ಅಡಿಕೆ ಗೊನೆಗಳನ್ನು ರೋಟಿ ಸಹಾಯದಿಂದ ಕೀಳುವುದು ರೂಢಿ. ಕೀಳುವಾಗ ಕೆಳಗೆ ಟಾರ್ಪಲ್ ಅನ್ನು ಹೇಗೇ ಹಿಡಿದರೂ ಹಲವಾರು ಕಾಯಿಗಳು ಸಿಡಿದು ಕೆಳಗೆ ಬೀಳುತ್ತವೆ. ಈ ಕಾಯಿಗಳನ್ನು ಆರಿಸುವುದೂ ಪ್ರಯಾಸವೇ. ಇದರಿಂದ ಕಾಯಿಗಳ ನಷ್ಟವೂ ತಪ್ಪಿದ್ದಲ್ಲ. ಇದಕ್ಕೆ ಶಿವಮೊಗ್ಗ ಬಳಿಯ ಹೊಸಹಳ್ಳಿಯ ಕೃಷಿಕ ಸವ್ಯಸಾಚಿಯವರು ಸರಳ ವಿಧಾನ ಅಳವಡಿಸಿದ್ದಾರೆ. ಬೂಸದ ಚೀಲಗಳಷ್ಟು ಅಳತೆಯ ಎರಡು ಖಾಲಿ ಚೀಲ ಸೇರಿಸಿ ಒಂದೇ ಚೀಲವಾಗುವಂತೆ ಹೊಲಿಯಬೇಕು. ಇದರ ಕಂಠಕ್ಕೆ ಮೇಯ್‌ನ್ಸ್ ವೈರನ್ನು ವೃತ್ತಾಕಾರವಾಗಿ ಹೊಲಿಯಬೇಕು.
ಅಡಿಕೆ ಕೀಳುವಾಗ ಮರದ ಕೆಳಗೆ ಗೊನೆ ಬೀಳುವೆಡೆ ಒಬ್ಬರೇ ಹಿಡಿದು ನಿಂತರೂ ಸಾಕು. ಅಡಿಕೆ ಗೊನೆ ನೇರವಾಗಿ ಚೀಲದೊಳಗೆ ಬಿದ್ದಾಗ ಕಾಯಿಗಳು ಸಿಡಿದರೂ ಚೀಲದೊಳಗೆ ಉಳಿದಿರುತ್ತವೆ. ಚೀಲಗಳು ತುಸು ದಪ್ಪವಿದ್ದರಷ್ಟೆ ಬಾಳಿಕೆ. ಇಲ್ಲವಾದರೆ ಹರಿದು ಹೋಗುತ್ತವೆ. ಈ ರೀತಿ ಎರಡು ಚೀಲಗಳನ್ನು ಮಾಡಿಕೊಂಡರೆ ಒಂದು ತುಂಬಿದಾಗ ಅದನ್ನು ಖಾಲಿ ಮಾಡುವಷ್ಟರಲ್ಲಿ ಇನ್ನೊಂದನ್ನು ಬಳಸಬಹುದು. ಆರೇಳು ಮಂದಿಯ ಕೆಲಸವನ್ನು ಇಬ್ಬರೇ ಮಾಡಬಹುದು.
ಮಾಹಿತಿಗೆ ಆನಂದ್ ಎ.ಎಸ್. 8453663378.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.