ADVERTISEMENT

ವೈನ್‌ ದ್ರಾಕ್ಷಿಯತ್ತ ಹೆಚ್ಚಿದ ರೈತರ ಒಲವು

ಕಲಾವತಿ ಬೈಚಬಾಳ
Published 16 ಜುಲೈ 2018, 19:30 IST
Last Updated 16 ಜುಲೈ 2018, 19:30 IST
   

ಬೆಂಗಳೂರು: ದ್ರಾಕ್ಷಿ ಉತ್ಪಾದನೆಯಲ್ಲಿವರ್ಷದಿಂದ ವರ್ಷಕ್ಕೆ ಏರಿಳಿತವಾಗುತ್ತಿದ್ದರೂ, ವೈನ್‌ ದ್ರಾಕ್ಷಿ ಉತ್ಪಾದನೆ‌ ಪ್ರಮಾಣ ಕ್ರಮೇಣ ಏರುತ್ತಲೇ ಇದೆ.

‘ಆರೋಗ್ಯ ಮತ್ತು ವಿದೇಶಿ ಜೀವನ ಶೈಲಿಯ ಮೊರೆ ಹೊಕ್ಕ ಯುವಜನತೆ ದ್ರಾಕ್ಷಾರಸ ಸೇವನೆಯತ್ತ ದಾಪುಗಾಲು ಇಡುತ್ತಿರುವುದು ವೈನ್‌ ದ್ರಾಕ್ಷಿಗೆ ಬೇಡಿಕೆ ಹೆಚ್ಚಲು ಕಾರಣವಾಗಿದೆ. ಹಾಗಾಗಿ ಈ ದ್ರಾಕ್ಷಿ ಬೆಳೆಯುವತ್ತ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ’ ಎಂದು ರಾಜ್ಯ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಮಾಹಿತಿ ನೀಡುತ್ತಾರೆ.

‘ವರ್ಷದ ಆರಂಭದಲ್ಲಿ ಶೀತಗಾಳಿ, ಪ್ರಖರ ಬಿಸಿಲು ಇಲ್ಲದೆ ಇದ್ದಿದ್ದರಿಂದ ದ್ರಾಕ್ಷಿ ಬೆಳೆ ಹೊಡೆತ ತಿಂದಿತ್ತು. ಕ್ರಮೇಣ ಸಮಯಕ್ಕೆ ಸರಿಯಾಗಿಬೆಳೆ ಕೈಸೇರಿದ್ದರಿಂದ ದ್ರಾಕ್ಷಾರಸ ಉತ್ಪಾದನೆಗೆ ಬೇಕಾದ ದ್ರಾಕ್ಷಿಯಲ್ಲಿ ಕೊರತೆಯೇನೂ ಉಂಟಾಗಿಲ್ಲ. ಈ ಬಾರಿ ವೈನ್‌ ದ್ರಾಕ್ಷಿಗೆ ಕಿಲೋಗೆ ₹60 ದರ ಸಿಕ್ಕಿದೆ’ ಎಂದೂ ಅವರು ವಿವರಿಸುತ್ತಾರೆ.

ADVERTISEMENT

ಆರೋಗ್ಯ ವೃದ್ಧಿ: ‘ನಿಯಮಿತವಾಗಿ ವೈನ್‌ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಅದರಲ್ಲಿ ಸಾರಜನಕ, ರಂಜಕ, ಪೊಟ್ಯಾಷಿಯಂ, ಮ್ಯಾಗ್ನೇಷಿಯಂ, ಕ್ಯಾಲ್ಸಿಯಂ (ಪ್ರಧಾನ ಪೋಷಕಾಂಶಗಳು), ಕಬ್ಬಿಣ, ಸತು, ಮ್ಯಾಂಗನೀಸ್‌, ಕ್ಲೋರಿನ್‌ (ಲಘು ಪೋಷಕಾಂಶಗಳು) ಸತ್ವಗಳಿರುವುದರಿಂದ ವೈನ್‌ ಸೇವನೆ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ’ ಎನ್ನುತ್ತಾರೆ ಆಹಾರ ತಜ್ಞ ಕೆ.ಸಿ.ರಘು.

ಇಲಾಖೆ ಮಧ್ಯಸ್ಥಿಕೆ ವಹಿಸಲಿ: ‘ವೈನ್‌ ದ್ರಾಕ್ಷಿ ಬೆಳೆಗೆ ಬೇಡಿಕೆ ಹೆಚ್ಚಾಗಿದ್ದು, ಇಲಾಖೆ ಸಮಯಕ್ಕೆ ಸರಿಯಾಗಿ ರೈತರಿಗೆ ಉತ್ತಮ ಮಾಹಿತಿ, ಹೊಸ ತಂತ್ರಜ್ಞಾನಗಳ ಬಗೆಗೆ ಹೆಚ್ಚಿನ ಮಾಹಿತಿ ನೀಡಬೇಕು. ಬೆಳೆಗಾರರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಇಲಾಖೆ ಹೆಚ್ಚು ಮಧ್ಯಸ್ಥಿಕೆ ವಹಿಸಿದ್ದಲ್ಲಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಂತಾಗುತ್ತದೆ’ ಎಂದು ಚಿಕ್ಕೋಡಿಯ ದ್ರಾಕ್ಷಿ ಬೆಳೆಗಾರ ದಾದಾ ಪಾಟೀಲ ಹೇಳುತ್ತಾರೆ.

* ಪಾಶ್ಚಾತ್ಯ ಜೀವನ ಶೈಲಿ ರೂಢಿಸಿಕೊಳ್ಳುತ್ತಿರುವ ಯುವಕರು ಹೆಚ್ಚು ವೈ‌ನ್‌ ಸೇವನೆ ಮಾಡುತ್ತಿರುವುದರಿಂದ ರೈತರು ಈ ಬೆಳೆಗೆ ಒತ್ತು ನೀಡುತ್ತಿದ್ದಾರೆ
-ಸರ್ವೇಶ, ಪ್ರಧಾನ ವ್ಯವಸ್ಥಾಪಕ, ದ್ರಾಕ್ಷಾರಸ ಮಂಡಳಿ

*ಸರ್ಕಾರ ಮದ್ಯದ ದರ ಹೆಚ್ಚಿಸಿದ್ದರೂ, ವೈನ್‌ ದರದಲ್ಲೇನು ‌ಏರಿಳಿತ ಆಗುವುದಿಲ್ಲ. ದರ ಸ್ಥಿರವಾಗಿಯೇ ಇರಲಿದೆ
- ಟಿ. ಸೋಮು, ವ್ಯವಸ್ಥಾಪಕ ನಿರ್ದೇಶಕ, ದ್ರಾಕ್ಷಾರಸ ಮಂಡಳಿ

ಒಟ್ಟು ದ್ರಾಕ್ಷಿ ಬೆಳೆಯುವ ಜಿಲ್ಲೆಗಳು;18

ಒಟ್ಟು ವಿಸ್ತೀರ್ಣ;23,350 ಹೆಕ್ಟೇರ್‌

ಒಟ್ಟು ಉತ್ಪನ್ನ; 4,45,517 ಟನ್‌

ಇಳುವರಿ;19.08

ಮೌಲ್ಯ: ₹72,400 ಲಕ್ಷ

***

ವರ್ಷದಲ್ಲಿ ಅತಿ ಹೆಚ್ಚು ದ್ರಾಕ್ಷಾರಸ ಸೇವಿಸುವ ರಾಷ್ಟ್ರಗಳ ಸಾಲಿನಲ್ಲಿ ಭಾರತ 6ನೇ ಸ್ಥಾನದಲ್ಲಿದೆ

(2012ರ ವರದಿ).

ವರ್ಷದಲ್ಲಿಒಬ್ಬ ವ್ಯಕ್ತಿ ಸೇವಿಸುವ ದ್ರಾಕ್ಷಾರಸದ ಪ್ರಮಾಣ (ಲೀಟರ್‌ಗಳಲ್ಲಿ) 0.06–0.07

********

ವೈನ್‌ದ್ರಾಕ್ಷಿ ಬೆಳೆಯುವಪ್ರದೇಶ ಮತ್ತು ವಿಸ್ತೀರ್ಣ

ಜಿಲ್ಲೆ; ವಿಸ್ತೀರ್ಣ(ಹೆಕ್ಟೇರ್‌ಗಳಲ್ಲಿ);ಉತ್ಪನ್ನ(ಟನ್‌ಗಳಲ್ಲಿ)

ವಿಜಯಪುರ;190;3,800

ಮೈಸೂರು;145;1,160

ಬೆಂಗಳೂರು ಗ್ರಾಮಾಂತರ;81;432

ಬಾಗಲಕೋಟೆ;65;545

ಬೆಳಗಾವಿ;22;330

ಕೊಪ್ಪಳ;16;256

ಬೀದರ್‌;15;270

ಯಾದಗಿರಿ;4;60

ಚಿಕ್ಕ ಬಳ್ಳಾಪುರ;3;45

ಒಟ್ಟು;541;6,898

******
ರಾಜ್ಯದಲ್ಲಿ ದ್ರಾಕ್ಷಾರಸ ಮಾರಾಟದ ಅಂಕಿಅಂಶ (ಮಾಹಿತಿ– ರಾಜ್ಯ ಪಾನೀಯ ನಿಗಮ)

2007–08;2008–09;2009–10;2010–11;2011–12;2012–13;2013–14;2014–15;2015–16;

ಮಾರಾಟ(ಲಕ್ಷ ಲೀಟರ್‌ಗಳಲ್ಲಿ); 13.72;14.79;22.93;26.85;35.2;40.71;51;63.08;47.00

ಒಟ್ಟು ಆದಾಯ(ಕೋಟಿ ರೂಗಳಲ್ಲಿ); 0.00; 0.00; 60.01;74.94;95.94;114.9;150;178;200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.