ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸೊಗಡು

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ


ಗ್ರಾಮೀಣ ಭಾಗದಲ್ಲಿ ಮರೆಯಾಗುತ್ತಿರುವ ಸಂಗೀತ ವಾದ್ಯ, ದನಗಾಹಿಗಳು, ಗ್ರಾಮೀಣ ಮಹಿಳೆಯರು ಮತ್ತು ಪ್ರಕೃತಿ ಸೌಂದರ್ಯ... ನಗರದಲ್ಲಿ ಈಗ ನಡೆಯುತ್ತಿರುವ ‘ಆರ್ಟ್ ಮಿರಾಕಲ್’ ಚಿತ್ರಕಲಾ ಪ್ರದರ್ಶನದಲ್ಲಿ ಕಂಡು ಬಂದ ಕಲಾಕೃತಿಗಳಿವು.

ಗದಗದ ವಿಜಯ ಕಲಾ ಮಂದಿರದಲ್ಲಿ ಉಪನ್ಯಾಸಕರಾಗಿರುವ ಜಮಖಂಡಿಯ ಗೋಳಭಾವಿ ಗ್ರಾಮದ ಕೆ.ಎಂ. ಕೃಷ್ಣ ಈ ಕಲಾಕೃತಿಗಳ ಸೃಷ್ಟಿಕರ್ತ. ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಜಲವರ್ಣದಲ್ಲಿ ಸೆರೆಹಿಡಿದರೆ, ಗ್ರಾಮೀಣ ಸೊಗಡನ್ನು ಅಕ್ರಿಲಿಕ್ ಮತ್ತು ತೈಲವರ್ಣದಲ್ಲಿ ಚಿತ್ರಿಸಿದ್ದಾರೆ.  ಹಲವು ಸಮೂಹ ಪ್ರದರ್ಶನ, ಕಲಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರ ಕಲಾಕೃತಿಗಳನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿ ಸಂಗ್ರಹಿಸಿಟ್ಟಿದೆ. ಪ್ರದರ್ಶನ ಶುಕ್ರವಾರ ಮುಕ್ತಾಯ. ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10ರಿಂದ 7.                                                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT