ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕರ ಆರೋಗ್ಯ ಸ್ಥಿರ

ಫುಟ್‌ಬಾಲ್‌ ತಂಡದ ವಿಡಿಯೊ ಬಿಡುಗಡೆ
Last Updated 4 ಜುಲೈ 2018, 19:34 IST
ಅಕ್ಷರ ಗಾತ್ರ

ಮಾಸೈ (ಥಾಯ್ಲೆಂಡ್‌): ಗುಹೆಯಲ್ಲಿ ಸಿಲುಕಿಕೊಂಡಿರುವ ‘ಥಾಯ್‌ ಯೂಥ್‌’ ಫುಟ್‌ಬಾಲ್ ತಂಡದ ಎಲ್ಲ 13 ಸದಸ್ಯರ ಆರೋಗ್ಯ ಸ್ಥಿತಿ ಉತ್ತಮವಾಗಿದೆ.

ಈ ಬಗ್ಗೆ ನೌಕಾಪಡೆ ’ಸೀಲ್‌’ ವಿಡಿಯೊ ಬಿಡುಗಡೆ ಮಾಡಿದ್ದು, ಬಾಲಕರು ನಗುತ್ತ ತಾವು ಚೆನ್ನಾಗಿರುವುದಾಗಿ ಹೇಳಿಕೆ ನೀಡಿರುವ ದೃಶ್ಯ ಇದರಲ್ಲಿದೆ.

11 ಬಾಲಕರು ತಮ್ಮನ್ನು ಪರಿಚಯಿಸಿಕೊಂಡು ‘ನನ್ನ ಆರೋಗ್ಯ ಉತ್ತಮವಾಗಿದೆ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಾಲಕ ಹಾಗೂ ಇವರ ಜತೆಗಿರುವ 25 ವರ್ಷದ ತರಬೇತುದಾರರ ಹೇಳಿಕೆಗಳು ವಿಡಿಯೊದಲ್ಲಿ ಇಲ್ಲ.

ಬಾಲಕರು ನಿರಾಳರಾಗಿದ್ದು, ಅತಿ ಹೆಚ್ಚು ಎಚ್ಚರದಿಂದ ಇರುವುದು ವಿಡಿಯೊದಲ್ಲಿದೆ. ಈ ತಂಡದ ಬಗ್ಗೆ ನೌಕಾಪಡೆ ಬಿಡುಗಡೆ ಮಾಡಿರುವ ಎರಡನೇ ವಿಡಿಯೊ ಇದಾಗಿದೆ. ಗುಹೆ ಹೊರಗೆ ಸೇರಿದ್ದ ಬಾಲಕನೊಬ್ಬನ ತಾಯಿ ಈ ವಿಡಿಯೊ ನೋಡಿ ರೋದಿಸಿದರು. ‘ಮಗನನ್ನು ನೋಡಿ ಖುಷಿಯಾಯಿತು. ಆದರೆ, ಅವನು ಸೊರಗಿದ್ದಾನೆ’ ಎಂದು ಅಳಲು ತೋಡಿಕೊಂಡರು.

ಮುಳುಗು ತಜ್ಞರನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಬಾಲಕರನ್ನು ಗುಹೆಯಿಂದ ಹೊರತರುವ ಬಗ್ಗೆ ವಿವಿಧ ರೀತಿಯ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ.

ಪ್ರವಾಹಕ್ಕೆ ಸಿಲುಕಿರುವ ಗುಹೆಯಿಂದ ಈಜಾಡುತ್ತ ಹೊರಗೆ ಬರುವುದು ಬಾಲಕರಿಗೆ ಕಷ್ಟಸಾಧ್ಯವಾಗಬಹುದು. ಗುಹೆ ಪ್ರದೇಶವು ಸಂಪೂರ್ಣ ಜಲಾವೃತಗೊಂಡಿದ್ದು, ಸುತ್ತಲೂ ಕೆಸರು ತುಂಬಿಕೊಂಡಿದೆ. ಹೀಗಾಗಿ, ಉತ್ತಮ ಉಪಕರಣಗಳನ್ನು ನೀಡಿದರೂ ಈಜಿ ಬರುವುದು ಕಷ್ಟಕರ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT