ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಿಂದ ನಾಮಗೊಂಡ್ಲು ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಕಾಣುವ ತೋಟವೊಂದು ದಾರಿಹೋಕರಲ್ಲಿ ಅಚ್ಚರಿ ಮೂಡಿಸುತ್ತದೆ.
ಈ ಅಚ್ಚರಿಗೆ ಕಾರಣವಾಗುವುದು ದಿವಾಕರ್ ಚನ್ನಪ್ಪ ಅವರ ಖರ್ಜೂರದ ತೋಟ. ಮರಗಳ ಮೈ ತುಂಬಿದ ಬಲೆಗಳು, ಫಸಲನ್ನು ಮುಚ್ಚಿರುವ ಬಿಳಿ ಹೊದಿಕೆಗಳು ದಾರಿಹೋಕರ ಗಮನ ಸೆಳೆಯುತ್ತವೆ. ಮರಳುಗಾಡಿನಲ್ಲಿ ಬೆಳೆಯುವ ಖರ್ಜೂರವನ್ನು ಬಯಲು ಸೀಮೆಯ ಗೌರಿಬಿದನೂರಿನಲ್ಲಿಯೂ ಬೆಳೆದಿದ್ದಾರೆ ದಿವಾಕರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.