ತೊಂಡೆ, ಮಾಗಿ ಅವರೆ, ಪಡುವಲ, ಹಾಗಲ, ಹೀರೆ, ತೊಂಡೆ, ಸೀಮೆಸೌತೆ ಇತ್ಯಾದಿ ತರಕಾರಿ ಬಳ್ಳಿಗಳನ್ನು ಸಾಮಾನ್ಯವಾಗಿ ಚಪ್ಪರದಲ್ಲಿ ಬೆಳೆಸಲಾಗುತ್ತದೆ. ಚಪ್ಪರಕ್ಕೆ ರಕ್ಷಣೆಯಾಗಿ ಗೂಟ ನೀಡಲಾಗುತ್ತದೆ. ಎತ್ತರದಲ್ಲಿ ಚಪ್ಪರ ಇದ್ದರೂ ಹಲವು ಸಲ ಅವುಗಳನ್ನು ಪ್ರಾಣಿಗಳು ತಿಂದು ಹಾಕುವ ಸಾಧ್ಯತೆ ಇದೆ. ಆದ್ದರಿಂದ ಈ ಬೆಳೆಗಳ ರಕ್ಷಣೆಗೆ ಸೀರೆ ಸಹಕಾರಿಯಾಗಬಲ್ಲದು. ಬಳ್ಳಿಯ ಸುತ್ತ ನೆಡುವ ಗೂಟಕ್ಕೆ ಹಳೆಯ ಸೀರೆ ಅಥವಾ ಪ್ಲಾಸ್ಟಿಕ್ ಚೀಲಗಳನ್ನು ಸುತ್ತಬೇಕು. ಈ ರೀತಿ ಮಾಡಿದರೆ ಪ್ರಾಣಿಗಳು ಹತ್ತಿರ ಸುಳಿಯುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.