನೇಪಾಳ ಸಂತ್ರಸ್ತರ ಪರಿಹಾರ ನಿಧಿಗೆ ಓದುಗರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳಿಂದ ನೆರವಿನ ಮಹಾಪೂರ ಹರಿದು ಬಂದಿತ್ತು.

ಓದುಗರಿಗೆ ಧನ್ಯವಾದಗಳು: ಸಂತ್ರಸ್ತರು ಮತ್ತು ಅಸಹಾಯಕರ ನೆರವಿಗೆ ಇದು ನಮ್ಮ ಅಳಿಲು ಸೇವೆ. ನಮ್ಮ ಮನವಿಗೆ ಸ್ಪಂದಿಸಿದ ಸಾವಿರಾರು ಓದುಗರ ಅಭೂತಪೂರ್ವ ಸಹಕಾರದಿಂದ ಇದು ಸಾಧ್ಯವಾಯಿತು. ಪತ್ರಿಕೆಯ ಮನವಿಗೆ ಸ್ಪಂದಿಸಿ ಉದಾರವಾಗಿ ದೇಣಿಗೆ ನೀಡಿದ ಓದುಗರಿಗೆ ಧನ್ಯವಾದಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.